ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ ಎಸ್ಐಟಿ; ಇದರಿಂದಾಗುವ ಪರಿಣಾಮವೇನು?
ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣಗೆ ಕರ್ನಾಟಕದ ವಿಶೇಷ ತನಿಖಾ ದಳ (ಎಸ್‌ಐಟಿ) ಪೊಲೀಸರು ಲುಕ್ ಔಟ್ ನೋಟೀಸ್ ಜಾರಿ ಮಾಡಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬೆಂಗಳೂರು (ಮೇ 02): ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಆಗಿರುವ ಸಂಸದ ಪ್ರಜ್ವಲ್ ರೇವಣ್ಣಗೆ ಕರ್ನಾಟಕದ ವಿಶೇಷ ತನಿಖಾ ದಳ (ಎಸ್‌ಐಟಿ) ಪೊಲೀಸರು ಲುಕ್ ಔಟ್ ನೋಟೀಸ್ ಜಾರಿ ಮಾಡಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಮೂಲಕ ವಿಮಾನ ನಿಲ್ದಾಣ, ಭೂ ಗಡಿ ಪ್ರದೇಶ ಅಥವಾ ಬಂದರುಗಳಲ್ಲಿ ಪತ್ತೆಯಾದರೂ ಬಂಧಿಸಲು ಮುಂದಾಗಿದೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮರ್ಯಾದೆಯನ್ನು ಹರಾಜು ಹಾಕುತ್ತಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜಗ್ಯ ಸರ್ಕಾರದ ಎಸ್‌ಐಟಿ ತನಿಖೆಗೆ ವಹಿಸಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಕೇಸ್ ದಾಖಲಾಗುವ ಮುನ್ನವೇ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಈಗ ಎಸ್‌ಐಟಿ ತಂಡದಿಂದ ಪ್ರಜ್ವಲ್ ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ, ಈ ನೊಟೀಸ್‌ಗೆ ಉತ್ತರಿಸಿದ ಪ್ರಜ್ವಲ್ ರೇವಣ್ಣ ನಾನು ವಿದೇಶದಲ್ಲಿದ್ದೇನೆ, ಒಂದು ವಾರ ಕಾಲಾವಕಾಶ ಕೊಡಿ ಎಂದು ಕೇಳಿಕೊಂಡಿದ್ದರು. ಇದಕ್ಕೊಪ್ಪ ಎಸ್‌ಐಟಿ ತಂಡವು ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದೆ.
ಜೈ ಶ್ರೀರಾಮ್ ಘೋಷಣೆ ಕೂಗುವವರನ್ನು ಭಿಕಾರಿಗಳು ಎಂದ ಕಾಂಟ್ರೊವರ್ಸಿ ಕಿಂಗ್ ರಾಜು ಕಾಗೆ!
ಏನಿದು ಲುಕ್‌ಔಟ್ ನೋಟೀಸ್, ಇದರ ಪರಿಣಾಮವೇನು?
ಯಾವುದೇ ಒಂದು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಅಥವಾ ನಾಪತ್ತೆಯಾಗಿರುವ ಆರೋಪಿ ಪತ್ತೆಗೆ ತನಿಖಾ ಸಂಸ್ಥೆಗಳು ಅನುಸರಿಸುವ ಕ್ರಮವಾಗಿದೆ. ಅಂತಾರಾಷ್ಟ್ರೀಯ ಗಡಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಅಥವಾ ಬಂದರುಗಳಿಗೆ ಸಂಬಂಧಪಟ್ಟ ಆರೋಪಿ ಬಂದಲ್ಲಿ ಮಾಹಿತಿ ನೀಡುವಂತೆ ಸೂಚನೆ ನೀಡಲಾಗುತ್ತದೆ. ಹಾಗಾಗಿ ಆರೋಪಿ ಇರುವ ದೇಶದಿಂದ ಬೇರೆ ಕಡೆಗೆ ಲೀಗಲ್ ಆಗಿ ಹೋಗಲು ಸಾಧ್ಯವಿಲ್ಲ. ಯಾವುದೇ ಏರ್ಪೋರ್ಟ್, ಬಂದರು, ಅಂತಾರಾಷ್ಟ್ರೀಯ ಗಡಿಗೆ ಹೋದರು ಅಲ್ಲಿರುವ ಅಧಿಕಾರಿಗಳು ಆರೋಪಿಯನ್ನು ಸುಲಭವಾಗು ವಶಕ್ಕೆ ಪಡೆಯಬಹುದು.
ರಾಜ್ಯದ 25 ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದ ಉಷ್ಣಾಂಶ; ರಾಯಚೂರಲ್ಲಿ 46.7 ಡಿಗ್ರಿ ದಾಖಲು
ಪ್ರಜ್ವಲ್ ರೇವಣ್ಣ ಮೇಲೆ ಲುಕ್ ಔಟ್ ನೊಟೀಸ್ ಪರಿಣಾಮವೇನು?
ಈಗ ಕರ್ನಾಟಕದ ಪೊಲೀಸರ ನೇತೃತ್ವದ ಎಸ್‌ಐಟಿ ತಂಡದಿಂದ ಸಂಸದ ಪ್ರಜ್ವಲ್ ರೇವಣ್ಣಗೆ ಲುಕ್‌ಔಟ್ ನೊಟೀಸ್ ಜಾರಿ ಮಾಡಲಾಗಿದೆ. ಈ ನೊಟೀಸ್‌ನಿಂದಾಗಿ ಜರ್ಮನಿಯಿಂದ ಬೇರೆ ದೇಶಗಳಿಗೆ ತೆರಳುವುದನ್ನು ತಪ್ಪಿಸಲು ಸಹಾಯಕವಾಗಿದೆ. ಈ ಮೂಲಕ ಪ್ರಜ್ವಲ್ ಬಗ್ಗೆ ಎಲ್ಲ ಏರ್ಪೋರ್ಟ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ, ರಸ್ತೆ ಮಾರ್ಗದ ಪ್ರಮುಖ ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಅಥವಾ ಬಂದರುಗಳಲ್ಲಿ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷವಾದರೆ ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಬೇಕು. ಒಂದು ವೇಳೆ ಅಗತ್ಯ ಬಿದ್ದರೆ ಅಲ್ಲಿನ ಅಧಿಕಾರಿಗಳಿಗಳೇ ಆರೋಪಿಯನ್ನು ಬಂಧಿಸಿ ತನಿಖಾ ಸಂಸ್ಥೆಯ ವಶಕ್ಕೆ ಒಪ್ಪಿಸುವುದಕ್ಕೆ ;ಲುಕ್ ಔಟ್ ನೋಟೀಸ್‌ನಲ್ಲಿ ಅವಕಾಶವಿದೆ.