Asianet Suvarna News Asianet Suvarna News

23 ಪಾರಿವಾಳಗಳ ರುಂಡವನ್ನೇ ಚೆಂಡಾಡಿದ ಕಿರಾತಕ: ಕುತ್ತಿಗೆ ಕತ್ತರಿಸಿ ಎಸೆದ ದುಷ್ಕರ್ಮಿ

ಹುಬ್ಬಳ್ಳಿಯಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ 23 ಪಾರಿವಾಳಗಳ ಕುತ್ತಿಗೆಯನ್ನು ಕತ್ತರಿಸಿ ಬೀಸಾಡಿದ ಅಮಾನವೀಯ ಘಟನೆ ನಡೆದಿದೆ.

Hubli city criminal cut the neck of 23 pigeons sat
Author
First Published Sep 11, 2023, 11:46 AM IST | Last Updated Sep 11, 2023, 12:32 PM IST

ಹುಬ್ಬಳ್ಳಿ (ಸೆ.11): ರಾಜ್ಯದ ಗಂಡು ಮೆಟ್ಟಿದ ನಾಡು ಎಂದೇ ಪ್ರಸಿದ್ಧಿಯಾಗಿರುವ ಹುಬ್ಬಳ್ಳಿಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಸಾಕಿದ್ದ 23 ಪಾರಿವಾಳಗಳ ಕುತ್ತಿಗೆಯನ್ನು ಚಾಕುವಿನಿಂದ ಕತ್ತರಿಸಿ ರುಂಡ-ಮುಂಡ ಬೇರ್ಪಡಿಸಿ ವಿಕೃತಿ ಮೆರೆದಿದ್ದಾನೆ.

ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರೋ ಯಾವಗಲ್ ಪ್ಲಾಟ್ ನಲ್ಲಿ ಘಟನೆ ನಡೆದಿದೆ. ಕುತ್ತಿಗೆ ಕಟ್ ಮಾಡಿ 23 ಪಾರಿವಾಳ ಸಾಯಿಸಲಾಗಿದೆ. ಮನೆಯ ಬಳಿ ಕಪಾಟಿನಲ್ಲಿ ಸಾಕಣೆ ಮಾಡಲಾಗಿದ್ದ 23 ಪಾರಿವಾಳಗಳನ್ನ ಕಿರಾತಕರು ಕತ್ತು ಕೊಯ್ದಯ ಸಾಯಿಸಿದ್ದಾರೆ. ಇನ್ನು ಈ ಪಾರಿವಾಳಗಳನ್ನು ರಾಹುಲ್ ದಾಂಡೇಲಿ ಎನ್ನುವವರು ಸಾಕಣೆ ಮಾಡಿದ್ದರು. ಕಳೆದ ಆರು ತಿಂಗಳಿಂದ ರಾಹುಲ್ ಪಾರಿವಾಳ ಸಾಕುತ್ತಿದ್ದು, ಕೆಲವು ಪಾರಿವಾಳಗಳನ್ನು ಮಾರಾಟ ಮಾಡಿ ಆದಾಯವನ್ನೂ ಗಳಿಸುತ್ತಿದ್ದನು. ಇನ್ನು ಪಾರಿವಾಳಗಳಿಂದ ಹಾರಾಟ ಮಾಡಿಸುವುದು ಹಾಗೂ ಸಣ್ಣಮಟ್ಟದ ಜೂಜಾಟವನ್ನೂ ಮಾಡುತ್ತಿದ್ದರು.

ಬೆಂಗಳೂರು: ಹಾಡುಹಗಲೇ ಅಪೊಲೋ ಫಾರ್ಮಸಿಗೆ ನುಗ್ಗಿ ಸಿಬ್ಬಂದಿಗೆ ಚಾಕು ಇರಿದು ದರೋಡೆ !

ಪಾರಿವಾಳ ಸಾಕಣೆ ಮಾಡಿದ್ದ ರಾಹುಲ್‌ ಮೇಲೆ ಇದ್ದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆತ ಮನೆಯಲ್ಲಿ ಸಾಕಣೆ ಮಾಡಿದ್ದ ಪಾರಿವಾಳಗಳ ಕತ್ತು ಕತ್ತರಿಸಿ ಬೀಸಾಡುವ ಮೂಲಕ ದ್ವೇಷ ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬರುತ್ತಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದು, ಕಪಾಟನ್ನು ತೆರೆದು ಒಂದೊಂದೇ ಪಾರಿವಾಳವನ್ನು ಹಿಡಿದು ಕತ್ತನ್ನು ಕತ್ತರಿಸಿ ಎಸೆದಿದ್ದಾನೆ. ಬೆಳಗ್ಗೆ ಎದ್ದು ಪಾರಿವಾಳವನ್ನು ನೋಡಲು ರಾಹುಲ್‌ಗೆ ಸತ್ತುಬಿದ್ದ ದೃಶ್ಯವನ್ನು ನೋಡಿ ಬರಸಿಡಿಲು ಬಡಿದಂತಾಗಿದೆ. ನಂತರ, ಪಾರಿವಾಳಗಳನ್ನು ಸಾಯಿಸಿದವರನ್ನ ಕೂಡಲೇ ಬಂಧಿಸುವಂತೆ ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ರಾಹುಲ್‌ ದೂರು ದಾಖಲಿಸಿದ್ದಾನೆ.

