ರಾಮನಗರ: ವೈಯಕ್ತಿಕ ದ್ವೇಷಕ್ಕೆ ಅಂಗವಿಕಲನ ದ್ವಿಚಕ್ರವಾಹಕ್ಕೆ ಕಿಡಿಗೇಡಿ ಬೆಂಕಿ
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಂಗವಿಕಲ ವ್ಯಕ್ತಿಗೆ ಸೇರಿದ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಾಕಿರುವ ಘಟನೆ ರಾಮನಗರ ಜಿಲ್ಲೆಯ ಚಿನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.

ಚನ್ನಪಟ್ಟಣ (ಸೆ.11) ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಂಗವಿಕಲ ವ್ಯಕ್ತಿಗೆ ಸೇರಿದ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಾಕಿರುವ ಘಟನೆ ರಾಮನಗರ ಜಿಲ್ಲೆಯ ಚಿನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುರೇಶ್‌ಗೆ ಸೇರಿದ ದ್ವಿಚಕ್ರ ವಾಹನಕ್ಕೆ ಭಾನುವಾರ ಮಧ್ಯಾಹ್ನ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದು, ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ. ನಮ್ಮ ಕುಟುಂಬದವರಿಗೂ ಎದುರು ಮನೆಯ ಸರಿತಾ, ಸಣ್ಣೇಗೌಡ, ಸಾವಿತ್ರಮ್ಮ ಎಂಬುವವರಿಗೂ ವೈಯಕ್ತಿಕ ಮನಸ್ತಾಪವಿದ್ದು, ನನ್ನ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದಾರೆ ಎಂದು ಸುರೇಶ್ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
23 ಪಾರಿವಾಳಗಳ ರುಂಡವನ್ನೇ ಚೆಂಡಾಡಿದ ಕಿರಾತಕ: ಕುತ್ತಿಗೆ ಕತ್ತರಿಸಿ ಎಸೆದ ದುಷ್ಕರ್ಮಿ
ಮನೆಗಳ್ಳತನ: ಆರೋಪಿ ಸೆರೆ
ಬೆಳಗಾವಿ: ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಪಿಎಂಸಿ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಆತನಿಂದ ₹ 2.55 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಅನಗೋಳ ಮುಸ್ಲಿಂ ಗಲ್ಲಿಯ ನಿವಾಸಿ ಅಬ್ದುಲಗಣಿ ಶಬ್ಬೀರ ಶೇಖ (24) ಬಂಧಿತ ಆರೋಪಿ. ಆಗಸ್ಟ್ 1 ರಂದು ರಘುನಾಥ ಟೋಪಣ್ಣ ಪಾಟೀಲ ಅವರು ತಮ್ಮ ಮನೆಯಲ್ಲಿ ಬಂಗಾರದ ಆಭರಣಗಳು ಕಳುವಾದ ಕುರಿತು ದೂರು ನೀಡಿದ್ದರು.
ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಎರಡು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Mandya: ವೈಯಕ್ತಿಕ ದ್ವೇಷಕ್ಕೆ 8000 ಲೀ. ಪೆಟ್ರೋಲ್ ರಸ್ತೆಗೆ ಚೆಲ್ಲಿದ ದುಷ್ಕರ್ಮಿಗಳು