Asianet Suvarna News Asianet Suvarna News

ಜೈಲಲ್ಲಿರೋ ದರ್ಶನ್‌ಗೆ ರಾಜಾತಿಥ್ಯ ಕೊಡೋ ವಿಲ್ಸನ್ ಗಾರ್ಡನ್ ನಾಗ ಯಾರು? ಈತನ ಕ್ರೈಂ ಹಿಸ್ಟರಿ ಗೊತ್ತಾ.!

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ರಾಜಾತಿಥ್ಯ ನೀಡುತ್ತಿರುವ ರೌಡಿ ವಿಲ್ಸನ್ ಗಾರ್ಡನ್ ನಾಗನ ಹಿನ್ನೆಲೆ ಗೊತ್ತಾ.? ಇಲ್ಲಿದೆ ಆತನ ಕ್ರೈಂ ಹಿಸ್ಟರಿ...

who is Wilson garden Naga very close to darshan thoogudeepa in Parappana Agrahara Jail sat
Author
First Published Aug 25, 2024, 6:56 PM IST | Last Updated Aug 25, 2024, 6:56 PM IST

ಬೆಂಗಳೂರು (ಆ.25): ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿರುವ ನಟ ದರ್ಶನ್ ನರಕ ಅನುಭವಿಸುತ್ತಿದ್ದಾನೆ ಎಂದು ಎಲ್ಲರೂ ಊಹಿಸಿದ್ದರು. ಆದರೆ, ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಕೊಲೆ ಆರೋಪಿ ದರ್ಶನ್‌ಗೆ ಭರ್ಜರಿ ರಾಜಾತಿಥ್ಯವನ್ನು ನೀಡಿದ್ದಾನೆ. 

ನಾವು, ನೀವೆಲ್ಲರೂ ಜೈಲು ಎನ್ನುವುದನ್ನು ನರಕ ಎಂದು ಕೇಳಿರುತ್ತೇವೆ, ಬದಲಿಯಾಗಿ ಸಿನಿಮಾದಲ್ಲಿ ನೋಡಿದ್ದೇವೆ. ಆದರೆ, ಬೆಂಗಳೂರಿನ ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ ಅನುಭವಿಸುತ್ತಿರುವ ರಾಜಾತಿಥ್ಯವನ್ನು ನೋಡಿದರೆ, ಜೈಲಿನ ಬಗ್ಗೆ ಇರುವ ಕಲ್ಪನೆಯೇ ಸುಳ್ಳು ಎಂಬುದು ಗೊತ್ತಾಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೆಂಗಳೂರನ್ನೇ ನಡುಗಿಸಿದ 8 ಕೊಲೆ ಕೇಸುಗಳ ಎ1 ಆರೋಪಿ ಜೊತೆಗೆ ನಟ ದರ್ಶನ್ ನಗಾಡುತ್ತಾ ಧಮ್ ಮಾರೋ ಧಮ್... ಎಂದು ಮಜಾ ಮಾಡುತ್ತಿದ್ದಾನೆ.

ಬೆಂಗಳೂರಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಕಳೆದ 20 ವರ್ಷಗಳಿಂದ ಕೊಲೆ, ಸುಲಿಗೆ, ಆಫ್ ಮರ್ಡರ್, ಬೆದರಿಕೆ ಸೇರಿದಂತೆ ಹಲವು ಅಪರಾಧಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿ ನಂತರ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಬಹುಪಾಲು ದಿನಗಳನ್ನು ಕಳೆದಿದ್ದಾನೆ. ಇನ್ನು ಬೆಂಗಳೂರಿನ ಸೆಂಟ್ರಲ್ ಜೈಲು ರೌಡಿ ನಾಗನಿಗೆ ಮಾವನ ಮನೆಯಾಗಿದೆ. ಮುಖ್ಯವಾಗಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ವಿಲ್ಸನ್ ಗಾರ್ಡನ್ ನಾಗ ತಾಜಾ ಉದಾಹರಣೆ ಆಗಿದ್ದಾನೆ. ಜೈಲಿನಲ್ಲಿದ್ದುಕೊಂಡೇ ತನ್ನ ಶಿಷ್ಯರನ್ನು ಬಿಟ್ಟು ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡಿಸುತ್ತಿದ್ದಾನೆ ಎಂಬ ಮಾಹಿತಿಯಿದೆ. ಇಂತಹ ನಟೋರಿಯಸ್ ರೌಡಿಯ ಜೊತೆಗೆ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಭರ್ಜರಿಯಾಗಿ ಮಜಾ ಮಾಡುತ್ತಿದ್ದಾನೆ.

