Asianet Suvarna News Asianet Suvarna News

ಹಣಕ್ಕಾಗಿ ಭಿಕ್ಷಾಪತಿ ಹೆಸರಲ್ಲಿ 50 ಲಕ್ಷ ರೂ. ವಿಮೆ ಮಾಡಿಸಿ ಹತ್ಯೆ..! ಒಂದು ವರ್ಷ ಬಳಿಕ ಪ್ರಕರಣ ಬಯಲು

ಭಿಕ್ಷಾಪತಿ ಅಕ್ಟೋಬರ್ 2020ರಂದು ಕಂಪನಿಗೆ ಸೇರಿದ ಬಳಿಕ ಆತನ ಹೆಸರಲ್ಲಿ 50 ಲಕ್ಷ ರೂ. ಇನ್ಶೂರೆನ್ಸ್‌ ಸ್ಕೀಂ ಪಡೆದ ಶ್ರೀಕಾಂತ್‌ ಅವರು ತಮ್ಮ ಹೆಸರನ್ನೇ ನಾಮಿನಿಯಾಗಿಸಿಕೊಂಡಿದ್ದಾರೆ.

a year after an accident death in telangana cops find he was murdered for insurance ash
Author
First Published Jan 11, 2023, 2:39 PM IST

ವಾರಂಗಲ್‌: ಸುಲಭವಾಗಿ ಹಣ ಸಂಪಾದಿಸಲು ವ್ಯಕ್ತಿಯೊಬ್ಬ ಭಿಕ್ಷಾಪತಿ ಎಂಬುವರ ಹೆಸರಲ್ಲಿ 50 ಲಕ್ಷ ರೂ.ನ ಜೀವ ವಿಮೆ ಮಾಡಿಸಿ ಬಳಿಕ ಆತನ ಹತ್ಯೆಗೈದ ಸಿನಿಮೀಯ ಘಟನೆಯೊಂದು ತೆಲಂಗಾಣದ ವಾರಂಗಲ್‌ನಲ್ಲಿ ನಡೆದಿದೆ. ಕಳೆದ ವರ್ಷ ನಡೆದ ಈ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣ ಹಿನ್ನೆಲೆ:
ಬೋಡಾ ಶ್ರೀಕಾಂತ್‌ ಎಂಬ ವ್ಯಕ್ತಿ ಭಿಕ್ಷಾಪತಿ (Bhikshapathi) ಎಂಬುವರ ಹೆಸರಲ್ಲಿ 50 ಲಕ್ಷ ರೂ. ನ ವಿಮೆ (Insurance) ಮಾಡಿಸಿದ್ದಾನೆ. ಬಳಿಕ ಈ ಹಣವನ್ನು (Money) ಪಡೆದುಕೊಳ್ಳಲು ಮಲ್ಕಾಜಿಗಿರಿ ಪೊಲೀಸ್‌ ಠಾಣೆಯಲ್ಲಿ ಹೆಡ್‌ ಕಾನ್‌ಸ್ಟೇಬಲ್‌ (Head Constable) ಆಗಿರುವ ಮೋತಿಲಾಲ್‌, ಸತೀಶ್‌ ಮತ್ತು ಸೋಮಣ್ಣ ಎಂಬುವವರಿಗೆ ಸುಪಾರಿ ನೀಡಿದ್ದಾರೆ. ಈ ಮೂವರು ಸೇರಿ 2021ರ ಡಿಸೆಂಬರ್ 22ರಂದು ಭಿಕ್ಷಾಪತಿಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಚೆನ್ನಾಗಿ ಕುಡಿಸಿ, ಹಾಕಿ ಸ್ಟಿಕ್‌ಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಬಳಿಕ ಇದನ್ನು ಅಪಘಾತ ಎಂದು ಸಾಬೀತು ಮಾಡಲು ಶವವನ್ನು ರಸ್ತೆಯಲ್ಲಿ ಎಸೆದು ಅದರ ಮೇಲೆ 2 ಬಾರಿ ಕಾರು ಹತ್ತಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. 
ತನಿಖೆ ಆರಂಭಿಸಿದ ಪೊಲೀಸರಿಗೆ ಮೃತವ್ಯಕ್ತಿಯ ಮೈಮೇಲೆ ಗಾಯಗಳಾಗಿರುವುದು ಶವಪರೀಕ್ಷೆಯಿಂದ ತಿಳಿದುಬಂದಿದೆ. ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು ಪ್ರಕರಣವನ್ನು ಬೇಧಿಸಿ, ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನು ಓದಿ: Bengaluru Crime: ಪತಿಯ ಜತೆ ಸೇರಿ ಪ್ರಿಯಕರನ ಹತ್ಯೆ: ಶವದೊಂದಿಗೆ 6 ಕಿ.ಮೀ. ಟ್ರಿಪಲ್‌ ರೈಡ್‌!

