ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಕಳ್ಳರ ಸಹವಾಸದಿಂದ ಕಳ್ಳನಾದ ಆ್ಯಕ್ಟರ್ ಕಮ್ ಡೈರೆಕ್ಟರ್!

ಸಿನಿಮಾಗಳಲ್ಲಿ ಮಿಂಚಬೇಕಿದ್ದ ಒಬ್ಬ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಸ್ಟಂಟ್‌ಮ್ಯಾನ್ ಸರಣಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದಾನೆ. ಚಾಮರಾಜನಗರ ಮತ್ತು ಕೊಳ್ಳೇಗಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನಗಳಲ್ಲಿ ಈ ನಟ ಭಾಗಿಯಾಗಿದ್ದ.

A real life crime story  Sandalwood actor come director anand  arrests gow

ವರದಿ: ಪುಟ್ಟರಾಜು. ಆರ್. ಸಿ. ಏಷ್ಯಾನೆಟ್  ಸುವರ್ಣ ನ್ಯೂಸ್ 

ಚಾಮರಾಜನಗರ (ನ.8): ಆತ ಸಕಲ ಕಲಾ ವಲ್ಲಭ. ತನ್ನ ಟ್ಯಾಲೆಂಟಿನಿಂದ ಸ್ಯಾಂಡಲ್ ವುಡ್ ನಲ್ಲಿ ಮಿಂಚ ಬೇಕಾಗಿದ್ದ ವ್ಯಕ್ತಿ ಈಗ ಖಾಕಿ ಕೈಯಲ್ಲಿ ಲಾಕ್ ಆಗಿದ್ದಾನೆ. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟಹಾಗೆ ಇಲ್ಲೊಬ್ಬ ನಟ ಕಮ್ ನಿರ್ದೇಶಕ ಕಮ್ ನಿರ್ಮಾಪಕ ಹಾಗೂ ಸ್ಟಂಟ್ ಮ್ಯಾನ್   ಖತರ್ನಾಕ್ ಕಳ್ಳನಾಗಿ ಜೈಲು ಸೇರಿರುವ ಕಥೆ  ಇಲ್ಲಿದೆ ನೋಡಿ..

ಇದೊಂಥರಾ ಚಲನ ಚಿತ್ರಗಳಲ್ಲಿ ಬರೋ ಒಬ್ಬ ದುರಂತ ನಾಯಕನ ಕಥೆಗೆ ಹೋಲಿಕೆಯಾಗುವ ರಿಯಲ್ ಸ್ಟೋರಿ.  ರೀಲ್ ಸಿನಿಮಾಗಳನ್ನೆ ಮೀರಿಸೊ ಹಾಗಿದೆ ಈತನ  ರಿಯಲ್ ಲೈಫ್. ಹೌದು ರಿಟನ್ ಬೈ ಆನಂದ್ ಪೇಜ್ ನಂಬರ್ 32 ( Written by Anand Page Number 32) ಎಂಬ ಸಿನಿಮಾದ ನಾಯಕನಟನೇ  ರಿಯಲ್ ಲೈಫ್ ನ ದುರಂತ ನಾಯಕ. ಹೌದು ಆಕ್ಟರ್ ಜ
ಕಮ್  ಡೈರೆಕ್ಟರ್ ಕಮ್ ಸ್ಟಂಟ್ ಮ್ಯಾನ್ ಆನಂದ್ ಈಗ ಚಾಮರಾಜನಗರ ಜಿಲ್ಲಾ ಪೊಲೀಸರ ಅಥಿತಿಯಾಗಿದ್ದಾನೆ. ಚಾಮರಾಜನಗರ ಪಟ್ಟಣ ಹಾಗು ಕೊಳ್ಳೇಗಾಲ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣದಲ್ಲಿ ಆನಂದ್ ಭಾಗಿಯಾಗಿದ್ದ. ಸಿನಿಮಾದಲ್ಲಿ ಮಿಂಚಬೇಕಿದ್ದಾತ ಈಗ ಕಂಬಿ ಹಿಂದೆ ಹೋಗುವಂತಾಗಿದೆ.

