ತನ್ನ ತವರು ಮನೆಯಿಂದ .2 ಲಕ್ಷ ವರದಕ್ಷಿಣೆ ತರಲು ನಿರಾಕರಿಸಿದ ಕಾರಣಕ್ಕೆ ಚಾಲಕನೊಬ್ಬ ಕತ್ತು ಹಿಸುಕಿ ಪತ್ನಿಯನ್ನು ಕೊಂದಿರುವ ಘಟನೆ ಸುಂಕದಕಟ್ಟೆ ಸಮೀಪ ನಡೆದಿದೆ.

ಬೆಂಗಳೂರು (ಮಾ.27): ತನ್ನ ತವರು ಮನೆಯಿಂದ .2 ಲಕ್ಷ ವರದಕ್ಷಿಣೆ ತರಲು ನಿರಾಕರಿಸಿದ ಕಾರಣಕ್ಕೆ ಚಾಲಕನೊಬ್ಬ ಕತ್ತು ಹಿಸುಕಿ ಪತ್ನಿಯನ್ನು ಕೊಂದಿರುವ ಘಟನೆ ಸುಂಕದಕಟ್ಟೆ ಸಮೀಪ ನಡೆದಿದೆ. ಮುನೇಶ್ವರ ನಗರದ ನಿವಾಸಿ ಸೌಮ್ಯ(25) ಕೊಲೆಯಾದ ದುರ್ದೈವಿ. ಈ ಸಂಬಂಧ ಮೃತಳ ಪತಿ ಯೋಗೀಶ್‌ನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಟೋ ಸಾಲ ತೀರಿಸಲು .2 ಲಕ್ಷ ತರುವಂತೆ ಪತ್ನಿ ಜತೆ ಯೋಗೀಶ್‌ ಗುರುವಾರ ಸಂಜೆ ಜಗಳವಾಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. 

ಈ ಹಂತದಲ್ಲಿ ಕೆರಳಿದ ಆತ, ಪತ್ನಿ ಕುತ್ತಿಗೆಯನ್ನು ದುಪಟ್ಟದಿಂದ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಪೋಷಕರಿಗೆ ಕರೆ ಮಾಡಿ ಸೌಮ್ಯ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದಿದ್ದಾನೆ. ಮಗಳ ಸಾವಿನ ವಿಚಾರ ತಿಳಿದು ದೌಡಾಯಿಸಿ ನಗರಕ್ಕೆ ಬಂದ ಮೃತಳ ಪೋಷಕರು, ಪುತ್ರಿ ಸಾವಿನ ಬಗ್ಗೆ ಅನುಮಾನಗೊಂಡು ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಆಗ ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲಿಸಿದಾಗ ಸೌಮ್ಯಳನ್ನು ಆಕೆಯ ಪತಿಯೇ ಕೊಂದಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Dowry Harassment: ಗರ್ಭಿಣಿ ಪತ್ನಿಯನ್ನು ಸಿಗರೇಟ್‌ನಿಂದ ಸುಡ್ತಿದ್ದ ಕುಂದಾಪುರದ ಗಂಡ

ಪ್ರೇಮ ವಿವಾಹ: ಮೂರು ವರ್ಷದ ಹಿಂದೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್‌ನ ಯೋಗೀಶ್‌ ಹಾಗೂ ತಾವರೆಕೆರೆ ಸಮೀಪದ ಮಂಚನಹಳ್ಳಿ ಗ್ರಾಮದ ಸೌಮ್ಯ ಪ್ರೇಮ ವಿವಾಹವಾಗಿದ್ದರು. ಮೊದಲು ಆಟೋ ಓಡಿಸುತ್ತಿದ್ದ ಯೋಗೀಶ್‌, ಇತ್ತೀಚಿಗೆ ಕೆಲಸವಿಲ್ಲದೆ ಅಲೆಯುತ್ತಿದ್ದ. ಗಾರ್ಮೆಂಟ್ಸ್‌ನಲ್ಲಿ ಸೌಮ್ಯ ದುಡಿಯುತ್ತಿದ್ದಳು. ಮದುವೆಯಾದ ಬಳಿಕ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಜಗಳವಾಗಿದೆ. ತವರುಮನೆಯಿಂದ ವರದಕ್ಷಿಣೆ ತರುವಂತೆ ಪತ್ನಿಗೆ ಯೋಗೀಶ್‌ ಕಿರುಕುಳ ಕೊಡಲಾರಂಭಿಸಿದ. 

