ಸಂಸಾರ ಹಾಳು ಮಾಡಿದ್ದ ಕೋಪ, ಬೆಂಗಳೂರಲ್ಲಿ ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ಅಟ್ಯಾಕ್!

* ಬೆಂಗಳೂರಲ್ಲಿ ಮಹಿಳೆ ಮೇಲೆ ಆ್ಯಸಿಡ್ ಅಟ್ಯಾಕ್

* ಮಾ.18 ರಂದು ನಡೆದಿದ್ದ ಆ್ಯಸಿಡ್ ಅಟ್ಯಾಕ್

* ದೇವಿ ಎಂಬ ಮಹಿಳೆಯ‌ ಮೇಲೆ ಆ್ಯಸಿಡ್ ಅಟ್ಯಾಕ್

Acid Attack On Theatre Artisyt Devi In Bengaluru

ಬೆಂಗಳೂರು(ಮಾ.20): ತನ್ನ ಸಂಸಾರ ಹಾಳು ಮಾಡಿದ್ದಾಳೆಂಬ ಕಾರಣಕ್ಕೆ ಮಹಿಳೆಯೊಬ್ಬಳ ಮೇಲೆ ಆಸಿಡ್ ದಾಳಿ ನಡೆಸಿರುವ ಪ್ರಕರಣ ಬೆಂಗಳೂರಿನ ನಂದಿನಿ ಲೇಔಟ್ ನ ಗಣೇಶ ಬ್ಲಾಕ್‌ನಲ್ಲಿ ನಡೆದಿದೆ. ದಾಳಿಗೊಳಗಾದ ಸಂಸತ್ರಸ್ತೆಯನ್ನು ರಂಗಭೂಮಿ ಕಲಾವಿದೆ ದೇವಿ ಎಂದು ಗುರುತಿಸಲಾಗಿದೆ. 

ಮಾ. 18ರಂದು ದೇವಿ ಮನೆಯ ಜಗುಲಿ ಮೇಲೆ ಮಲಗಿದ್ದ ವೇಳೆ ಆ್ಯಸಿಡ್ ಅಟ್ಯಾಕ್ ನಡೆದಿದ್ದು, ರಂಗಭೂಮಿಯ ಸಹಪಾಠಿಗಳಿಂದಲೇ ದುಷ್ಕ್ರತ್ಯ ನಡೆದಿದೆ. ಆರೋಪಿಗಳಾದ ರಮೇಶ್, ಸ್ವಾತಿ, ಯೋಗೇಶ್ ರನ್ನ ಒಲೀಸರು ಬಂಧಿಸಿದ್ದು, ರಮೇಶ್‌ ಎಂಬಾತ ಆ್ಯಸಿಡ್ ತಂದು ಕೃತ್ಯ ನಡೆಸುವಂತೆ ಪ್ರಚೋದನೆ ನಿಡಿದ್ದ ಎಂಬ ಆರೋಪ ಕೇಳಿ ಬಂದಿದೆ. ನಂದಿನಿಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ  ಮುಂದುವರೆದಿದೆ.

West Bengal: 10ನೇ ತರಗತಿ ಪರೀಕ್ಷೆ ಬರೆದಿದ್ದಕ್ಕೆ ಅಪ್ರಾಪ್ತ ಪತ್ನಿ ಮೇಲೆ ಆ್ಯಸಿಡ್ ಎರಚಿದ ಪತಿ!

ಸಂಸಾರ ಹಾಳು ಮಾಡಿದ್ದ ಕೋಪಕ್ಕೆ ಆ್ಯಸಿಡ್ ಅಟ್ಯಾಕ್..!?

ಇನ್ನು ದಾಳಿ ಬೆನ್ನಲ್ಲೇ ಈ ಅಪರಾಧ ಕೃತ್ಯದ ಹಿಂದೆ ಸಂಸಾರ ಹಾಳು ಮಾಡಿದ ಮಾತುಗಳು ಜೋರಾಗಿವೆ. ಹೌದು ರಮೇಶ್ 10 ಸಾವಿರ ಹಣಕ್ಕೆ ಯೋಗೇಶ್ ಎಂಬಾತನಿಗೆ ಸುಪಾರಿ ನೀಡಿ ಆ್ಯಸಿಡ್ ದಾಳಿ ನಡೆಸಿದ್ದಾನೆನ್ನಲಾಗಿದೆ. ದೇವಿಯಿಂದ ರಮೇಶ್ ಸಂಸಾರ ಹಾಳಾಗಿದ್ದು, ದೇವಿಯ ಮಾತು ಕೇಳಿ ರಮೇಶನನ್ನ ಪತ್ನಿ, ಮಕ್ಕಳು ಆತನನ್ನು ಬಿಟ್ಟು ಹೋಗಿದ್ದರು. ಇದೇ ನೋವನ್ನು ರಮೇಶ್ ತನ್ನ ಗೆಳತಿ ಸ್ವಾತಿ ಬಳಿಯೂ ಹೇಳಿಕೊಂಡಿದ್ದ. ಇದನ್ನು ಕೇಳಿದ್ದ ಸ್ವಾತಿ ಯೋಗೆಶ್‌ನನ್ನು ಪರಿಚಯ ಮಾಡಿಕೊಟ್ಟಿದ್ದಳು. 