ನಟೋರಿಯಸ್‌ ರೌಡಿ ಜತೆ ವಿಗ್‌ ಇಲ್ಲದ ದರ್ಶನ್‌ ಜೈಲಲ್ಲಿ ಧಮ್ ಹೊಡೆಯೋ ಫೋಟೋ ಲೀಕ್‌ ಆಗಿದ್ದೇಗೆ?

ಇಲ್ಲಿದೆ ನೋಡಿ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗನ ಕ್ರೈಂ ಹಿಸ್ಟರಿ:

  • 2023 ರ ಆಗಸ್ಟ್ ತಿಂಗಳಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿದ್ದಾಪುರ ರೌಡಿಶೀಟರ್ ಮಹೇಶನ ಹತ್ಯೆ. ಜೈಲಿನಿಂದ ಮಹೇಶ ರಿಲೀಸ್ ಆಗಿ ಹೊರಬರ್ತಿದ್ದಂತೆ ನಾಗನ ಸಹಚರರಿಂದ ಜೈಲು ಮುಂಭಾಗದಲ್ಲೆ ಮಹೇಶನ ಹತ್ಯೆ. ಸದ್ಯ ಮಹೇಶನ ಹತ್ಯೆ ಕೇಸ್ ನಲ್ಲಿ ವಿಲ್ಸನ್ ಗಾರ್ಡನ್ ನಾಗ ಅರೆಸ್ಟ್ ಆಗಿ ಜೈಲುವಾಸ ಅನುಭವಿಸುತ್ತಿದ್ದಾರೆ. 
  • 2021 ರಲ್ಲಿ ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ಎನ್.ಡಿ.ಪಿ.ಎಸ್ ಅಡಿ ಪ್ರಕರಣ (ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ.)
  • 2020 ರಲ್ಲಿ ಚನ್ನರಾಯಪಟ್ಟಣದ ಹಿರಿಸಾವೆ ಬಳಿ ಶಾಂತಿನಗರ ಲಿಂಗನ ಕೊಲೆಕೇಸ್. ನಾಗ ಸೇರಿ 12 ಮಂದಿ ಸಹಚರರ ವಿರುದ್ದ ಕೊಲೆ ಕೇಸ್ (ಸದ್ಯ ಪ್ರಕರಣ ಖುಲಾಸೆಯಾಗಿದೆ)
  • 2020 ರಲ್ಲಿ ಅನ್ನಪೂರ್ಣೇಶ್ವರಿನಗರದ ಜಿಮ್ ಸುಬ್ಬು ಕೊಲೆ ಕೇಸ್. ನಾಗ ಸೇರಿ 7 ಮಂದಿ ಸಹಚರರ ವಿರುದ್ದ ಕೊಲೆ ಕೇಸ್. (ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ)
  • 2017 ರಲ್ಲಿ ಕಡಬಗೆರೆ ಶ್ರೀನಿವಾಸ್ ಮೇಲೆ ಯಲಹಂಕದಲ್ಲಿ ಶೂಟೌಟ್ ಕೇಸ್. ವಿಲ್ಸನ್ ಗಾರ್ಡನ್ ನಾಗ, ಸೈಲೆಂಟ್ ಸುನೀಲ, ಒಂಟೆ ರೋಹಿತ ಸೇರಿ 17 ಸಹಚರರ ವಿರುದ್ದ ಪ್ರಕರಣ. (ಪ್ರಕರಣ ನ್ಯಾಯಾಲಯದಲ್ಲಿದೆ)
  • 2016 ರಲ್ಲಿ ವೈಟ್ ಫೀಲ್ಡ್ ನಲ್ಲಿ ಸುಹೇಲ್ ಕೊಲೆ ಕೇಸ್. ನಾಗ ಸೇರಿ 16 ಮಂದಿ ಸಹಚರರ ವಿರುದ್ದ ಕೊಲೆ ಕೇಸ್. (ಪ್ರಕರಣ ನ್ಯಾಯಾಲಯದಲ್ಲಿದೆ)
  • 2014 ರಲ್ಲಿ ಮಡಿವಾಳದ ನಕರಬಾಬು ಕೊಲೆ ಕೇಸ್. ಐಪಿಸಿ 302 ಅಡಿ ಕೇಸ್. ನಾಗ ಸೇರಿ 21 ಸಹಚರರ ವಿರುದ್ದ ಕೇಸ್. (ಪ್ರಕರಣ ನ್ಯಾಯಾಲಯದಲ್ಲಿದೆ)
  • 2014 ರಲ್ಲಿ ವಿಲ್ಸನ್ ಗಾರ್ಡನ್ ನಲ್ಲಿ ಶ್ರೀನಿವಾಸ್ ಎಂಬುವವರ ಕೊಲೆ ಕೇಸ್. ಐಪಿಸಿ 302 ಅಡಿ ನಾಗ ಸೇರಿ 10 ಮಂದಿ ಸಹಚರರ ವಿರುದ್ದ ಕೇಸ್. (ಸದ್ಯ ಕೇಸ್ ಖುಲಾಸೆಯಾಗಿದೆ)