ಈ ಹಿಂಸೆ ಸಹಿಸಲಾರದೆ ಎರಡು ಬಾರಿ ಸುಮಾರು .3 ಲಕ್ಷ ಹಣವನ್ನು ತನ್ನ ಪೋಷಕರಿಂದ ಪಡೆದು ಪತಿಗೆ ಸೌಮ್ಯ ಕೊಟ್ಟಿದ್ದಳು. ಈಗ ಮತ್ತೆ .2 ಲಕ್ಷಕ್ಕೆ ಆತ ಪೀಡಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸಾಲ ತೀರಿಸದ ಕಾರಣಕ್ಕೆ ಯೋಗೀಶ್‌ನ ಆಟೋವನ್ನು ಬ್ಯಾಂಕಿನವರು ಜಪ್ತಿ ಮಾಡಿದ್ದರು. ಈ ಸಾಲ ತೀರಿಸಲು ಹಣ ತರುವಂತೆ ಸೌಮ್ಯಳಿಗೆ ಯೋಗೀಶ್‌ ಒತ್ತಾಯಿಸುತ್ತಿದ್ದ. ಇದೇ ವಿಚಾರವಾಗಿ ಗುರುವಾರ ಸಂಜೆ ದಂಪತಿ ಮಧ್ಯೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Suicide Cases: ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆ ಆತ್ಮಹತ್ಯೆ

ವರದಕ್ಷಿಣೆ ಕಿರುಕುಳ, ಅಕ್ರಮ ಸಂಬಂಧ: ಗಂಡನ ಅಕ್ರಮ ಸಂಬಂಧ ಹಾಗೂ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಗಾಯತ್ರಿನಗರದಲ್ಲಿ ತಡರಾತ್ರಿ ಸಂಭವಿಸಿದೆ. ಹೌದು ಎಂಕಾಂ ಮಾಡಿದ್ದ ವಿದ್ಯಾಶ್ರೀ ಖಾಸಗಿ ಕಂಪನಿ ಯಲ್ಲಿ ಕೆಲಸ ಮಾಡ್ತಿದ್ದರು. ಹೀಗಿರುವಾಗ ರಾಕೇಶ್ ಎಂಬಾತನ ಜೊತೆ ಒಂಭತ್ತು ತಿಂಗಳ ಹಿಂದೆ ಪ್ರೀತಿಸಿ ಮನೆಯಲ್ಲಿ ಒಪ್ಪಿಸಿ ಮದುವೆಯಾಗಿದ್ದರು. ಆದರೆ ಪ್ರೀತಿಸಿ ಮದುವೆಯಾಗಿದ್ದರೂ ವರದಕ್ಷಿಣೆ ಕಿರುಕುಳ ಮಾತ್ರ ತಪ್ಪಿರಲಿಲ್ಲ. ಅಲ್ಲದೇ ಮದುವೆಯಾಗಿದ್ರೂ ಯುವತಿಯರ ಜೊತೆ ಪತಿಗೆ ದೈಹಿಕ ಸಂಬಂಧವಿತ್ತೆಂಬ ಆರೋಪವೂ ಕೇಳಿ ಬಂದಿದೆ. 

ಇವೆಲ್ಲದರಿಂದ ನೊಂದ ವಿದ್ಯಾಶ್ರೀ ಯು ಆರ್ ಎ ಸ್ಯಾಡಿಸ್ಟ್ ಅಂಡ್ ಸೈಕೋ, ಯು ಆರ್ ದ ವರ್ಸ್ಟ್ ಪರ್ಸನ್ ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ರಾತ್ರಿ ಏಳು ಗಂಟೆಗೆ ಸುಮಾರಿಗೆ ಈ ಘಟನೆ ನಡೆದಿದ್ದು, ವಿದ್ಯಾಶ್ರೀ ಆತ್ಮಹತ್ಯೆ ಮಾಡಿಕೊಂಡ ವೇಳೆ ಗಂಡ ಮನೆಯಲ್ಲಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಸುಬ್ರಮಣ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ರಾಕೇಶ್‌ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.