Asianet Suvarna News Asianet Suvarna News

ಭೂಕಬಳಿಕೆ ಪ್ರಕರಣ: ನಿವೃತ್ತ ಸಿಎಸ್‌ ಜಾಧವ್‌, ತಾಯಿಗೆ ಭೂ ಕಂಟಕ

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಮತ್ತು ಅವರ ತಾಯಿ ತಾರಾಬಾಯಿ ವಿರುದ್ಧದ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಆರೋಪ ಪಟ್ಟಿ ಸಿದ್ಧಪಡಿಸಿದ್ದು, ಸಕ್ಷಮ ಪ್ರಾಧಿಕಾರದಿಂದ ಅನುಮತಿ ದೊರಕಿದ ಬಳಿಕ ಸಲ್ಲಿಸಲಿದ್ದಾರೆ.
 

ACB seeks consent to file Chargesheet against Former Chief Secretary Aravind Jadhav gvd
Author
Bangalore, First Published Feb 4, 2022, 6:37 AM IST

ಬೆಂಗಳೂರು (ಫೆ.04): ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ (Aravind Jadhav) ಮತ್ತು ಅವರ ತಾಯಿ ತಾರಾಬಾಯಿ (Tarabai) ವಿರುದ್ಧದ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಆರೋಪ ಪಟ್ಟಿ ಸಿದ್ಧಪಡಿಸಿದ್ದು, ಸಕ್ಷಮ ಪ್ರಾಧಿಕಾರದಿಂದ ಅನುಮತಿ ದೊರಕಿದ ಬಳಿಕ ಸಲ್ಲಿಸಲಿದ್ದಾರೆ.

ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಅರವಿಂದ ಜಾಧವ್‌ ಸೇರಿದಂತೆ 11 ಮಂದಿಯ ವಿರುದ್ಧ ಆರೋಪ ಪಟ್ಟಿ ಸಿದ್ಧಪಡಿಸಲಾಗಿದೆ. ಅರವಿಂದ ಜಾಧವ್‌ ಅವರು ತಾಯಿ ಹೆಸರಲ್ಲಿ ಎರಡು ಎಕರೆ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಮಾಹಿತಿ ಹಕ್ಕು ಕಾರ್ಯಕರ್ತ ಎಸ್‌.ಭಾಸ್ಕರನ್‌ ಎಸಿಬಿಗೆ (ACB) ದೂರು ನೀಡಿದ್ದರು. ಈ ದೂರಿನ ಅನ್ವಯ ಎಸಿಬಿ ತನಿಖೆ ಕೈಗೊಂಡಿದ್ದು, ಆರೋಪಪಟ್ಟಿಸಿದ್ಧಪಡಿಸಿದೆ.

Karnataka Politics: 'ಇಬ್ರಾಹಿಂ ಸಿಟ್ಟು ಕಡಿಮೆಯಾದ ತಕ್ಷಣ ಬಿರಿಯಾನಿ ತಿನ್ನಲು  ಹೋಗುತ್ತೇನೆ'

