SBI Robbery: ಬ್ಯಾಂಕ್ ದರೋಡೆ ಮಾಡಿದವನ ಸಿನಿಮೀಯ ರೀತಿ ಬಂಧನ
* ಚೂರಿ ತೋರಿಸಿ 6.39 ಲಕ್ಷ ಹಾಕಿಕೊಂಡು ಪರಾರಿಗೆ ಯತ್ನ
* ಓಡುತ್ತಿದ್ದವನ ಬೆನ್ನಟ್ಟಿಬಂಧಿಸಿದ ಪೊಲೀಸ್ ಉಮೇಶ, ಮಂಜುನಾಥ
* ಬಂಧಿತ ಆರೋಪಿ ಆರೋಪಿ ಮದುಮಗ
ಹುಬ್ಬಳ್ಳಿ(ಜ.19): ಹಾಡಹಗಲೇ ಇಲ್ಲಿನ ಕೊಪ್ಪಿಕರ ರಸ್ತೆ ಎಸ್‌ಬಿಐಗೆ(State Bank of India) ಬಂದಾತ ಮ್ಯಾನೇಜರ್ ಹಾಗೂ ಕ್ಯಾಶಿಯರ್‌ಗೆ ಏಕಾಏಕಿ ಚೂರಿ ತೋರಿಸಿ ಬೆದರಿಸಿ 6.39 ಲಕ್ಷ ದರೋಡೆ(Robbery) ಮಾಡಿಕೊಂಡು ಪರಾರಿ ಆಗುವಾಗ ಬೆನ್ನಟ್ಟಿದ ಇಬ್ಬರು ಪೊಲೀಸರು(Police) ಆತನನ್ನು ಸಿನಿಮೀಯ ರೀತಿ ಬಂಧಿಸಿದ್ದಾರೆ(Arrest). ವಿಜಯಪುರ ಮೂಲದ ಪ್ರವೀಣಕುಮಾರ್ (30) ಆರೋಪಿ. ಮಂಗಳವಾರ ಮಧ್ಯಾಹ್ನ 2.15ರ ಸುಮಾರಿಗೆ ಇಲ್ಲಿಯ ಕೊಪ್ಪಿಕರ ರಸ್ತೆಯ ಬ್ಯಾಂಕ್‌ಗೆ ಮಂಕಿ ಕ್ಯಾಪ್ ಹಾಕಿಕೊಂಡು ಬಂದ ಪ್ರವೀಣಕುಮಾರ್ ಕೈಯಲ್ಲಿ ಚೂರಿ ಹಿಡಿದು ಕ್ಯಾಶಿಯರ್ ಹಾಗೂ ಮ್ಯಾನೇಜರ್ಗೆ ಚಾಕು ತೋರಿಸಿ ಹಣ ಕೊಡುವಂತೆ ಬೆದರಿಸಿದ್ದಾನೆ. ಕ್ಯಾಶ್ ಕೌಂಟರ್ ಇದ್ದೆಡೆ ಕರೆದೊಯ್ದು ಬ್ಯಾಗಿಗೆ 6,39,125 ಹಾಕಿಕೊಂಡಿದ್ದಾನೆ. ಬಳಿಕ ಪರಾರಿಯಾಗಲು ಮುಂದಾಗಿದ್ದಾನೆ.
ಈ ವೇಳೆ ಬ್ಯಾಂಕ್ ಮತ್ತು ಹೊರಭಾಗದಲ್ಲಿ ಸಾರ್ವಜನಿಕರು ತಡೆಯಲು ಮುಂದಾದ ವೇಳೆ ಅವರಿಗೂ ಚಾಕು ತೋರಿಸಿ ಓಡಿದ್ದಾನೆ. ಜನತೆ ಬೆನ್ನುಹತ್ತಿದ್ದನ್ನು ಕಂಡ ಟ್ರಾಫಿಕ್ ನಿರ್ವಹಣೆ ಮಾಡುತ್ತಿದ್ದ ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿ(Traffic Police) ಉಮೇಶ ಬಂಗಾರಿ ಹಾಗೂ ಗಸ್ತಿನಲ್ಲಿದ್ದ ಉಪನಗರ ಠಾಣೆಯ ಮಂಜುನಾಥ ಹಾಲವರ ಕಳ್ಳನನ್ನು(Thief) ಬೆನ್ನತ್ತಿದರು. ಸುಮಾರು 200 ಮೀ. ಓಡಿ ಆತನನ್ನು ಹಿಡಿದಿದ್ದಾರೆ. ತಕ್ಷಣ ಹಣ ಮತ್ತು ಆತನ ಬಳಿಯಿದ್ದ ಚಾಕು ವಶಕ್ಕೆ ಪಡೆದಿದ್ದಾರೆ.
Bengaluru Robbery: ಸಾಲ ಕೊಡದ್ದಕ್ಕೆ ಸೋದರತ್ತೆ ಮನೆ ದರೋಡೆ ನಂಬಿಕೆ ದ್ರೋಹಿ..!
