Crime News: ಬೆಂಗಳೂರಿನಲ್ಲಿ ಕೊಲೆ ಮಾಡಿ ಹೆಣದ ಜೊತೆ ತ್ರಿಬಲ್ ರೈಡ್: ಆರೋಪಿಗಳ ಬಂಧನ

ಬೆಂಗಳೂರಿನಲ್ಲಿ ಕೊಲೆ ಮಾಡಿ ಹೆಣದ ಜೊತೆ ತ್ರಿಬಲ್‌ ರೈಡಿಂಗ್‌ ಮಾಡಿ ಮೂವರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
 

First Published Jan 8, 2023, 11:25 AM IST | Last Updated Jan 8, 2023, 11:31 AM IST

ಜನವರಿ 2ರಂದು ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ನಿಬಾಶೀಶ್‌ ಪಾಲ್‌ ಎಂಬಾತನ ಕೊಲೆ ಮಾಡಲಾಗಿದೆ. ಮೃತ ವ್ಯಕ್ತಿ ಹಾಗೂ ರೀನಾ ಎಂಬ ಮಹಿಳೆ ನಡುವೆ ಅನೈತಿಕ ಸಂಬಂಧ ಇತ್ತು. ಹೆಂಡತಿ ವಿಚಾರ ತಿಳಿದು ರೀನಾ ಗಂಡ ಗಂಗೇಶ್‌ ಯುಪಿಗೆ ಹೋಗಿದ್ದ. ಆದರೆ ರೀನಾಗೆ  ನಿಬಾಶೀಶ್‌ ಪಾಲ್‌ ಕಿರುಕುಳ ಕೊಡಲು ಆರಂಭಿಸಿದ್ದ. ಹಣಕ್ಕಾಗಿ ಬೇರೆಯವರ ಜೊತೆ ಮಲಗುವಂತೆ ರೀನಾಗೆ ಒತ್ತಾಯ ಮಾಡುತ್ತಿದ್ದ. ಬೇಸತ್ತಿದ್ದ ರೀನಾ, ಗಂಡನಿಗೆ ಕರೆ ಮಾಡಿ ಬೆಂಗಳೂರಿಗೆ ಕರಿಸಿ ನೀಬಾಶೀಶ್‌'ಗೆ ಕಂಟಪೂರ್ತಿ ಕುಡಿಸಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಕೊಲೆ ಮಾಡಿ ಹೆಣ ಸಾಗಿಸಲು ಸ್ನೇಹಿತನ ಸಹಾಯ ಪಡೆದ ಗಂಗೇಶ್‌, ಹೆಣವನ್ನು ಬೈಕ್‌ನಲ್ಲಿ  ತ್ರಿಪಲ್ ರೈಡಿಂಗ್ ಹೋಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತ್ರಿಪಲ್ ರೈಡಿಂಗ್ ಹೋಗಿ ರಸ್ತೆ ಬದಿ ಹೆಣವನ್ನು ಎಸೆದು ಬಂದಿದ್ದಾರೆ.

ಅಪಘಾತದಲ್ಲಿ ಮಡಿದ ಅಂಜಲಿ ಕುಟುಂಬಕ್ಕೆ ಶಾರುಖ್‌ ಖಾನ್‌ ಸಂಸ್ಥೆ ಧನ ಸಹಾ ...