ಕೀಚಕರು, ಕ್ಲಾಸ್-2 ಹಾಗು ತಮಿಳಿನ ಅಚ್ಚಮಲೈ ಸಿನಿಮಾಗಳಲ್ಲಿ ಸೈಟ್ ಆಕ್ಟರ್ ಆಗಿ ನಟಿಸಿದ್ದ ಆನಂದ್ ಅಣ್ಣತಂಗಿ, ತವರಿಗೆ ಬಾ ತಂಗಿ, ಭಜರಂಗು-2 ಚಲನಚಿತ್ರಗಳಲ್ಲಿ ಡೂಪ್ ಕಲಾವಿದನಾಗಿ ನಟಿಸಿದ್ದ.   2005ರಲ್ಲಿ ರಿಟನ್ ಬೈ ಆನಂದ್ ಪೇಜ್ ನಂಬರ್ 32  ಎಂಬ ಸಿನಿಮಾದಲ್ಲಿ  ತಾನೇ ನಟಿಸಿ ನಿರ್ಮಾಣ ಮಾಡಲು ಮುಂದಾಗಿದ್ದ. ಇದಕ್ಕಾಗಿ ಸಾಕಷ್ಟು ಸಾಲ ಮಾಡಿದ್ದ.   ತೀವ್ರ ಆರ್ಥಿಕ ಸಂಕಷ್ಟದಿಂದ ಚಿತ್ರ ಅರ್ಧಕ್ಕೆ ನಿಂತಿತ್ತು ಅದೇ ಸಂದರ್ಭದಲ್ಲಿ ತನ್ನ ಪತ್ನಿ  ಅಕ್ರಮ ಸಂಬಂದ ಹೊಂದಿದ್ದಾನೆಂದು ವ್ಯಕ್ತಿಯೊಬ್ಬನನ್ನು ಕೊಲೆಗೈದು  ಪರಪ್ಫನ ಅಗ್ರಹಾರ ಜೈಲು ಸೇರಿದ್ದ. ಜೈಲಿ  ತಮಿಳುನಾಡು ಮೂಲದ ಕಳ್ಳರ ಪರಿಚಯವಾಗಿತ್ತು.  ಬೇಲ್ ಮೇಲೆ ಜೈಲಿನಿಂದ ಹೊರಬಂದ ಮೇಲೆ ತಮಿಳುನಾಡು ಮೂಲದ ಕಳ್ಳ ರೊಂದಿಗೆ ಸೇರಿ ಕಳ್ಳತನಕ್ಕೆ ಇಳಿದಿದ್ದ.

ಮೊದಲ ಪ್ರಯತ್ನದಲ್ಲೇ ಬರೋಬ್ಬರಿ 6 ಲಕ್ಷ ಕಳ್ಳತನ ಮಾಡಿದ್ದ. ಚಾಮರಾಜನಗರ - ಆತ ಸಕಲ ಕಲಾ ವಲ್ಲಭ. ತನ್ನ ಟ್ಯಾಲೆಂಟಿನಿಂದ ಸ್ಯಾಂಡಲ್ ವುಡ್ ನಲ್ಲಿ ಮಿಂಚ ಬೇಕಾಗಿದ್ದ ವ್ಯಕ್ತಿ ಈಗ ಖಾಕಿ ಕೈಯಲ್ಲಿ ಲಾಕ್ ಆಗಿದ್ದಾನೆ. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟಹಾಗೆ ಇಲ್ಲೊಬ್ಬ ನಟ ಕಮ್ ನಿರ್ದೇಶಕ ಕಮ್ ನಿರ್ಮಾಪಕ ಹಾಗೂ ಸ್ಟಂಟ್ ಮ್ಯಾನ್   ಖತರ್ನಾಕ್ ಕಳ್ಳನಾಗಿ ಜೈಲು ಸೇರಿರುವ ಕಥೆ  ಇಲ್ಲಿದೆ ನೋಡಿ. 