ಕೆಲವು ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಆರೋಪಪಟ್ಟಿಸಲ್ಲಿಕೆ ಮಾಡಲು ಸಕ್ಷಮ ಪ್ರಾಧಿಕಾರದ ಅನುಮತಿ ಅಗತ್ಯ ಇದೆ. ಹೀಗಾಗಿ ಎಸಿಬಿ ಅಧಿಕಾರಿಗಳು ಅನುಮತಿ ಕೋರಿ ಪತ್ರ ಬರೆದಿದ್ದಾರೆ. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಸಿಕ್ಕ ಬಳಿಕ ಆರೋಪಪಟ್ಟಿಸಲ್ಲಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ನಕಲಿ ವ್ಯಕ್ತಿಯನ್ನು ಸೃಷ್ಟಿಸಿ ಎರಡು ಎಕರೆ ಭೂಮಿ ಕಬಳಿಕೆ ಮಾಡಲು ಪ್ರಯತ್ನಿಸಿದ್ದರು. ಮುಖ್ಯ ಕಾರ್ಯದರ್ಶಿಯಾಗಿದ್ದ ವೇಳೆ ಅರವಿಂದ ಜಾಧವ್‌ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರಿ ಅಧಿಕಾರಿಗಳ ಮೇಲೆ ಪ್ರಭಾವ ಬಳಸಿ ಭೂ ಕಬಳಿಕೆಗೆ ಪ್ರಯತ್ನ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ ಎಂದು ತಿಳಿದು ಬಂದಿದೆ. ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌, ಅವರ ತಾಯಿ ತಾರಾಬಾಯಿ, ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವಿ.ಶಂಕರ್‌, ಸರ್ಕಾರಿ ಅಧಿಕಾರಿಗಳಾದ ಆರ್‌.ಅರುಣ್‌, ಡಿ.ಬಿ.ಗಂಗಯ್ಯ, ವಿ.ಯೋಗಾನಂದಗೌಡ, ಆನಂದ್‌ ಕುಮಾರ್‌, ಎಲ್‌.ಸಿ.ನಾಗರಾಜ್‌, ಜಯಪ್ರಕಾಶ್‌, ಅನಿಲ್‌ ಕುಮಾರ್‌, ಗುರಪ್ಪರೆಡ್ಡಿ ವಿರುದ್ಧ ಆರೋಪ ಪಟ್ಟಿಸಿದ್ಧವಾಗಿದೆ ಎನ್ನಲಾಗಿದೆ.

ವಾಪಸ್ ಕಾಂಗ್ರೆಸ್ ಗೆ ಹೋಗೋ ಪ್ರಶ್ನೆಯೇ ಇಲ್ಲ: ಬಿಸಿ ಪಾಟೀಲ್

ರಾಮನಾಯಕನಹಳ್ಳಿ ಗ್ರಾಮದಲ್ಲಿ ಆರು ಎಕರೆ ಭೂಮಿಯನ್ನು ಅರವಿಂದ ಜಾಧವ್‌ ಕುಟುಂಬಸ್ಥರ ಹೆಸರಲ್ಲಿ ಖರೀದಿಸಲಾಗಿತ್ತು. ಆದರೆ, ಮತ್ತೆ ಎರಡು ಎಕರೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಲು ಪ್ರಯತ್ನಿಸಿದ್ದರು. ಮೊದಲ ಬಾರಿ ನಕಲಿ ದಾಖಲೆ ಎಂಬ ಕಾರಣಕ್ಕೆ ಅರ್ಜಿಯನ್ನು ಆನೇಕಲ್‌ ತಹಶೀಲ್ದಾರ್‌ ಅವರು ವಜಾಗೊಳಿಸಿದ್ದರು. ನಂತರ ಮುಖ್ಯ ಕಾರ್ಯದರ್ಶಿಯಾದ ಬಳಿಕ ಮತ್ತೊಮ್ಮೆ ಅವರ ತಾಯಿಯ ಪರವಾಗಿ ಗುರಪ್ಪ ರೆಡ್ಡಿ ಎಂಬ ಹೆಸರಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಭೂಕಬಳಿಕೆಗೆ ಅಧಿಕಾರಿಗಳು ಸಾಥ್‌ ನೀಡಿದ್ದರು. ಈ ಮಾಹಿತಿ ಪಡೆದ ಮಾಹಿತಿ ಹಕ್ಕು ಕಾರ್ಯಕರ್ತ ಎಸ್‌.ಭಾಸ್ಕರನ್‌ ಪ್ರಕರಣ ಕುರಿತು ತನಿಖೆ ನಡೆಸುವಂತೆ ಎಸಿಬಿಗೆ ದೂರು ನೀಡಿದ್ದರು. ದೂರಿನನ್ವಯ ಎಸಿಬಿ ತನಿಖೆ ಕೈಗೊಳ್ಳಲಾಗಿತ್ತು.

Follow Us:
Download App:
  • android
  • ios