  • 2014 ರಲ್ಲಿ ವಿಲ್ಸನ್ ಗಾರ್ಡನ್ ಠಾಣೆ ಯಲ್ಲಿ ಐಪಿಸಿ 399, 402 ಅಡಿ ದರೋಡೆ ಕೇಸ್. ನಾಗ ಸೇರಿ ಐವರು ಸಹಚರರ ಬಂಧನ (ಕೇಸ್ ಖುಲಾಸೆಯಾಗಿದೆ)
  • 2012 ರಲ್ಲಿ ಕಾಟನ್ ಪೇಟೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಗುಪ್ಪನ ಕೊಲೆ. ಐಪಿಸಿ 302 ಅಡಿ ಕೊಲೆ ಕೇಸ್ ದಾಖಲು. ನಾಗ ಸೇರಿ 6 ಮಂದಿ ಸಹಚರರ ಬಂಧನ (ಕೇಸ್ ಖುಲಾಸೆಯಾಗಿದೆ)
  • 2012 ರಲ್ಲಿ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐಪಿಸಿ 399,402 ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಸಂಚು ಕೇಸ್ ನಲ್ಲಿ ಭಾಗಿ. ನಾಗ ಸೇರಿ ಮೂವರು ಸಹಚರರ ಬಂಧನ. (ಸದ್ಯ ಕೇಸ್ ಖುಲಾಸೆಯಾಗಿದೆ)
  • 2012 ರಲ್ಲಿ ವಿಲ್ಸನ್ ಗಾರ್ಡನ್ ಠಾಣೆ ವ್ಯಾಪ್ತಿಯಲ್ಲಿ ಐಪಿಸಿ 324 ಕೇಸ್ ದಾಖಲು. ಮಣಿ ಎಂಬುವವನ ಮೇಲೆ ಮಾರಣಾಂತಿಕ ಹಲ್ಲೆ. ನಾಗ ಹಾಗೂ ಸಹಚರ ಶ್ರೀನಿವಾಸ್ ಬಂಧನ. (ಕೇಸ್ ಖುಲಾಸೆಯಾಗಿದೆ)
  • 2012 ರಲ್ಲಿ ಸಿದ್ದಾಪುರದಲ್ಲಿ ಮುರಳಿ ಎಂಬಾತನ ಕಿಡ್ನಾಪ್ ಕೇಸ್. ಐಪಿಸಿ 364A ಅಡಿ ಕೇಸ್ ದಾಖಲಾಗಿ. ನಾಗ ಸೇರಿ ನಾಲ್ವರ ಬಂಧನ. (ಸದ್ಯ ಕೇಸ್ ಖುಲಾಸೆಯಾಗಿದೆ.)
  • 2012 ರಲ್ಲಿ ಮಾಗಡಿರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಕಾಯಿತಿ. ನಾಗ ಸೇರಿ ಐದು ಜನ ಸಹಚರರ ಬಂಧನವಾಗಿತ್ತು. (ಸದ್ಯ ಕೇಸ್ ಖುಲಾಸೆಯಾಗಿದೆ)
  • 2009 ರಲ್ಲಿ ಕಲಾಸಿಪಾಳ್ಯದಲ್ಲಿ ಗೇಟ್ ಗಣೇಶ್ ಕೊಲೆ ಕೇಸ್. ನಾಗ ಸೇರಿ ಆತನ 14 ಜನ ಸಹಚರರ ಬಂಧನವಾಗಿತ್ತು. (ಸದ್ಯ ಕೇಸ್ ಖುಲಾಸೆಯಾಗಿದೆ)
  • 2005 ರಲ್ಲಿ ಆಡುಗೋಡಿ, ಎಸ್.ಆರ್.ನಗರ, ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ಐಪಿಸಿ 379 ಅಡಿಯಲ್ಲಿ  6 ವಾಹನ ಕಳವು ಪ್ರಕರಣಗಳಲ್ಲಿ ಭಾಗಿ. (ಸದ್ಯ ಈ ಕೇಸ್ ಖುಲಾಸೆಯಾಗಿದೆ)
  • 2004 ರಲ್ಲಿ ಮೊದಲ ಬಾರಿಗೆ ಸಿದ್ದಾಪುರ ಠಾಣೆ ವ್ಯಾಪ್ತಿಯಲ್ಲಿ ಐಪಿಸಿ 392 ರಾಬರಿ ಕೇಸ್ ನಲ್ಲಿ ಭಾಗಿಯಾಗ್ತಾನೆ. (ಸದ್ಯ ಕೇಸ್ ಖುಲಾಸೆಯಾಗಿದೆ)

