Asianet Suvarna News Asianet Suvarna News

ನಟ ದರ್ಶನ್‌ ಜೈಲಿನಿಂದಲೇ ವಿಡಿಯೋ ಕಾಲ್‌: ಐಷಾರಾಮಿ ಜೀವನಕ್ಕೆ ಮತ್ತಷ್ಟು ಸಾಕ್ಷಿ!

ನಟ ದರ್ಶನ್ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂಬುದಕ್ಕೆ ಹೊಸ ವಿಡಿಯೋ ಸಾಕ್ಷಿಯಾಗಿದೆ. ಜೈಲಿನಿಂದಲೇ ವಿಡಿಯೋ ಕಾಲ್ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ.

Renukaswamy murder case accused Actor Darshan video call from jail to outside fan sat
Author
First Published Aug 25, 2024, 8:20 PM IST | Last Updated Aug 25, 2024, 9:12 PM IST

ಬೆಂಗಳೂರು (ಆ.25): ನಟ ದರ್ಶನ್ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿದ್ದರೂ ಐಷಾರಾಮಿ ಜೀವನ ಮಾಡುತ್ತಿದ್ದಾನೆ ಎಂಬುದಕ್ಕೆ ಮತ್ತಷ್ಟು ವಿಡಿಯೋ ಸಾಕ್ಷಿಗಳು ಲಭ್ಯವಾಗಿವೆ. ಜೈಲಿನಲ್ಲಿದ್ದರೂ ಮೊಬೈಲ್‌ನ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿರುವ ವಿಡಿಯೋ ಲಭ್ಯವಾಗಿದೆ.

ಈಗಾಗಲೇ ನಟ ದರ್ಶನ್ ಜೈಲಿನಲ್ಲಿ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗನೊಂದಿಗೆ ಕುಳಿತು ಕಾಫಿ ಹೀರುತ್ತಾ, ಕೈಯಲ್ಲಿ ಸಿಗರೇಟ್ ಹಿಡಿದು ಸೇದುತ್ತಿರುವ ಫೋಟೋ ವೈರಲ್ ಆಗಿತ್ತು. ಈ ಸುದ್ದಿಯನ್ನು ಸುವರ್ಣ ನ್ಯೂಸ್‌ನಿಂದ ಮೊದಲ ಬಾರಿಗೆ ಬಿತ್ತರಿಸಿತ್ತು. ಈಗ ಸುವರ್ಣ ನ್ಯೂಸ್‌ಗೆ ಮತ್ತೊಂದು ವಿಡಿಯೋ ಲಭ್ಯವಾಗಿದೆ. ಜೈಲಿನಲ್ಲಿ ಮೊಬೈಲ್, ಫೋನ್ ಯಾವುದನ್ನೂ ಬಳಸಲು ಅವಕಾಶ ಇಲ್ಲದಿದ್ದರೂ ಜೈಲಿನಲ್ಲಿದ್ದುಕೊಂಡೇ ಮೊಬೈಲ್‌ನಲ್ಲಿ ವಿಡಿಯೋ ಕಾಲ್ ಮೂಲಕ ಹೊರಗಿನವರೊಂದಿಗೆ ಮಾತನಾಡಿದ್ದಾರೆ. ದರ್ಶನ್ ಜೈಲಿನಲ್ಲಿದ್ದುಕೊಂಡೇ ಹೊರಗಿನವರ ಜೊತೆಗೆ ನಗು ನಗುತ್ತಾ ಮಾತನಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.

ಜೈಲಲ್ಲಿರೋ ದರ್ಶನ್‌ಗೆ ರಾಜಾತಿಥ್ಯ ಕೊಡೋ ವಿಲ್ಸನ್ ಗಾರ್ಡನ್ ನಾಗ ಯಾರು? ಈತನ ಕ್ರೈಂ ಹಿಸ್ಟರಿ ಗೊತ್ತಾ.!

