A wife was arrested for murdering her husband: ಯಾವ ಸಂಬಂಧವೂ, ಜೋಡಿಯೂ ಪರ್ಫೆಕ್ಟ್‌ ಆಗಿರೋದಿಲ್ಲ. ಕೆಲ ದಂಪತಿ ಮಧ್ಯೆ ಸಿಕ್ಕಾಪಟ್ಟೆ ಸಮಸ್ಯೆಯಿದ್ದರೂ ಕೂಡ ನಿಭಾಯಿಸಿಕೊಂಡು ಹೋಗುತ್ತಾರೆ. ಗಂಡ-ಹೆಂಡತಿ ಮಧ್ಯದ ಜಗಳ ಕೊ*ಲೆಯಲ್ಲಿ ಅಂತ್ಯ ಆದ ಉದಾಹರಣೆ ತುಂಬ ಇದೆ. ಈಗ ಮತ್ತೆ ಈ ಘಟನೆ ನಡೆದಿದೆ. 

ಇಂದು ಎಲ್ಲಿ ನೋಡಿದರೂ ಕೊ*ಲೆ, ಸುಲಿಗೆ, ದರೋಡೆಯೇ ತುಂಬಿದೆ. ಹರಿಯಾಣದ ಫರಿದಾಬಾದ್‌ನಲ್ಲಿ ಆಟೋ ಡ್ರೈವರ್ ಸುಮನ್ ಅವರನ್ನು ಕ್ರೂರವಾಗಿ ಕೊಲೆ ಮಾಡಿದ ಆರೋಪದ ಮೇಲೆ ಅವರ ಪತ್ನಿ ಅಂಜನಿ ಅಲಿಯಾಸ್ ಕವಿತಾ (29), ಆಕೆಯ ಲವ್ವರ್ ರಿಯಾವುಲ್ (30) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊ*ಲೆಗೆ ಕಾರಣವೇನು?

ಸುಮನ್‌ಗೆ ತನ್ನ ಪತ್ನಿ, ರಿಯಾವುಲ್ ನಡುವಿನ ಅಕ್ರಮ ಸಂಬಂಧ ಇತ್ತು ಎಂದು ಗೊತ್ತಿತ್ತು. ಹೀಗಾಗಿ ಮನೆಯಲ್ಲಿ ಪದೇ ಪದೇ ಜಗಳ ಆಗುತ್ತಿತ್ತು. ಹೀಗಾಗಿ ಕವಿತಾ ಹಾಗೂ ಅವರ ಲವ್ವರ್ ಸುಮನ್ ಅವರನ್ನು ಕೊ*ಲ್ಲಬೇಕು ಎಂದು ಪ್ಲ್ಯಾನ್‌ ಮಾಡಿದ್ದರು.

ಕೊ*ಲೆ ನಡೆದ ರೀತಿ

ನವೆಂಬರ್ 30, 2025 ರಂದು ಸುಮನ್ ಅವರನ್ನು ರೈಲ್ವೆ ಹಳಿ ಬಳಿ ಇರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ, ಅಷ್ಟೇ ಅಲ್ಲದೆ ಅತಿಯಾಗಿ ಮದ್ಯವನ್ನು ಕುಡಿಸಿದ್ದಾರೆ. ಸುಮನ್ ಪ್ರಜ್ಞೆ ತಪ್ಪಿದ್ದಾರೆ, ಆಮೇಲೆ ತಲೆಗೆ ಕಲ್ಲುಗಳಿಂದ ಹೊಡೆದು ಕೊ*ಲೆ ಮಾಡಿದ್ದಾರೆ. ನಂತರ ಅಪಘಾತ ಎಂದು ಕಾಣಿಸಬೇಕು, ಯಾರಿಗೂ ಇವರ ಗುರುತು ಸಿಗಬಾರದು ಎಂದು ಮುಖವನ್ನು ರೈಲ್ವೆ ಹಳಿ ಮೇಲೆ ಇಟ್ಟಿದ್ದಾರೆ.

ಸುಮನ್ ಕಾಣೆಯಾದರು ಎಂದು ಅವರ ಸಹೋದರ ಜನವರಿ 18 ರಂದು ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು, ಡಿಸೆಂಬರ್ 1 ರಂದು ರೈಲ್ವೆ ಹಳಿ ಮೇಲೆ ಸಿಕ್ಕಿದ್ದ ಅಪರಿಚಿತ ಶವ ಮಾತ್ರ ಸುಮನ್ ಅವರದ್ದು ಎಂದು ಕನ್ಫರ್ಮ್‌ ಮಾಡಿಕೊಂಡಿದ್ದಾರೆ. ಸುಮನ್ ಪತ್ನಿಯ ನಡವಳಿಕೆ ಮೇಲೆ ಅನುಮಾನ ಬಂದಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಸತ್ಯಾಂಶ ಏನು ಎನ್ನೋದು ಹೊರಬಂದಿದೆ. ಪ್ರಸ್ತುತ ಕೋರ್ಟ್ ಆರೋಪಿಗಳನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.