ರೌಡಿ ವಿಲ್ಸನ್‌ ಗಾರ್ಡನ್ ನಾಗನ ಜತೆ ಜೈಲಲ್ಲಿ ದರ್ಶನ್‌ ಸಿಗರೇಟ್‌ ಸೇದುವ ಫೋಟೋ ವೈರಲ್!

ಒಟ್ಟಾರೆ ವಿಲ್ಸನ್ ಗಾರ್ಡನ್ ನಾಗನ ಹೆಸರಿನಲ್ಲಿ 23 ಅಪರಾಧ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 8 ಕೊಲೆ ಕೇಸಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಎ1 ಆರೋಪಿಯಾಗಿದ್ದಾನೆ. ಆದರೆ, ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸೆಂಟ್ರಲ್ ಜೈಲು ಸೇರಿದ ನಟ ದರ್ಶನ್ ಕೂಡ ನಾಗನೊಂದೊಗೆ ಸೇರಿಕೊಂಡು ಮಜಾ ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ಸಮಾಜ ತಿದ್ದುವ, ಪೊಲೀಸರ ವೇಶದಲ್ಲಿ ಸಮಾಜ ಕಾಯುವ, ಯೋಧರ ವೇಶದಲ್ಲಿ ದೇಶ ಕಾಯುವ ಪಾತ್ರಗಳನ್ನು ಮಾಡಿದ ದರ್ಶನ್‌ಗೆ ನೈತಿಕತೆ, ಆತ್ಮಸಾಕ್ಷಿ ಇದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.

Latest Videos
Follow Us:
Download App:
  • android
  • ios