ಇದೊಂಥರಾ ಚಲನ ಚಿತ್ರಗಳಲ್ಲಿ ಬರೋ ಒಬ್ಬ ದುರಂತ ನಾಯಕನ ಕಥೆಗೆ ಹೋಲಿಕೆಯಾಗುವ ರಿಯಲ್ ಸ್ಟೋರಿ.  ರೀಲ್ ಸಿನಿಮಾಗಳನ್ನೆ ಮೀರಿಸೊ ಹಾಗಿದೆ ಈತನ  ರಿಯಲ್ ಲೈಫ್. ಹೌದು ರಿಟನ್ ಬೈ ಆನಂದ್ ಪೇಜ್ ನಂಬರ್ 32 ( Written by Anand Page Number 32) ಎಂಬ ಸಿನಿಮಾದ ನಾಯಕನಟನೇ  ರಿಯಲ್ ಲೈಫ್ ನ ದುರಂತ ನಾಯಕ. ಹೌದು ಆಕ್ಟರ್ ಜ
ಕಮ್  ಡೈರೆಕ್ಟರ್ ಕಮ್ ಸ್ಟಂಟ್ ಮ್ಯಾನ್ ಆನಂದ್ ಈಗ ಚಾಮರಾಜನಗರ ಜಿಲ್ಲಾ ಪೊಲೀಸರ ಅಥಿತಿಯಾಗಿದ್ದಾನೆ. ಚಾಮರಾಜನಗರ ಪಟ್ಟಣ ಹಾಗು ಕೊಳ್ಳೇಗಾಲ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣದಲ್ಲಿ ಆನಂದ್ ಭಾಗಿಯಾಗಿದ್ದ. ಸಿನಿಮಾದಲ್ಲಿ ಮಿಂಚಬೇಕಿದ್ದಾತ ಈಗ ಕಂಬಿ ಹಿಂದೆ ಹೋಗುವಂತಾಗಿದೆ.

ಕೀಚಕರು, ಕ್ಲಾಸ್-2 ಹಾಗು ತಮಿಳಿನ ಅಚ್ಚಮಲೈ ಸಿನಿಮಾಗಳಲ್ಲಿ ಸೈಟ್ ಆಕ್ಟರ್ ಆಗಿ ನಟಿಸಿದ್ದ ಆನಂದ್ ಅಣ್ಣತಂಗಿ, ತವರಿಗೆ ಬಾ ತಂಗಿ, ಭಜರಂಗು-2 ಚಲನಚಿತ್ರಗಳಲ್ಲಿ ಡೂಪ್ ಕಲಾವಿದನಾಗಿ ನಟಿಸಿದ್ದ.   2005ರಲ್ಲಿ ರಿಟನ್ ಬೈ ಆನಂದ್ ಪೇಜ್ ನಂಬರ್ 32  ಎಂಬ ಸಿನಿಮಾದಲ್ಲಿ  ತಾನೇ ನಟಿಸಿ ನಿರ್ಮಾಣ ಮಾಡಲು ಮುಂದಾಗಿದ್ದ. ಇದಕ್ಕಾಗಿ ಸಾಕಷ್ಟು ಸಾಲ ಮಾಡಿದ್ದ.   ತೀವ್ರ ಆರ್ಥಿಕ ಸಂಕಷ್ಟದಿಂದ ಚಿತ್ರ ಅರ್ಧಕ್ಕೆ ನಿಂತಿತ್ತು ಅದೇ ಸಂದರ್ಭದಲ್ಲಿ ತನ್ನ ಪತ್ನಿ  ಅಕ್ರಮ ಸಂಬಂದ ಹೊಂದಿದ್ದಾನೆಂದು ವ್ಯಕ್ತಿಯೊಬ್ಬನನ್ನು ಕೊಲೆಗೈದು  ಪರಪ್ಫನ ಅಗ್ರಹಾರ ಜೈಲು ಸೇರಿದ್ದ. ಜೈಲಿ  ತಮಿಳುನಾಡು ಮೂಲದ ಕಳ್ಳರ ಪರಿಚಯವಾಗಿತ್ತು. 

