6 ವರ್ಷದ ಮಗು ದಪ್ಪ ಇದೆ ಎಂದು ಬಿದ್ದರೂ ಬಿಡದೇ ಟ್ರೆಡ್‌ಮಿಲ್‌ನಲ್ಲಿ ಓಡಿಸಿ ಸಾಯಿಸಿಯೇ ಬಿಟ್ಟ ತಂದೆ
ಪಾಪಿ ತಂದೆಯೋರ್ವ ಆರು ವರ್ಷದ ಮಗನನನ್ನು ಆತ ಹಲವು ಬಾರಿ ಬಿದ್ದರೂ ಬಿಡದೇ ಟ್ರೆಡ್‌ಮಿಲ್‌ನಲ್ಲಿ ನಿರಂತರ ಓಡುವಂತೆ ಮಾಡಿ ಆತನ ಸಾವಿಗೆ ಕಾರಣನಾದಂತಹ ಘಟನೆ ಅಮೆರಿಕಾದಲ್ಲಿ ನಡೆದಿದೆ.
ನ್ಯೂಜೆರ್ಸಿ: ಪಾಪಿ ತಂದೆಯೋರ್ವ ಆರು ವರ್ಷದ ಮಗನನನ್ನು ಆತ ಹಲವು ಬಾರಿ ಬಿದ್ದರೂ ಬಿಡದೇ ಟ್ರೆಡ್‌ಮಿಲ್‌ನಲ್ಲಿ ನಿರಂತರ ಓಡುವಂತೆ ಮಾಡಿ ಆತನ ಸಾವಿಗೆ ಕಾರಣನಾದಂತಹ ಘಟನೆ ಅಮೆರಿಕಾದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಈಗ ತಂದೆ ತಪ್ಪಿತಸ್ಥ ಎಂಬುದು ಸಾಬೀತಾಗಿದ್ದು, ಪಾಪಿ ತಂದೆಯ ಕೈಗೆ ಸಿಲುಕಿ ನಲುಗಿದ ಬಾಲಕನ ಕೊನೆಕ್ಷಣಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. 2021ರಲ್ಲಿ ಅಮೆರಿಕಾದ ನ್ಯೂಜೆರ್ಸಿಯಲ್ಲಿ ಈ ಘಟನೆ ನಡೆದಿದೆ. 31 ವರ್ಷದ ಪಾಪಿ ತಂದೆ ಕ್ರಿಸ್ಟೋಫರ್ ಗ್ರೇಗರ್ ವಿರುದ್ಧ ಮಗನನ್ನು ಕೊಲೆ ಮಾಡಿದ ಪ್ರಕರಣ ದಾಖಲಾಗಿದ್ದು, ಆತ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿದ್ದಾನೆ.
ವೇಗವಾಗಿ ಓಡುವಂತೆ ಟ್ರೆಡ್‌ಮಿಲ್‌ನ್ನು ಸೆಟ್ ಮಾಡಿದ ಈತ ಅದರ ಮೇಲೆ ತನ್ನ 6 ವರ್ಷದ ಮಗ ಕೋರೆ ಮಿಕ್ಸಿಯೊಲೊನನ್ನು ಒತ್ತಾಯಪೂರ್ವಕವಾಗಿ ಓಡಿಸುತ್ತಿದ್ದ. ಬಾಲಕನ ಸಾಮರ್ಥ್ಯಕ್ಕಿಂತಲೂ ಮಿತಿಮೀರಿದ ವೇಗದಲ್ಲಿ ಟ್ರೆಡ್‌ಮಿಲ್ ಓಡುತ್ತಿದ್ದುದ್ದರಿಂದ ಅದರ ವೇಗಕ್ಕೆ ಸರಿಯಾಗಿ ಓಡಲಾಗದ ಪುಟ್ಟ ಬಾಲಕ ಹಲವು ಬಾರಿ ಟ್ರೆಡ್‌ಮಿಲ್‌ನಿಂದ ಜಾರಿ ಕೆಳಗೆ ಬಿದ್ದರೂ ಕರುಣೆ ತೋರದ ಈ ಪಾಪಿ ತಂದೆ ಮತ್ತೆ ಮತ್ತೆ ಆತನನ್ನು ಮೇಲೆ ಅತ್ತಿ ಟ್ರೆಡ್‌ಮಿಲ್ ಮೇಲೆ ಬಿಡುತ್ತಿದ್ದ. ಕೊನೆಗೂ ಈ ಪಾಪಿಯ ಕಿರುಕುಳ ತಾಳಲಾಗದೇ ಪುಟ್ಟ ಜೀವ ಕೊನೆಯುಸಿರೆಳೆದಿದೆ. ಬಾಲಕನ ಕೊನೆಕ್ಷಣಗಳ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಾಪಿ ತಂದೆಯ ರಾಕ್ಷಸೀಯ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನಕಲಕುವಂತಿದೆ.
ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದ ವ್ಯಕ್ತಿ ಹಾರ್ಟ್‌ಅಟ್ಯಾಕ್‌ನಿಂದ ಸಾವು, ಹೃದಯ ವಿದ್ರಾವಕ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಮಾರ್ಚ್ 20, 2021 ರಂದು ತಂದೆ ಕ್ರಿಸ್ಟೋಫರ್ ಗ್ರೇಗರ್, ಮಗ ಕೋರೆ ಮಿಕ್ಸಿಯೊಲೊನನ್ನು ಕರೆದುಕೊಂಡು ಅಟ್ಲಾಂಟಿಕ್ ಹೈಟ್ಸ್ ಕ್ಲಬ್‌ಹೌಸ್ ಫಿಟ್‌ನೆಸ್ ಸೆಂಟರ್‌ಗೆ ಬಂದಿದ್ದು, ಅಲ್ಲಿ ಮಗನನ್ನು ಒತ್ತಾಯಪೂರ್ವಕವಾಗಿ ಟ್ರೆಡ್‌ಮಿಲ್‌ನಲ್ಲಿ ಕೂರಿಸಿ ಆತ ಬಿದ್ದ ನಂತರವೂ ಟ್ರೆಡ್‌ಮಿಲ್ ವೇಗ ಹೆಚ್ಚಿಸಿ ಕಿರುಕುಳ ನೀಡಿದ ದೃಶ್ಯ ಫಿಟ್ನೆಸ್ ಕೇಂದ್ರದ ಕ್ಯಾಮರಾದಲ್ಲಿ ಸೆರೆ ಆಗಿದೆ. ತನ್ನ ಮಗ ವಯಸ್ಸಿಗಿಂತ ಜಾಸ್ತಿ ದಪ್ಪ ಇದ್ದಾನೆ ಎಂದು ಭಾವಿಸಿ ತಾನು ಆತ ಹಾಗೆ ಮಾಡಿದ್ದ ಎಂದು ವರದಿಯಾಗಿದ್ದು, ಪ್ರಕರಣದಲ್ಲಿ ಪಾಪಿ ತಂದೆಗೆ ಈಗ ಜೀವಾವಧಿ ಶಿಕ್ಷೆಯಾಗಿದೆ.