ಜೈಲಿನಲ್ಲಿರುವ ನಟ ದರ್ಶನ್ ಜೊತೆಗೆ ಇನ್‌ಸ್ಟಾಗ್ರಾಂ ವಿಡಿಯೋ ಕಾಲ್ ಮೂಲಕ ಮಾತನಾಡಿದ ಆತನ ಆಪ್ತ ಅದರ ತುಣುಕನ್ನು ಮೊಬೈಲ್‌ನ ಸ್ಟೇಟಸ್‌ಗೆ ಹಾಕಿಕೊಂಡಿದ್ದಾನೆ. ನಂತರ ಅದನ್ನು ಎಚ್ಚೆತ್ತುಕೊಂಡು ಡಿಲೀಟ್ ಮಾಡಿದ್ದಾನೆ. ಆದರೆ, ಅಷ್ಟರೊಳಗೆ ಆ ವಿಡಿಯೋ ಸಂಗ್ರಹ ಮಾಡಿಕೊಂಡಿದ್ದು, ಅದು ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಇನ್ನು ವಿಐಪಿ ಸೆಲ್‌ನಲ್ಲಿರುವ ನಟ ದರ್ಶನ್‌ಗೆ ಐಷಾರಾಮಿ ವ್ಯವಸ್ಥೆ ಲಭ್ಯವಾಗುತ್ತಿದೆ ಎಂಬುದಕ್ಕೆ ಇಂದಿನ ಫೋಟೋ ಮತ್ತು ವಿಡಿಯೋಗಳೇ ಸಾಕ್ಷಿಯಾಗಿವೆ. 

ಸಹ ಕೈದಿಯಿಂದ ವಿಡಿಯೋ ಕಾಲ್: ಜೈಲಿನಲ್ಲಿರುವ ನಟ ದರ್ಶನ್ ಮೊಬೈಲ್ ಪೋನ್ ಉಪಯೋಗಿಸುತ್ತಿಲ್ಲ. ಆದರೆ, ಆತನ ಸಹ ಕೈದಿಗಳು ಮೊಬೈಲ್‌ ಫೋನ್‌ಗಳನ್ನು ಇಟ್ಟುಕೊಂಡು ಮನೆಯವರೊಂದಿಗೆ ಮಾತನಾಡುತ್ತಾ ಹಾಯಾಗಿದ್ದಾರೆ. ಅದೇ ರೀತಿ ಮೊಬೈಲ್ ಇಟ್ಟುಕೊಂಡಿರುವ ಕೈದಿಯೊಬ್ಬ ತನ್ನ ಆಪ್ತರೊಂದಿಗೆ ಮಾತನಾಡಲು ಇನ್‌ಸ್ಟಾಗ್ರಾಮ್ ವಿಡಿಯೋ ಕಾಲ್ ಮಾಡಿದ್ದಾನೆ. ಆಗ ನಟ ದರ್ಶನ್ ಕೂಡ ಜೈಲಿನಲ್ಲಿದ್ದು, ಅವರೊಂದಿಗೆ ಮಾತನಾಡಿ ಬಾಸ್ ಎಂದು ಮಾತನಾಡಿಸಿದ್ದಾರೆ. ಆಗ ದರ್ಶನ್ ಜೈಲಿನಲ್ಲಿ ಸಹ ಕೈದಿ ಮಾತಿಗೆ ಕಟ್ಟುಬಿದ್ದು ಅಭಿಮಾನಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾನೆ. ಇನ್ನು ದರ್ಶನ್ ಕೂಡ ಆಗಾಗ ಸಹ ಕೈದಿಗಳ ಬಳಿಯಿರುವ ಫೋನ್‌ಗಳಿಂದ ಹೊರಗಿರುವವರ ಜೊತೆಗೆ ಮಾತನಾಡುತ್ತಾ ಹಾಯಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. 

Latest Videos
Follow Us:
Download App:
  • android
  • ios