ಮೈಸೂರು, ಪತ್ನಿಯೇ ಹಂತಕಿ? ಹೂತಿಟ್ಟ ಶವ ತೆಗೆದು ಪರೀಕ್ಷೆ, ಅಮ್ಮನ ಗೋಳಾಟ ಹೇಳತೀರದು

ಬಳಿಕ ಯೋಗೇಶ್‌ಗೆ ದೇವಿ ಮನೆಯನ್ನೂ ತೋರಿಸಲಾಗಿತ್ತು. ಈ ಹಿಂದೆಯೇ ಮೂರು ಬಾರೀ ಆ್ಯಸಿಟ್ ಹಾಕಲು ಯೋಗೇಶ್ ಸ್ಕೆಚ್ ಹಾಕಿದ್ದ. ಆದರೆ ಮಾ. 18ರಂದು ದೇವಿ ಲಗಿದ್ದ ಚಾಪೆಗೆ ಆ್ಯಸಿಡ್ ಹಾಕಿ ಬಂದಿದ್ದ. ಈ ವೇಳೆ ದೇವಿ ಮುಖ ಹಾಗೂ ಬೆನ್ನಿಗೆ ಆ್ಯಸಿಡ್ ತಾಗಿ ಗಾಯಗಳಾಗಿವೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಾಯಾಳು ದೇವಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಇನ್ನು ಈ ಹಿಂದೆ ಬಿಎಂಟಿಸಿಯಲ್ಲಿ ಕೆಲಸ ನಿರ್ವಹಿಸಿದ್ದ ದೇವಿ, ಅನಾರೋಗ್ಯದಿಂದ ಬಿಎಂಟಿಸಿ ನಿರ್ವಾಹಕ ಹುದ್ದೆ ತೊರೆದಿದ್ದರು.

ಪತ್ನಿಗೆ ಆ್ಯಸಿಡ್ ಕುಡಿಸಿದ ಪಾಪಿ ಪತಿ.. ಜೀವನ್ಮರಣ ಹೋರಾಟ

 

ಇದೊಂದು ಘೋರ ಘಟನೆ. ಪತ್ನಿಗೆ ಆಸಿಡ್ ಸೇವನೆ ಮಾಡಲು ಒತ್ತಾಯ ಮಾಡಿದ್ದಾನೆ ಈ ಪಾಪಿ ಪತಿ.  ಮಹಿಳೆಯು ಗಂಭೀರವಾಗಿ ಗಾಯಗೊಂಡಿದ್ದು ಆಕೆಯ ದೇಹದ ಒಳಗಿನ ಅಂಗಗಳಿಗೆ ಹಾನಿಯಾಗಿದೆ.

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್  ಸೋಶಿಯಲ್ ಮೀಡಿಯಾದಲ್ಲಿ ವಿಚಾರ ಹಂಚಿಕೊಂಡಿದ್ದು ಆರೋಪಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಇನ್ನುವರೆಗೆ ಆರೋಪಿಯ ಬಂಧನವಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಶೃಂಗೇರಿ; ಆಸಿಡ್ ಎರಚಿದ್ದ ದುರುಳರಿಗೆ ಕೊನೆಗೂ ಜೀವಾವಧಿ

ಮಧ್ಯಪ್ರದೇಶದಲ್ಲಿ ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಗಾಯಗೊಂಡಿರುವ ಮಹಿಳೆಯ ಹೇಳಿಕೆ ದಾಖಲು ಮಾಡಿಸಿಕೊಳ್ಳಲಾಗಿದೆ. ಮಧ್ಯಪ್ರದೇಶದ ಸಿಎಂ ಶಿವರಾಜ್ ಚೌಹಾಣ್ ಆರೋಪಪಿಯನ್ನು ಕೂಡಲೇ ಬಂಧಿಸಲು ಆದೇಶ ನೀಡಬೇಕು ಎಂದು  ಆಗ್ರಹಿಸಿದ್ದಾರೆ. ಮಧ್ಯಪ್ರದೇಶದ ಡಿಜಿಪಿಗೂ ಪತ್ರ ಬರೆದಿದ್ದಾರೆ. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ  ನೀಡಲಾಗುತ್ತಿದೆ.

Latest Videos
Follow Us:
Download App:
  • android
  • ios