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ಲಾಬೂರಾಮ್(Laburam), ಆರೋಪಿ ಎರಡು ದಿನಗಳ ಹಿಂದೆ ಹುಬ್ಬಳ್ಳಿಗೆ(Hubballi) ಬಂದು ಲಾಡ್ಜ್ನಲ್ಲಿ ವಾಸವಾಗಿದ್ದ ಎಂಬ ಮಾಹಿತಿ ದೊರೆತಿದೆ. ಈ ಬಗ್ಗೆ ಮತ್ತು ಆತನ ಹಿನ್ನೆಲೆಯ ಇನ್ನಷ್ಟು ವಿಚಾರಣೆ ಮಾಡಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ಸಮಯಪ್ರಜ್ಞೆ ಹಾಗೂ ಸಾರ್ವಜನಿಕರ ಸಹಕಾರದಿಂದ ಹಾಡಹಗಲೇ ಬ್ಯಾಂಕ್ ದರೋಡೆ ಮಾಡುತ್ತಿದ್ದ ಆರೋಪಿ ಬಂಧಿಸಲಾಗಿದೆ. ಜನತೆ ಕೂಡ ಉತ್ತಮ ಸಹಕಾರ ನೀಡಿದ್ದಾರೆ.
ಆರೋಪಿ ಹಿಡಿದ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಉಮೇಶ ಬಂಗಾರಿ ಹಾಗೂ ಮಂಜುನಾಥ ಹಾಲವರ ಅವರಿಗೆ ತಲಾ 25 ಸಾವಿರ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು. ಈ ವೇಳೆ ದಕ್ಷಿಣ ವಿಭಾಗ ಎಸಿಪಿ ಆರ್.ಕೆ. ಪಾಟೀಲ, ಶಹರ ಠಾಣೆ ಪಿಐ ಆನಂದ ಒನಕುದ್ರೆ, ಉಪನಗರ ಠಾಣೆ ಪಿಐ ಡಿ.ಬಿ. ರವಿಚಂದ್ರ ಸೇರಿ ಇತರರು ಇದ್ದರು.
ಆರೋಪಿ ಮದುಮಗ
ದರೋಡೆಗೆ ಯತ್ನಿಸಿದವ ಮೈಸೂರಿನ(Mysuru) ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಅಲ್ಲದೆ, ಸದ್ಯ ಮದುವೆ(Marriage) ನಿಶ್ಚಯವಾಗಿತ್ತು ಎಂದು ಹೇಳಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ತನಿಖೆಯಿಂದಲೇ ಸಮಗ್ರ ಮಾಹಿತಿ ಪಡೆಯಲಾಗುವುದು ಎಂದು ಕಮಿಷನರ್ ಲಾಬೂರಾಮ್ ತಿಳಿಸಿದರು.
Robbery Case: ತಾನೇ ಖಾರದ ಪುಡಿ ಎರಚಿಕೊಂಡು ದರೋಡೆ ಕಥೆ ಕಟ್ಟಿದ ಭೂಪ..!
ಅಂಗಡಿ, ಫೈನಾನ್ಸ್ ನೌಕರರ ಸುಲಿಗೆ ಮಾಡುತ್ತಿದ್ದ ಚೋಟಾ ಟೈಗರ್ ಬಂಧನ
ಬೆಂಗಳೂರು: ಅಂಗಡಿ-ಮುಂಗಟ್ಟುಗಳು, ಫೈನಾನ್ಸ್ ನೌಕರರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ಕುಖ್ಯಾತ ರೌಡಿ ಶೀಟರ್‌ನೊಬ್ಬನನ್ನು(Rowdysheeter) ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿ(Arrest) ಜೈಲಿಗಟ್ಟಿದ್ದಾರೆ. ಹೆಬ್ಬಾಳ ಕನಕನಗರದ ತಬ್ರೇಜ್ ಪಾಷಾ ಅಲಿಯಾಸ್ ಚೋಟಾ ಟೈಗರ್(44)(Chota Tiger) ಬಂಧಿತ(Arrest) ರೌಡಿ ಶೀಟರ್. ಕಳೆದ ತಿಂಗಳು ಅಂಗಡಿಗಳಲ್ಲಿ ಫೈನಾನ್ಸ್ ಹಣ ಸಂಗ್ರಹಿಸಿಕೊಂಡು ಜೆ.ಸಿ.ನಗರದ ಚರ್ಚ್ ರಸ್ತೆಯ ಶ್ರೀನಿವಾಸ ಬೇಕರಿ ಬಳಿ ಹೋಗುತ್ತಿದ್ದ ಫೈನಾನ್ಸ್ ಕಂಪನಿಯೊಂದರ(Finance Company) ನೌಕರರನ್ನು ಅಪರಿಚಿತ ವ್ಯಕ್ತಿಯೊಬ್ಬ ಅಡ್ಡಗಟ್ಟಿ ಬೆದರಿಸಿ ಆತನಿಂದ 28 ಸಾವಿರ ನಗದು ಸುಲಿಗೆ ಮಾಡಿ ಪರಾರಿಯಾಗಿದ್ದ.
ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಜೆ.ಸಿ.ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮುನಿಕೃಷ್ಣ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ 10 ಸಾವಿರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.