Karnataka Politics: 'ಇಬ್ರಾಹಿಂ ಸಿಟ್ಟು ಕಡಿಮೆಯಾದ ತಕ್ಷಣ ಬಿರಿಯಾನಿ ತಿನ್ನಲು  ಹೋಗುತ್ತೇನೆ'

* ಇಬ್ರಾಹಿಂ ಕಾಂಗ್ರೆಸ್ಸಲ್ಲಿರಲಿ ಬಿಡಲಿ ಬಿರಿಯಾನಿ ತಿನ್ನಲು ಮನೆಗೆ ಹೋಗುವೆ: ಸಿದ್ದು
* ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದ ಸಿಎಂ ಇಬ್ರಾಹಿಂ
* ಮುಂದಿನ ರಾಜಕೀಯ ನಡೆ ಬಗ್ಗೆ ಕುತೂಹಲ ಮೂಡಿಸಿರುವ ನಾಯಕ
* ನನ್ನ ಕುತ್ತಿಗೆ ಕೊಯ್ದರು ಎಂದು ನೋವು ತೋಡಿಕೊಂಡಿದ್ದರು

Senior Karnataka Congress leader CM Ibrahim quits party Siddaramaiah Reaction mah

ಬೆಂಗಳೂರು(ಫೆ. 04)  ‘ಸಿ.ಎಂ.ಇಬ್ರಾಹಿಂ ನನ್ನ ಸ್ನೇಹಿತ. ಅವನು ಪಕ್ಷ ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ. ಅವನ ಸಿಟ್ಟು ಕಡಿಮೆಯಾದ ತಕ್ಷಣ ಅವನ ಮನೆಗೆ ಬಿರಿಯಾನಿ ತಿನ್ನಲು ಹೋಗುತ್ತೇನೆ.’ - ಕಾಂಗ್ರೆಸ್‌ ಪಕ್ಷ ತೊರೆಯುವ ನಿರ್ಧಾರ ಮಾಡಿ ತಮ್ಮ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವ ವಿಧಾನಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ (CM Ibrahim) ಅವರ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah)ಅವರು ಹೇಳಿದ ಮಾತುಗಳಿವು.

ಗುರುವಾರ ವಿಧಾನಸೌಧದಲ್ಲಿ(Vidhana Soudha) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವನು ನಮ್ಮ ಪಕ್ಷದಲ್ಲಿದ್ದರೂ ನನ್ನ ಸ್ನೇಹಿತ. ಪಕ್ಷ ಬಿಟ್ಟರೂ ನನ್ನ ಸ್ನೇಹಿತ. ಅವನು ಇಲ್ಲಿ ಇದ್ದರೂ ಇಲ್ಲದಿದ್ದರೂ ನಾನು ಅವನ ಮನೆಗೆ ಬಿರಿಯಾನಿ ತಿನ್ನಲು ಹೋಗುತ್ತೇನೆ. ನನಗಾಗಿ ಸ್ಪೆಷಲ್‌ ಬಿರಿಯಾನಿ ಮಾಡಿಸುತ್ತಾನೆ. ರಾಜಕೀಯ ಬೇರೆ, ವೈಯಕ್ತಿಕ ಸಂಬಂಧಗಳು ಬೇರೆ. ಸ್ವಲ್ಪ ಸಿಟ್ಟು ಕಡಿಮೆಯಾಗಲಿ ಎಂದು ಕಾಯುತ್ತಿದ್ದೇನೆ ಅಷ್ಟೇ ಎಂದರು.

ಹಿಜಾಬ್‌ ವಿವಾದ ಹಾಗೂ ಪೆನ್ನಾರ್‌ ಕಾವೇರಿ ನದಿ ಜೋಡಣೆ ಕುರಿತು ಕೇಳಿದ ಪ್ರಶ್ನೆಗೆ, ಈ ಕುರಿತು ಮಾತನಾಡಲು ಶುಕ್ರವಾರ ಸುದ್ದಿಗೋಷ್ಠಿ ನಡೆಸುತ್ತೇನೆ. ನದಿ ಜೋಡಣೆಯಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಅಲ್ಲಿ ವಿವರಣೆ ನೀಡುತ್ತೇನೆ ಎಂದು ಹೇಳಿದರು.