ಪ್ರಕರಣದ ವಿವರ..
ತೆಲಂಗಾಣದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದ 37 ವರ್ಷದ ವ್ಯಕ್ತಿ ಕೊಲೆಯಾಗಿದ್ದಾರೆ ಎನ್ನುವುದನ್ನು ಪೊಲೀಸರು ಇತ್ತೀಚೆಗೆ ಪತ್ತೆಹಚ್ಚಿದ್ದಾರೆ. ಆಂಧ್ರ ಪ್ರದೇಶದ ಗುಂಟೂರು ಮೂಲದ ಭಿಕ್ಷಾಪತಿ ಎಂಬುವರು ತೆಲಂಗಾಣದ ಫಾರೂಕ್‌ನಗರ ಮಂಡಲದಲ್ಲಿ ಎಸ್‌ಯುವಿಕೆ ಕಾರು ಇವರ ಮೇಲೆ ಹರಿದ ಕಾರಣ ಡಿಸೆಂಬರ್ 2021ರಲ್ಲಿ ಮೃತಪಟ್ಟಿದ್ದರು. ಆದರೆ, 50 ಲಕಗ್ಷ ರೂ. ಇನ್ಶೂರೆನ್ಸ್‌ ಹಣಕ್ಕಾಗಿ ಇವರನ್ನು ಕೊಲೆ ಮಾಡಿರುವುದು ಪತ್ತೆಯಾಗಿದ್ದು, ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. 
ಭಿಕ್ಷಾಪತಿಯ ಮಾಜಿ ಸಹೋದ್ಯೋಗಿಗಳಾದ ಶ್ರೀಕಾಂತ್‌, ಸತೀಶ್‌ ಹಾಗೂ ಸಮ್ಮಣ್ಣ ಹಾಗೂ ಮೋತಿಲಾಲ್‌ ಎಂಬ ಕಾನ್ಸ್‌ಟೇಬಲ್‌ ನನ್ನು ಶಾದ್‌ನಗರ ಪೊಲೀಸರು ಬಂಧಿಸಿದ್ದಾರೆ. ಶ್ರೀಕಾಂತ್‌ ಅವರ ನಕಲಿ ಕಂಪನಿಯಲ್ಲಿ ಸತೀಶ್‌ ಹಾಗೂ ಸಮ್ಮಣ್ಣ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ತನ್ನ ಉದ್ಯೋಗಿಗಳ ಕ್ರೆಡಿಟ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ಗಳನ್ನು ಬಳಸಿಕೊಂಡು ಶ್ರೀಕಾಂತ್‌ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.

ನಂತರ, ಇದೇ ರೀತಿ, ಭಿಕ್ಷಾಪತಿ ಅಕ್ಟೋಬರ್ 2020ರಂದು ಕಂಪನಿಗೆ ಸೇರಿದ ಬಳಿಕ ಆತನ ಹೆಸರಲ್ಲಿ 50 ಲಕ್ಷ ರೂ. ಇನ್ಶೂರೆನ್ಸ್‌ ಸ್ಕೀಂ ಪಡೆದ ಶ್ರೀಕಾಂತ್‌ ಅವರು ತಮ್ಮ ಹೆಸರನ್ನೇ ನಾಮಿನಿಯಾಗಿಸಿಕೊಂಡಿದ್ದಾರೆ. ನಂತರ, ಫೆಬ್ರವರಿ 2021 ರಲ್ಲಿ ಭಿಕ್ಷಾಪತಿಯ ದಾಖಲೆಗಳನ್ನು ಉಪಯೋಗಿಸಿಕೊಂಡು ಶ್ರೀಕಾಂತ್‌, ಮೇಡ್ಚಲ್‌ - ಮಲ್ಕಾಜ್‌ಗಿರಿ ಜಿಲ್ಲೆಯಲ್ಲಿ ಮನೆಯನ್ನು ಖರೀದಿಸಿದ್ದಾರೆ. ಈ ವೇಳೆ, ಭಿಕ್ಷಾಪತಿಗೆ ಹತ್ತಿರದ ಸಂಬಂಧಿಕರು ಯಾರೂ ಇಲ್ಲ ಎಂಬುದನ್ನು ಶ್ರೀಕಾಂತ್‌ ತಿಳಿದುಕೊಂಡಿದ್ದಾರೆ. 