ಈ ಕ್ರೌರ್ಯದ ವೀಡಿಯೋವನ್ನು ನ್ಯಾಯಾಲಯದ ವಿಚಾರಣೆ ವೇಳೆ 6 ವರ್ಷದ ಬಾಲಕನ ತಾಯಿ ಬ್ರೇ ಮಿಕ್ಸಿಯೊಲೊ ವೀಕ್ಷಿಸಿದ್ದು ಆಘಾತದಿಂದ ಕಣ್ಣೀರು ಸುರಿಸಿದ್ದು, ಅದೊಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಬಾಲಕನ ಸಾವಿಗೆ ದಿನ ಮೊದಲು ಮಿಕ್ಸಿಯೊಲೊ, ಮಕ್ಕಳ ರಕ್ಷಣಾ ಸೇವೆಗೆ ತನ್ನ ಮಗನ ದೇಹದಲ್ಲಿ ಆದ ಗಾಯದ ಬಗ್ಗೆ ವಿಚಾರ ತಿಳಿಸಿದ್ದಳು. ಅಲ್ಲದೇ ಪತಿ ಗ್ರೇಗರ್‌ಗೆ ಬಾಲಕ ಕೋರಿಯನ್ನು ವೈದ್ಯರ ಬಳಿ ಕರೆದೊಯ್ಯುವಂತೆಯೂ ಮನವಿ ಮಾಡಿದ್ದಳು. ವೈದ್ಯರ ತಪಾಸಣೆ ವೇಳೆ ಬಾಲಕ ತನ್ನ ಸ್ಥಿತಿಯ ಹಿಂದಿನ ಕಾರಣವನ್ನು ತಿಳಿಸಿದ್ದ. ತನ್ನ ತೂಕ ಹೆಚ್ಚಿದೆ ಎಂದು ತನ್ನ ತಂದೆ ಒತ್ತಾಯಪೂರ್ವಕವಾಗಿ ಟ್ರೆಡ್ಮಿಲ್‌ನಲ್ಲಿ ನನ್ನನ್ನು ಓಡಿಸಿದ್ದ ಬಗ್ಗೆ ಮಾಹಿತಿ ನೀಡಿದ್ದ.
ಟ್ರೆಡ್‌ಮಿಲ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಕರೆಂಟ್ ಶಾಕ್, 24ರ ಹರೆಯದ ಯುವಕ ಸಾವು!
ದುರಂತವೆಂದರೆ, ಮರುದಿನವೇ ಬಾಲಕನ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು, ಮಾತು ಅಸ್ಪಷ್ಟವಾಗಿತ್ತು, ವಾಕರಿಕೆ ಇತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಹೀಗಾಗಿ ಕೂಡಲೇ ಗ್ರೆಗರ್ ಕೋರೆಯನ್ನು ಆಸ್ಪತ್ರೆಗೆ ಸೇರಿಸಿದರು. ಅಲ್ಲಿ ಸಿಟಿ ಸ್ಕ್ಯಾನ್ ಮಾಡಿದಾಗ ಆತನ ಅನಾರೋಗ್ಯಕ್ಕೆ ಕಾರಣ ತಿಳಿದರೂ ಆತನನ್ನು ಉಳಿಸಿಕೊಳ್ಳುವ ಸಮಯ ಮೀರಿ ಹೋಗಿದ್ದರಿಂದ ಬಾಲಕ ಪ್ರಾಣ ಬಿಟ್ಟಿದ್ದ. ಮರಣೋತ್ತರ ಪರೀಕ್ಷೆಯಲ್ಲಿ ಅತೀಯಾದ ಒತ್ತಡದಿಂದ ಬಾಲಕನಿಗೆ ಹೃದಯದ ಸಮಸ್ಯೆ , ಪಿತ್ತಜನಾಕಾಂಗದ ಸಮಸ್ಯೆ ಉರಿಯೂತ, ಕಾಲುಗಳ ಮಂಡಿಯಲ್ಲಿ ಗಾಯ ಎಲ್ಲವೂ ಜೊತೆಯಾಗಿ ಕಾಣಿಸಿಕೊಂಡಿದ್ದು ಬಾಲಕನ ಸಾವಿಗೆ ಕಾರಣವಾಯ್ತು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿತ್ತು. ಇದಾದ ನಂತರ 2021ರ ಜುಲೈನಲ್ಲಿ ಗ್ರೇಗರ್‌ನನ್ನು ಬಂಧಿಸಲಾಗಿತ್ತು.