Asianet Suvarna News Asianet Suvarna News

West Bengal: 10ನೇ ತರಗತಿ ಪರೀಕ್ಷೆ ಬರೆದಿದ್ದಕ್ಕೆ ಅಪ್ರಾಪ್ತ ಪತ್ನಿ ಮೇಲೆ ಆ್ಯಸಿಡ್ ಎರಚಿದ ಪತಿ!

ಪಶ್ಚಿಮ ಬಂಗಾಳದಲ್ಲಿ ಪತಿ ಮಹಾಶಯನೊಬ್ಬ ತನ್ನ ಕುಟುಂಬಸ್ಥರ ವಿರೋಧದ ನಡುವೆಯೂ 10ನೇ ತರಗತಿ ಪರೀಕ್ಷೆ ಬರೆದಳು ಎಂಬ ಕಾರಣಕ್ಕೆ  ತನ್ನ ಅಪ್ರಾಪ್ತ ಪತ್ನಿಗೆ ಆ್ಯಸಿಡ್ ಎರಚಿರುವ ಘಟನೆ  ನಡೆದಿದೆ.

Husband throws acid to minor wife on tenth-grader for attending exams in West Bengal gow
Author
Bengaluru, First Published Mar 17, 2022, 9:56 PM IST | Last Updated Mar 17, 2022, 11:53 PM IST

ಕೋಲ್ಕತ್ತಾ (ಮಾ.17): ತನ್ನ ಕುಟುಂಬಸ್ಥರ ವಿರೋಧದ ನಡುವೆಯೂ  10ನೇ ತರಗತಿ ಪರೀಕ್ಷೆ (Class 10th exams) ಬರೆದಳು ಎಂಬ ಒಂದೇ ಕಾರಣಕ್ಕೆ ಆಕ್ರೋಶಗೊಂಡ ಪತಿ ಮಹಾಶಯ 'ಅಪ್ರಾಪ್ತ ಪತ್ನಿ' (minor wife ) ಮೇಲೆ ಆ್ಯಸಿಡ್ (acid) ಎರಚಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ.

ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ (Birbhum district) ಈ ಘೋರ ಘಟನೆ ನಡೆದಿದ್ದು, ಪರೀಕ್ಷಾ ಕೇಂದ್ರದ (examination centre ) ಎದುರೇ ಪಾಪಿ ಪತಿ ಪತ್ನಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಘಟನೆಯಲ್ಲಿ ಪತ್ನಿಯ ಮುಖ ಮತ್ತು ದೇಹದ ಮೇಲ್ಭಾಗದಲ್ಲಿ ತೀವ್ರ ಸುಟ್ಟ ಗಾಯಗಳಾಗಿದ್ದು, ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಪಾಪಿ ಪತಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯನ್ನು ಈತ ಮದುವೆಯಾಗಿದ್ದ. ಮದುವೆ ಬಳಿಕ ಓದು ಬೇಡ ಎಂದು ಆತನ ಕುಟುಂಬಸ್ಥರು ಹೇಳಿದ್ದರು. ಆದರೆ ಶಿಕ್ಷಣದಲ್ಲಿ ಆಸಕ್ತಿ ಇದ್ದ ಅಪ್ರಾಪ್ತ ಬಾಲಕಿ ಮಗುವಿನ ತಾಯಿಯಾದ ಬಳಿಕ ತನ್ನ ಹೆತ್ತವರ ಮನೆಗೆ ಹೋಗಿ ಅಲ್ಲಿಂದಲೇ ಈ ವರ್ಷದ ಮಾಧ್ಯಮಿಕ ಪರೀಕ್ಷೆಗೆ ಹಾಜರಾಗುತ್ತಿದ್ದಳು. ಈ ವಿಷಯವನ್ನು ಅರಿತು ಆಕ್ರೋಶಗೊಂಡ ಪಾಪಿ ಪತಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಜಗಳ ಮಾಡಿ ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ.

ಬಾಲ್ಯವಿವಾಹಕ್ಕೆ ಒತ್ತಾಯಿಸಿ ಕೋಣೆಯಲ್ಲಿ ಕೂಡಿ ಹಾಕಿದ್ದ ಬಾಲಕಿ ಎಸ್ಕೇಪ್, SSLC ಪರೀಕ್ಷೆಗೆ ಹಾಜರ್!