ಬೇಲ್ ಮೇಲೆ ಜೈಲಿನಿಂದ ಹೊರಬಂದ ಮೇಲೆ ತಮಿಳುನಾಡು ಮೂಲದ ಕಳ್ಳ ರೊಂದಿಗೆ ಸೇರಿ ಕಳ್ಳತನಕ್ಕೆ ಇಳಿದಿದ್ದ. ಮೊದಲ ಪ್ರಯತ್ನದಲ್ಲೇ ಬರೋಬ್ಬರಿ 6 ಲಕ್ಷ ಕಳ್ಳತನ ಮಾಡಿದ್ದ. ಬಗೆದಷ್ಟು ಬಯಲಾಗುತ್ತಲೇ ಇದೆ ನಟ ಕಮ್ ನಿರ್ದೇಶಕನ ಬಂಡವಾಳ ಖಾಕಿ ಇಂಟ್ರಾಗೇಷನ್ ವೇಳೆ ಮತ್ತಷ್ಟು ಸ್ಪೋಟಕ ಮಾಹಿತಿ ಬಹಿರಂಗ ಪಡಿಸಿರುವ  ಆನಂದ ಮಳಿಗೆ ಕಳ್ಳತನ ಮಾಡುತ್ತಿದ್ದದ್ದು ಶೋಕಿಗಾಗಿ, ಅಕ್ಟೋಬರ್ 2 ರಂದು ಮಾದಪ್ಪನ ಸನ್ನಿಧಾನಕ್ಕೆ ಭೇಟಿ ಕೊಟ್ಟಿದ್ದ ಆನಂದ ಮಾದಪ್ಪನ ದರ್ಶನ ಪಡೆದು ವಾಪಸ್ಸು ಕೊಳ್ಳೇಗಾಲಕ್ಕೆ ಬಂದು ಇಳಿದಿದ್ದ ಕೊಳ್ಳೇಗಾಲದ ಪ್ರಮುಖ ವಾಣಿಜ್ಯ ಮಳಿಗೆಗಳನ್ನ ಪತ್ತೆ ಹಚ್ಚಿ ಯಾವ ಅಂಗಡಿ ಮುಂದೆ ಹೆಚ್ಚು ಗಿರಾಕಿ ಇರ್ತಾರೆ ಯಾವ ಅಂಗಡಿಗೆ ಹೆಚ್ಚು ವ್ಯಾಪಾರ ಆಗುತ್ತೆ ಎಂದು ನೋಟ್ ಮಾಡಿದ್ಧ ಆನಂದ ರಾತ್ರಿ ತಾನು ಗುರುತು ಹಿಡಿದಿದ್ದ ಅಂಗಡಿ ಮುಂಗಟ್ಟುಗಳನ್ನ ದೋಚುತ್ತಿದ್ದ ಮೊದ್ಲೆ ಸ್ಟಂಟ್ ಮನ್ ಆದ ಕಾರಣ ಚಿಕ್ಕ ಕಿಂಡಿ ಇದ್ರು ನೀಲಾಜಾಲವಾಗಿ ಅಂಗಡಿ ಒಳ ಹೊಕ್ಕುತ್ತಿದ್ದ ಇದೇ ರೀತಿ ಚಾಮರಾಜನಗರಕ್ಕು ಬಂದು ಕೃತ್ಯವೆಸಗಿದ್ದ ನಟೋರಿಯಸ್ ಕದ್ದ ಹಣದಲ್ಲಿ ಬಾರು ಪಬ್ಬು ಅಂತಾ ಶೋಕಿ ಮಾಡ್ತಯಿದ್ದ ಕದ್ದ ಹಣದಿಂದಲೇ ತನ್ನ ಮಕ್ಕಳಿದ ಕರ್ನಾಟಕದಾದ್ಯಂತ ಟೂರು ಮಾಡಿಸಿದ್ದನಂತೆ ದಿನ ಕಳೆದಂತೆ ತನಿಖೆ ವೇಳೆ ಬಯಲಾಗುತ್ತಲೇ ಇದೆ ಆಕ್ಟರ್ ಕಮ್ ಡೈರೆಕ್ಟರ್ ಆನಂದನ ಒಃದೊಂದೆ ಲೀಲೆ ಹೊರ ಬರುತ್ತಿದ್ದು  ಕಳ್ಳತನದ ರುಚಿ ಕಂಡ ಆನಂದ್ ಬೆಂಗಳೂರು, ತುಮಕೂರು, ಚಾಮರಾಜನಗರ ಸೇರಿದಂತೆ ರಾಜ್ಯದ ವಿವೆಧೆಡೆ  45 ಕ್ಕು ಹೆಚ್ಚು ಕಡೆ  ಅಂಗಡಿ ಮಳಿಗೆಗಳು, ಮನೆಗಳಲ್ಲಿ ಕಳ್ಳತನ ಮಾಡಿ ಇದೀಗ ಚಾಮರಾಜನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಚಾಮರಾಜನಗರ ಪೊಲೀಸರು ಬಂಧಿತ ಆನಂದನ್ನು  ವಿಚಾರಣೆಗೆ ಒಳಪಡಿಸಿದ್ದು  ಮತ್ತಷ್ಟು ಕಳ್ಳತನ ಪ್ರಕರಣ ಬೆಳಕಿಗೆ ಬರೋ ಸಾದ್ಯತೆಯಿದೆ. ಅದೇನೆ ಹೇಳಿ ಆಕ್ಟರ್ ಆಗಿ ಚಂದನವನದ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚ ಬೇಕಿದ್ದಾತ ಈಗ ಕಂಬಿ ಹಿಂದೆ ಕಾಲ ಕಳೆಯುವಂತಾಗಿದೆ.

Latest Videos
Follow Us:
Download App:
  • android
  • ios