ಇದನ್ನೂ ಓದಿ: Crime News: ಬೆಂಗಳೂರಿನಲ್ಲಿ ಕೊಲೆ ಮಾಡಿ ಹೆಣದ ಜೊತೆ ತ್ರಿಬಲ್ ರೈಡ್: ಆರೋಪಿಗಳ ಬಂಧನ

ನಂತರ ಭಿಕ್ಷಾಪತಿ ಅವರನ್ನು ಕೊಲೆ ಮಾಡಲು ನಾಲ್ವರು ಪ್ಲ್ಯಾನ್‌ ಮಾಡಿದ್ದಾರೆ. ಶ್ರೀಕಾಂತ್‌ಗೆ 30 ಲಕ್ಷ ರೂ., ಮೋತಿಲಾಲ್‌ಗೆ 10 ಲಕ್ಷ ರೂ ಹಾಗೂ ಇಬ್ಬರು ಉದ್ಯೋಗಿಗಳಿಗೆ ತಲಾ 5 ಲಕ್ಷ ರೂ. ಪಡೆಯುವುದಾಗಿ ಮಾತಾಡಿಕೊಂಡಿದ್ದರು ಎಂದು ಈ ಕೇಸ್‌ ತನಿಖೆ ನಡೆಸಿದ ಡಿಸಿಪಿ ಮಾಹಿತಿ ನೀಡಿದ್ದಾರೆ. 
 
ಅಲ್ಲದೆ, ಡಿಸೆಂಬರ್ 22 ರ ರಾತ್ರಿ ಬೋಡುಪ್ಪಾಲ್‌ನಿಂದ ಶಾದ್ನಗರದ ಮೋಗಿಲಿಗಿಡ್ಡ ಎಂಬ ಪ್ರದೇಶಕ್ಕೆ ಕಾರಿನಲ್ಲಿ ಹೋಗುವಾಗ ಭಿಕ್ಷಾಪತಿಗೆ ಆರೋಪಿಗಳು ಮದ್ಯಪಾನ ಕುಡಿಸಿದ್ದಾರೆ. ನಂತರ, ಭಿಕ್ಷಾಪತಿ ಮೂತ್ರ ವಿಸರ್ಜನೆಗೆಂದು ಕಾರಿನಿಂದ ಇಳಿದಾಗ ಹಾಕಿ ಸ್ಟಿಕ್‌ನಿಂದ ತಲೆಗೆ ಹೊಡೆದಿದ್ದಾರೆ. ಅಲ್ಲದೆ, ರಸ್ತೆ  ಅಪಘಾತವೆಂದು ಬಿಂಬಿಸಲು ಕಾರನ್ನು ಆತನ ಮೇಲೆ ಹತ್ತಿಸಿದ್ದಾರೆ. ಅಲ್ಲದೆ, ಇನ್ಶೂರೆನ್ಸ್‌ ಉದ್ದೇಶಕ್ಕಾಗಿ ಆತನ ಹೆಸರು ಗೊತ್ತಾಗಲೆಂದು ಪ್ಯಾನ್‌ ಕಾರ್ಡ್‌ ಬಿಟ್ಟು ಹೋಗಿದ್ದರು ಎಂದು ಡಿಸಿಪಿ ಹೇಳಿದ್ದಾರೆ. 

ಇದನ್ನೂ ಓದಿ: ಕಲಬುರಗಿ: ಪೊಲೀಸರ ಮೇಲೆಯೇ ಮಾರಕಾಸ್ತ್ರದಿಂದ ದಾಳಿ, ಕೊಲೆ ಆರೋಪಿ ಕಾಲಿಗೆ ಗುಂಡೇಟು

Follow Us:
Download App:
  • android
  • ios