ಈ ಬಗ್ಗೆ ಪೊಲೀಸರ ಬಳಿ ಸಂತ್ರಸ್ಥೆ ಹೇಳಿಕೆ ದಾಖಲಿಸಿದ್ದು, 'ಮೊದಲಿನಿಂದಲೂ, ನನ್ನ ಪತಿ ಮಾಧ್ಯಮಿಕ ಪರೀಕ್ಷೆಗೆ ಹಾಜರಾಗುವ ನನ್ನ ನಿರ್ಧಾರವನ್ನು ವಿರೋಧಿಸುತ್ತಿದ್ದರು. ನಾನು ನನ್ನ ತಂದೆಯ ಮನೆಯಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ.

SAI Recruitment 2022: ಭಾರತೀಯ ಕ್ರೀಡಾ ಪ್ರಾಧಿಕಾರ ನೇಮಕಾತಿ, ಕೆಲವೇ ದಿನ ಬಾಕಿ

ಮಂಗಳವಾರ ಬೆಳಿಗ್ಗೆ, ನನ್ನ ಪತಿ ನನಗೆ ಕರೆ ಮಾಡಿ ನನ್ನ ಪರೀಕ್ಷಾ ಕೇಂದ್ರ ಎಲ್ಲಿದೆ ಎಂದು ತಿಳಿಯಲು ಬಯಸಿದ್ದರು. ನಾನು ಪರೀಕ್ಷಾ ಕೇಂದ್ರಕ್ಕೆ ಬಂದಾಗ ಇದ್ದಕ್ಕಿದ್ದಂತೆ ಅವರು ಕಾಣಿಸಿಕೊಂಡರು ಮತ್ತು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸದಂತೆ ನನ್ನನ್ನು ಕೇಳಿದರು. ಆದರೆ ಕೊನೆಯ ಪರೀಕ್ಷೆಯಾದ್ದರಿಂದ ನಾನು ಪರೀಕ್ಷೆಗೆ ಹಾಜರಾಗುತ್ತೇನೆ ಎಂದು ಹೇಳಿದೆ. ಇದ್ದಕ್ಕಿದ್ದಂತೆ, ಅವನು ತನ್ನ ಜೇಬಿನಿಂದ ಬಾಟಲಿಯನ್ನು ತೆಗೆದುಕೊಂಡು ನನ್ನ ಮುಖ ಮತ್ತು ದೇಹದ ಮೇಲೆ ಆ್ಯಸಿಡ್ ಎರಚಿದ. ನಾನು ನೆಲಕ್ಕೆ ಕುಸಿದು ಪ್ರಜ್ಞಾಹೀನಳಾದೆ ಎಂದು ಹೇಳಿದ್ದಾರೆ.

ಮದುವೆಯ ನಂತರ ಶಿಕ್ಷಣ ಪಡೆಯುವ ವಿಚಾರದಲ್ಲಿ ಬಾಲಕಿ ಮತ್ತು ಆಕೆಯ ಪತಿ ನಡುವೆ ಜಗಳ ನಡೆಯುತ್ತಿತ್ತು ಎಂದು ಸಂತ್ರಸ್ತೆಯ ಸಹೋದರಿ ಹೇಳಿದ್ದಾರೆ. ಬಾಲಕಿಯನ್ನು ಭೇಟಿಯಾಗಲು ತಂಡವನ್ನು ತಕ್ಷಣವೇ ಕಳುಹಿಸಲಾಗಿದೆ ಎಂದು ಬಿರ್ಭುಮ್‌ನಲ್ಲಿರುವ ಕೌನ್ಸಿಲ್ ಆಫ್ ಸೆಕೆಂಡರಿ ಎಜುಕೇಶನ್‌ನ ಸದಸ್ಯ ಹೇಳಿದರು.

BENGALURU UDYOGA MELA 2022: ಬೆಂಗಳೂರಿನಲ್ಲಿ ಮಾರ್ಚ್ 27ರಂದು ಉದ್ಯೋಗ ಮೇಳ

'ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಹುಡುಗಿ ಕೊನೆಯ ಪರೀಕ್ಷೆಗೆ ಹಾಜರಾಗಬೇಕೆಂದು ನಾವು ಬಯಸಿದ್ದೇವೆ. ನಾವು ಪರೀಕ್ಷೆಯನ್ನು ತಡವಾಗಿ ಪ್ರಾರಂಭಿಸಲು ಸಿದ್ಧತೆಗಳನ್ನು ಕೈಗೊಂಡಿದ್ದೇವೆ. ಆದ್ದರಿಂದ ಆಕೆ ಪರೀಕ್ಷೆ ಬರೆಯಬಹುದು. ಆದರೆ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು (Doctor) ತಿಳಿಸಿದ್ದಾರೆ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios