Dowry Harassment: ಗರ್ಭಿಣಿ ಪತ್ನಿಯನ್ನು ಸಿಗರೇಟ್‌ನಿಂದ ಸುಡ್ತಿದ್ದ ಕುಂದಾಪುರದ ಗಂಡ

* ವರದಕ್ಷಿಣೆಗಾಗಿ ಪತ್ನಿಗೆ ಸಿಗರೇಟ್‌ನಿಂದ ಸುಟ್ಟಪತಿ ಬಂಧನ
* ಗರ್ಭಿಣಿ ಪತ್ನಿಗೆ ಚಿತ್ರಹಿಂಸೆ ನೀಡಿದ ಪತಿಮಹಾಶಯ
* ಚಿತ್ರ ಹಿಂಸೆ ವಿಡಿಯೋವನ್ನು ಕುಟುಂಬದವರಿಗೆ ಕಳಿಸಿದ್ದ
* ಹಣ ಕೊಡಿ ಇಲ್ಲದಿದ್ದರೆ ನೋಡಿ ಎಂದು ಅವಾಜ್ ಹಾಕಿದ್ದ

Woman burnt for dowry Kundapur Husband Arrested mah

ಕುಂದಾಪುರ(ಮೇ. 02)  ವರದಕ್ಷಿಣೆಗಾಗಿ (Dowry) ಸಿಗರೇಟಿನಿಂದ ಸುಟ್ಟು ಗರ್ಭಿಣಿ ಪತ್ನಿಗೆ (Wife) ಚಿತ್ರಹಿಂಸೆ ನೀಡಿದ ಪತಿಮಹಾಶಯನನ್ನು ಕುಂದಾಪುರ (Kundapur) ಪೊಲೀಸರು (Arrest) ಬಂಧಿಸಿದ್ದಾರೆ.

ಕುಂದಾಪುರದ ಬರೆಕಟ್ಟು ನಿವಾಸಿ ಪ್ರದೀಪ್‌ ಬಂಧಿತ ಆರೋಪಿ. ಈತ ತನ್ನ ಪತ್ನಿ ಪ್ರಿಯಾಂಕಗೆ ವರದಕ್ಷಿಣೆ ತರುವಂತೆ ಪೀಡಿಸಿ ಸಿಗರೇಟಿನಿಂದ ಮುಖಕ್ಕೆ ಸುಟ್ಟು ಚಿತ್ರಹಿಂಸೆ ನೀಡುತ್ತಿರುವ ವೀಡಿಯೋ ವೈರಲ್‌ ಆಗಿತ್ತು. ಚಿತ್ರಹಿಂಸೆ ಬಗ್ಗೆ ಪ್ರಿಯಾಂಕ ಪೊಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಘಟನೆ ವಿವರ: ಪತ್ನಿಗೆ ಚಿತ್ರಹಿಂಸೆ ನೀಡುತ್ತಿರುವ ವೀಡಿಯೋವನ್ನು ಪತ್ನಿಯ ಹೆತ್ತವರಿಗೆ ಕಳಿಸಿದ್ದ. ಪ್ರದೀಪ್‌ ಹಾಗೂ ಪ್ರಿಯಾಂಕ ಪ್ರೀತಿಸುತ್ತಿದ್ದು, ಕಳೆದ ಅಕ್ಟೋಬರ್‌ನಲ್ಲಿ ಕೊಲ್ಲೂರಿನಲ್ಲಿ ವಿವಾಹವಾಗಿದ್ದರು. ಮದುವೆಯಾಗಿ ಐದು ತಿಂಗಳು ಕಳೆಯುತ್ತಿದ್ದಂತೆಯೇ ಪ್ರದೀಪ್‌ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದ ಈತ ತನ್ನ ಪ್ರಿಯಾಂಕಾಗೆ ಸಿಗರೇಟಿನಿಂದ ಮುಖಕ್ಕೆ ಸುಟ್ಟು ಚಿತ್ರಹಿಂಸೆ ನೀಡುತ್ತಿದ್ದ. ಪ್ರಿಯಾಂಕ ‘ಕೈಮುಗಿದು ಬೇಡುವೆ ಸುಡಬೇಡಿ’ ಎಂದು ಪರಿಪರಿಯಾಗಿ ಬೇಡಿಕೊಂಡರೂ, ಕಾಲಿಗೆ ಬೀಳುತ್ತೇನೆ ಕೇಳದ ಆತ ಬಳಿಕ ಮಗುವನ್ನು ಕೊಲ್ಲುವುದಾಗಿ ಹೇಳಿ ಆಕೆಯ ಹೊಟ್ಟೆಗೆ ತುಳಿದಿದ್ದಾನೆ. ಈ ವೇಳೆ ಪ್ರಿಯಾಂಕ ತಪ್ಪಿಸಿಕೊಂಡ ಪರಿಣಾಮ ಆಕೆಯ ಸೊಂಟಕ್ಕೆ ಪೆಟ್ಟು ತಗುಲಿದೆ

