Mandya: ವೈಯಕ್ತಿಕ ದ್ವೇಷಕ್ಕೆ 8000 ಲೀ. ಪೆಟ್ರೋಲ್ ರಸ್ತೆಗೆ ಚೆಲ್ಲಿದ ದುಷ್ಕರ್ಮಿಗಳು
ಹೊಸದಾಗಿ ಪೆಟ್ರೋಲ್ ಬಂಕ್ ತೆರೆದು ದುಡಿಮೆ ಆರಂಭಿಸಿದ್ದನ್ನು ಸಹಿಸದ ದುಷ್ಕರ್ಮಿಗಳು ಬಂಕ್‌ನಲ್ಲಿದ್ದ 8 ಸಾವಿರ ಲೀ. ಪೆಟ್ರೋಲ್ ಅನ್ನು ರಸ್ತೆಗೆ ಹರಿಬಿಟ್ಟಿದ್ದಾರೆ.
ಮಂಡ್ಯ (ಆ.22): ಮಂಡ್ಯದಲ್ಲಿ ಹೊಸದಾಗಿ ಪೆಟ್ರೋಲ್ ಬಂಕ್ ಆರಂಭಿಸಿದ್ದಕ್ಕೆ ವಿರೋಧಿಗಳ ಕಣ್ಣು ಮಾಲೀಕನ ಮೇಲೆ ಬಿದ್ದಿತ್ತು. ಇನ್ನು ಹಳೆಯ ವೈಯಕ್ತಿಕ ದ್ವೇಷಕ್ಕೆ ಸೇಡು ತೀರಿಸಿಕೊಳ್ಳಬೇಕು ಎಂದು ಕಾಯುತ್ತಿದ್ದ ದುಷ್ಕರ್ಮಿಗಳು ಪೆಟ್ರೋಲ್ ಬಂಕ್‌ನಲ್ಲಿದ್ದ 8 ಸಾವಿರ ಲೀಟರ್ ಪೆಟ್ರೋಲ್‌ಮತ್ತು 2 ಸಾವಿರ ಲೀ. ಡೀಸೆಲ್ ಅನ್ನು ರಸ್ತೆಗೆ ಹರಿಸಿದ್ದಾರೆ. ಈ ಮೂಲಕ ಮಾಲೀಕನಿಗೆ ಬರೋಬ್ಬರಿ 10 ಲಕ್ಷ ರೂ. ನಷ್ಟವನ್ನುಂಟು ಮಾಡಿದ್ದಾರೆ.
ಗ್ರಾಮದ ಹೊರಭಾಗದಲ್ಲಿ ಹೊಸದಾಗಿ ಪೆಟ್ರೋಲ್ ಬಂಕ್ ಆರಂಭಿಸಿ ಎರಡು ತಿಂಗಳು ಕೂಡ ಕಳೆದಿರಲಿಲ್ಲ. ಇನ್ನೂ ಸಿಸಿಟಿವಿಯನ್ನೂ ಅಳವಡಿಕೆ ಮಾಡಿರಲಿಲ್ಲ. ಆರಂಭದಲ್ಲಿ ಪೆಟ್ರೋಲ್ ಪಂಪ್ ಆರಂಭಿಸಿ ನಿಧಾನವಾಗಿ ಇತರೆ ಕಾಮಗಾರಿಗಳನ್ನು ಮಾಡಲಾಗುತ್ತಿತ್ತು. ಆದರೆ, ಇದನ್ನೇ ಲಾಭವನ್ನಾಗಿ ಮಾಡಿಕೊಂಡಿದ್ದ ದುಷ್ಕರ್ಮಿಗಳು ಪೆಟ್ರೋಲ್ ಬಂಕ್ ಮಾಲೀಕ ಸಂಗ್ರಹಣೆ ಮಾಡಿದ್ದ ಅಷ್ಟೋ ಪೆಟ್ರೋಲ್ (8000 ಲೀ) ಹಾಗೂ ಡೀಸೆಲ್ (2000 ಲೀ) ಅನ್ನು ರಸ್ತೆಗೆ ಹರಿಸಿ ಪರಾರಿ ಆಗಿದ್ದಾರೆ.
ಕೆಆರ್‌ಎಸ್ ಜಲಾಶಯದ ನೀರು 105 ಅಡಿಗೆ ಕಸಿತ: ಮಂಡ್ಯ ರೈತರು, ಬಿಜೆಪಿಯಿಂದ ಕಾವೇರಿ ಹೋರಾಟ ಆರಂಭ
ಜನರೇಟರ್ ಆನ್ ಮಾಡಿ ಪೆಟ್ರೋಲ್ ಹರಿಬಿಟ್ಟರು: ಇನ್ನು ಈ ಘಟನೆ ನಡೆದಿರುವುದು ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಬೇಬಿ ಗ್ರಾಮದಲ್ಲಿ. ಭಸ್ತಿರಂಗಪ್ಪ ಎನ್ನುವವರು ಕಳೆದ 2 ತಿಂಗಳ ಹಿಂದೆ ಬೇಬಿ ಗ್ರಾಮದ ಬಳಿ ಇಂಡಿಯನ್ ಪೆಟ್ರೋಲ್ ಬಂಕ್ ಆರಂಭಿಸಿದ್ದರು. ಆದರೆ, ವೈಯಕ್ತಿಕ ದ್ವೇಷಕ್ಕೆ ದುಷ್ಕರ್ಮಿಗಳು ರಾತ್ರೋರಾತ್ರಿ ಪೆಟ್ರೋಲ್ ಬಂಕ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಬಂಕ್‌ನ ಸಿಬ್ಬಂದಿ ಊಟಕ್ಕೆ ತೆರಳಿದ್ದರು. ಆದ್ದರಿಂದ ಹಣವನ್ನು ದೋಚಲು ಅನುಕೂಲವಾಗದ ಹಿನ್ನೆಲೆಯಲ್ಲು ಜನರೇಟರ್ ಆನ್ ಮಾಡಿ ಪೆಟ್ರೋಲ್ ಹಾಗೂ ಡಿಸೆಲ್ ಹೊರಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಘಟನೆ ಕುರಿತಂತೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರೈತರ ಹೋರಾಟದ ನಡುವೆಯೂ ತಮಿಳುನಾಡಿಗೆ 10 ಸಾಔಇರ ಕ್ಯೂಸೆಕ್ಸ್ ನೀರು: KRS ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡುಗಡೆ ಮುಂದುವರಿಕೆಯಿಂದ KRS ಡ್ಯಾಂನ ನೀರಿನ ಮಟ್ಟ ಕುಸಿಯುತ್ತಿದೆ. ಮಂಗಳವಾರ ಬೆಳಗ್ಗೆ ವೇಳೆಗೆ ಕೆಆರ್‌ಎಸ್ ಜಲಾಶಯದಲ್ಲಿ 104 ಅಡಿಗೆ ಕುಸಿತ ಕಂಡಿದೆ. ಒಂದೇ ದಿನಕ್ಕೆ ಒಂದು ಅಡಿಯಷ್ಟು ನೀರಿನ ಪ್ರಮಾಣ ಕುಸಿದಿದೆ. ಇದರಿಂದ ಕಾವೇರಿ ಕೊಳ್ಳದ ರೈತರಲ್ಲಿ ಹೆಚ್ಚಾದ ಆತಂಕ ಮತ್ತಷ್ಟು ಹೆಚ್ಚಾಗುತ್ತಿದೆ. ರೈತರು ಹಾಗೂ ಬಿಜೆಪಿ ಹೋರಾಟದ ನಡುವೆಯೂ ತಮಿಳುನಾಡಿಗೆ ನೀರು ಬಿಡುಗಡೆ ಇಂದು 10,841 ಕ್ಯೂಸೆಕಸ್ ನೀರನ್ನು ಬಿಡುಗಡೆ ಮಾಡಲಾಗಿದೆ. ನಿನ್ನೆಗಿಂತ ಅಲ್ಪ ಪ್ರಮಾಣದ ನೀರು ಕಡಿಮೆ ಮಾಡಿದ್ದು, ನಿನ್ನೆ 12,631 ಕ್ಯೂಸೆಕ್ ನೀರನ್ನ ತಮಿಳುನಾಡಿಗೆ ಬಿಡಲಾಗುತ್ತಿತ್ತು. ಇಂದು 2 ಸಾವಿರ ಕ್ಯೂಸೆಕ್ ಕಡಿಮೆ ಮಾಡಲಾಗಿದೆ.
Bengaluru ಪೋಸ್ಟ್ ಮಾಸ್ಟರ್ ಕೆಲಸಕ್ಕೆ ಮನಸೋತ ಮೈಕ್ರೋಸಾಫ್ಟ್ ಸಿಇಒ ಬಿಲ್‌ಗೇಟ್ಸ್
104 ಅಡಿಗೆ ಇಳಿಕೆಯಾದ ನೀರಿನ ಮಟ್ಟ: ನಾಲೆಗಳಿಗೆ ಸೇರಿ ಡ್ಯಾಂನಿಂದ ಒಟ್ಟಾರೆ 13,457 ಕ್ಯೂಸೆಕ್ ಹೊರಹರಿವು ಮಾಡಲಾಗುತ್ತಿದೆ. ಆದರೆ, ಜಲಾಶಯಕ್ಕೆ ಒಳಹರಿವು ಪ್ರಮಾಣ ಮಾತ್ರ 5,269 ಕ್ಯೂಸೆಕ್ ಇದೆ. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 104.90 ಅಡಿ ನೀರು ಸಂಗ್ರಹವಿದೆ. ಅಂದರೆ, 49.542 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಕೇವಲ 26.899 ಟಿಎಂಸಿ ನೀರು ಮಾತ್ರ ಶೇಖರಣೆಯಿದೆ.