ಸಾಲದ ಶೂಲಕ್ಕೆ ಕಾರ್ಮಿಕ ದಂಪತಿ ಸಾವು: 16 ತಿಂಗಳ ಮಗು ಅನಾಥ: ಬಳ್ಳಾರಿ (ಸೆ.11): ಸಂಸಾರದ ಬಂಡಿ ಸಾಗಲು ಗಂಡ ಹೆಂಡತಿ ಜೋಡೆತ್ತುಗಳಾಗಿ ಸಮಾನವಾಗಿ ಹೋಗಬೇಕು. ಇಲ್ಲವಾದಲ್ಲಿ ಜೀವನದ ಬಂಡಿ ಯಾವುದಾದರೂ ಅಪಘಾತಕ್ಕೆ ಸಿಲುಕಿ ಅರ್ಧದಲ್ಲಿಯೇ ಜೀವನ ಮೂರಾಬಟ್ಟೆ ಆಗುತ್ತದೆ ಎಂಬುದಕ್ಕೆ ಬಳ್ಳಾರಿಯಲ್ಲಿ ನಡೆದ ಈ ದುರ್ಘಟನೆಯೇ ಸಾಕ್ಷಿಯಾಗಿದೆ. ಗಂಡ ಕುಡಿಯುವ ಚಟಕ್ಕೆ ದಾಸನಾಗಿ ಮೈತುಂಬಾ ಸಾಲ ಮಾಡಿಕೊಂಡಿದ್ದಾನೆ. ಗಂಡ ಪದೇ ಪದೆ ಹಣಕ್ಕಾಗಿ ಪೀಡಿಸುತ್ತಿದ್ದಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆಗೆ ಶರಣಾಗಿದ್ದು, ಬಳಿಕ ಗಂಡನೂ ಸಾವಿನ ಹಾದಿ ಹಿಡಿದಿದ್ದಾನೆ. ಈ ದಂಪತಿಯ 16 ತಿಂಗಳ ಮಗು ಅನಾಥವಾಗಿದೆ.

ನಮ್ಮ ಸರ್ಕಾರ ಬಂದ್ರೆ ಬೇಡಿಕೆ ಈಡೇರಿಸೋದಾಗಿ ಹೇಳಿದ್ದ ಕಾಂಗ್ರೆಸ್‌ ನಾಯಕರು ಉಲ್ಟಾ ಹೊಡೆದಿದ್ದಾರೆ: ಆಟೋ ಚಾಲಕರ ಆಕ್ರೋಶ

ಹೌದು, ಸಾಲದ ಕಾಟಕ್ಕೆ ಪತಿ ಪತ್ನಿ ಇಬ್ಬರು ನೇಣಿಗೆ‌ ಶರಣಾಗಿದ್ದಾರೆ. ಹದಿನಾರು ತಿಂಗಳ ಮಗು‌ಬಿಟ್ಟು ದಂಪತಿಗಳ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಣಿ ನಾಡು ಬಳ್ಳಾರಿಯಲ್ಲಿ ಹೃದಯ ವಿದ್ರಾವವಕ ಘಟನೆ ನಡೆದಿದೆ. ಬಳ್ಳಾರಿಯ ನಗರದ ಬಂಡಿಹಟ್ಟಿ‌ ಯಲ್ಲಿ ಘಟನೆ ನಡೆದಿದ್ದು, ಈರಣ್ಣ(28) ಪತ್ನಿ ದುರ್ಗಮ್ಮ(25)  ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ದಂಪತಿಯಾಗಿದ್ದಾರೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಹಾಗೆ, ಗಂಡ ಹೆಂಡತಿ ಸಾವಿನ ನಂತರ ಹದಿನಾರು ತಿಂಗಳ ಕೂಸು ಅನಾಥವಾಗಿದೆ.

Latest Videos
Follow Us:
Download App:
  • android
  • ios