Karnataka Politics: ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ: ವಿಶ್ವನಾಥ್

ರಾಜೀನಾಮೆ ಘೋಷಣೆ;  ಈಗಾಗಲೇ ಕಾಂಗ್ರೆಸ್ ತೊರೆಯುವುದಾಗಿ ಘೋಷಿಸಿದ್ದ ಸಿಎಂ ಇಬ್ರಾಹಿಂ (CM Ibrahim) ಇದೀಗ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ(Resign) ನೀಡಲು ತೀರ್ಮಾನಿಸಿದ್ದನ್ನು ಅವರೇ ತಿಳಿಸಿದ್ದರು.

ಮೈಸೂರಿನಲ್ಲಿ ( Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆಬ್ರವರಿ 14ರಂದು ಲವರ್ಸ್ ಡೇ. ಅಂದೇ ನಾನು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೇ  ಹೂವಿನ ಹಾರ ಹಾಕಿ ಹೋರಾಟ ಮಾಡುತ್ತೇನೆ. ಸಿದ್ದರಾಮಯ್ಯನವರಿಗೆ ನನ್ನದೇ ಸ್ಥಿತಿ ಬರುತ್ತೆ ಎಂದು ಭವಿಷ್ಯ ನುಡಿದರು.

ನನ್ನ ಜೊತೆ ಸಿದ್ದರಾಮಯ್ಯನವರು ಮಾತನಾಡಿಲ್ಲ. ಬಾದಾಮಿಗೆ ಹೊತ್ತುಕೊಂಡು ಹೋದವನು ನಾನು. ಕಾಲ ಎಲ್ಲದಕ್ಕೂ ಉತ್ತರ ನೀಡುತ್ತೆ. ಸಿದ್ದರಾಮಯ್ಯನವರು ಕಾಂಗ್ರೆಸ್​ನಲ್ಲಿ ಅಸಹಾಯಕರಾಗಿದ್ದಾರೆ. ಅಲಿಂಗ ಸಮಾವೇಶವನ್ನು ಫೆಬ್ರವರಿಯಲ್ಲಿ ಮಾಡುತ್ತೇನೆ. ಕರ್ನಾಟಕದಲ್ಲಿ ಬಸವ ಕೃಪಾದ ಸಿದ್ದಾಂತ ತರುತ್ತೇನೆ.‌ ಕಾಂಗ್ರೆಸ್ ಮತ್ತು ಬಿಜೆಪಿಯವರು ನನ್ನ ಜೊತೆ ಟೆಚ್ ನಲ್ಲಿಯೇ ಇದ್ದಾರೆ ಎಂದು ಬಾಂಬ್ ಸಿಡಿಸಿದ್ದರು. 

ಕರ್ನಾಟಕ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ಆಗುತ್ತಲೇ ಇವೆ. ಒಂದು ಕಡೆ ಆಡಳಿತದಲ್ಲಿರುವ ಬಿಜೆಪಿಗೆ ಸಚಿವ ಸಂಪುಟ ಸವಾಲು ಎದುರಾಗಿದ್ದರೆ ಜೆಡಿಎಸ್‌ ನಿಂದ ನಾಯಕರು ಜಾಗ ಖಾಲಿ ಮಾಡುತ್ತಿದ್ದಾರೆ. ಪಕ್ಷದ ವಿರುದ್ಧ ಮಾತನಾಡಿದ್ದ ಎಲ್ ಆರ್ ಶಿವರಾಮೇಗೌಡ ಅವರನ್ನು ಜೆಡಿಎಸ್ ಉಚ್ಚಾಟನೆ ಮಾಡಿತ್ತು. ಇನ್ನು ಕಾಂಗ್ರೆಸ್ ನಲ್ಲಿ ಅಗ್ರ ನಾಯಕರ ನಡುವೆ ಇರುವ ಮುನಿಸಿಗೆ ತೇಪೆ ಹಚ್ಚಲು ಹೈಕಮಾಂಡ್  ಹಲವು ಬಗೆಯ ಸರ್ಕಸ್ ಮಾಡುತ್ತಿದೆ. 

 

Latest Videos
Follow Us:
Download App:
  • android
  • ios