Women Empowerment: ವರದಕ್ಷಿಣೆ ಹಣದಲ್ಲಿ ಹಾಸ್ಟೆಲ್‌ ನಿರ್ಮಿಸಿ ಎಂದ ಮಗಳು, ಖಾಲಿ ಚೆಕ್‌ ಕೊಟ್ಟ ಅಪ್ಪ

ಬಳಿಕ ಆರೋಪಿ ಪ್ರದೀಪನೇ ತಾನು ಮಾಡಿದ ಕೃತ್ಯದ ವೀಡಿಯೋವನ್ನು ಪ್ರಿಯಾಂಕ ಪೋಷಕರಿಗೆ ಕಳುಹಿಸಿ 2 ಲಕ್ಷ ರು. ಹಣ ಹಾಗೂ 4 ಪವನ್‌ ಚಿನ್ನಕ್ಕೆ ಬೇಡಿಕೆ ಇಟ್ಟಿದ್ದ. ಒಂದು ವೇಳೆ ನೀಡದಿದ್ದಲ್ಲಿ ಕೊಲ್ಲುವುದಾಗಿ ಹೇಳಿ ಕೊಲೆ ಬೆದರಿಕೆಯೊಡ್ಡಿದ್ದಾನೆ ಎಂದು ಪ್ರಿಯಾಂಕ ಕುಂದಾಪುರ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಬಳಿಕ ಆರೋಪಿ ನಾಪತ್ತೆಯಾಗಿದ್ದ. ಪ್ರಿಯಾಂಕ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಪ್ರದೀಪ್‌ನನ್ನು ಬಂಧಿಸಿ ಇದೀಗ ವಿಚಾರಣೆ ನಡೆಸುತ್ತಿದ್ದಾರೆ. 


ಹೀನ ಕೆಲಸ ಮಾಡ್ತಿದ್ದ ಪತಿರಾಯ:  ಪತಿಯೇ ನನ್ನ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಾಕುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬಸವನಗುಡಿ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.  ಲಕ್ಕಸಂದ್ರದ 25 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು, ಹನುಮಂತ ನಗರದ ನಿವಾಸಿ ಉದ್ಯಮಿ ಪ್ರಗತ್‌ ಪುರುಷೋತ್ತಮ್‌(32) ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು.

 ಏಳು ವರ್ಷದ ಹಿಂದೆ ಪ್ರಗತ್‌ನೊಂದಿಗೆ ನನ್ನನ್ನು ವಿವಾಹ ಮಾಡಿದ್ದರು. ಈ ವೇಳೆ ಪ್ರಗತ್‌ಗೆ ಅರ್ಧ ಕೆ.ಜಿ. ಚಿನ್ನಾಭರಣ, 15 ಕೆ.ಜಿ. ಬೆಳ್ಳಿ ಸೇರಿದಂತೆ ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆರಂಭದಲ್ಲಿ ವೈವಾಹಿಕ ಜೀವನ ಚೆನ್ನಾಗಿತ್ತು.  ಬಳಿಕ ಪ್ರಗತ್‌, ತವರು ಮನೆಯಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದ. ಈ ವಿಚಾರವನ್ನು ತವರು ಮನೆಗೆ ತಿಳಿಸಿದಾಗ, ಪ್ರಗತ್‌ಗೆ .40 ಲಕ್ಷ ವರದಕ್ಷಿಣೆ ನೀಡಲಾಗಿತ್ತು ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದರು.

ಇಷ್ಟಕ್ಕೆ ತೃಪ್ತರಾಗದ ಪ್ರಗತ್‌, ಮದ್ಯಪಾನ ಮಾಡಿ ಮನೆಗೆ ಬಂದು ಬಲವಂತವಾಗಿ ಮೊಬೈಲ್‌ನಲ್ಲಿ ನನ್ನ ನಗ್ನ ಫೋಟೋ ತೆಗೆಯುತ್ತಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕುತ್ತಿದ್ದ. ಅಲ್ಲದೆ, ನಿನ್ನ ತಂದೆಯ ಅರ್ಧ ಆಸ್ತಿಯನ್ನು ನನ್ನ ಹೆಸರಿಗೆ ಬರೆಸಬೇಕು ಎಂದು ಒತ್ತಡ ಹೇರುತ್ತಿದ್ದ.  ಬಳಿಕ ನೀನು ವಿಚ್ಛೇದನ ಕೊಡಬೇಕು. ಇಲ್ಲವಾದರೆ, ನಿನ್ನ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತೇನೆ ಎಂದು ನಿರಂತರವಾಗಿ ಕಿರುಕುಳ ನೀಡುತ್ತಿದ್ದ. 

ಶಿವಮೊಗ್ಗ ಪ್ರಕರಣ: ಶಿವಮೊಗ್ಗದ ರಿಪ್ಪನ್ ಪೇಟೆಯಿಂದ ಘಟನೆ ವರದಿಯಾಗಿತ್ತು.  ಚಿಕ್ಕಮಗಳೂರು ಜಿಲ್ಲೆಯ ವೆಲ್ ಕಮ್ ಗೇಟ್ ನ ಸಂತ್ರಸ್ತೆಯ ಪತಿ ಸಲ್ಮಾನ್, ಅತ್ತೆ ಸಾಹೀರಾ, ಮಾವ ಶೌಕತ್ ಖಾನ್ ಮತ್ತು ನಾದಿನಿ ಸಮೀನಾ ವಿರುದ್ಧ ಪ್ರಕರಣ ದಾಖಲಾಗಿತ್ತು. 

ಹೊಸನಗರ ಹುಂಚದ ಮಹಿಳೆಗೆ ಮತ್ತು  ಶೃಂಗೇರಿ  ವೆಲ್ ಕಮ್ ಗೇಟ್ ನ ಸಲ್ಮಾನ್ ಜತೆ ಕಳೆದ ವರ್ಷ ವಿವಾಹವಾಗಿತ್ತು. ವಿವಾಹದ ವೇಳೆ 90 ಗ್ರಾಂ ಬಂಗಾರ,  ಮೂರು ಲಕ್ಷ ರೂ. ವರದಕ್ಷಿಣೆ ನೀಡಲು ಸಂತ್ರಸ್ತ ಮಹಿಳೆ ತಂದೆ ಒಪ್ಪಿಗೆ ನೀಡಿದ್ದರು.  ಮದುವೆಗೆ ಮುಂಚೆ ಎರಡು ಲಕ್ಷ ರೂ. ಹಣ ಮತ್ತು ನಾಲ್ಕು ಗ್ರಾಂ ಉಂಗುರ ಮದುವೆ ಬಳಿಕ  90 ಗ್ರಾಂ ಬಂಗಾರ ಮತ್ತು ಗೃಹುಪಯೋಗಿ ಸಾಮಗ್ರಿಗಳನ್ನು ನೀಡಿದ್ದರು. ಆದರೂ ಸುಮ್ಮನಾಗದ ಪತಿಯ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. 


 

 

Latest Videos
Follow Us:
Download App:
  • android
  • ios