Crime news: ಯಾರದ್ದೋ ಜಗಳ; ಗಲಾಟೆ ಬಿಡಿಸಲು ಹೋದ ವ್ಯಕ್ತಿಯ ಕೊಲೆ!
ಬಸ್ ನಿಲ್ದಾಣದಲ್ಲಿ ಮಲಗಿದ್ದ ವ್ಯಕ್ತಿಯೋರ್ವ ಸೋಮವಾರ ಬೆಳಿಗ್ಗೆ ಸಾವನ್ನಪ್ಪಿದ್ದು, ಆತನನ್ನು ಹೊಡೆದು ಸಾಯಿಸಲಾಗಿದೆ ಎಂದು ಮೃತರ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಲೂರು: ಹೋಂಡಾ ಕಂಪನಿಯಲ್ಲಿ ದ್ವಿಚಕ್ರವಾಹನಗಳನ್ನು ಟ್ರಕ್ಕುಗಳಲ್ಲಿ ಕೊಂಡೊಯ್ಯಲು ಬಂದಿದ್ದ ಟ್ರಕ್ ಚಾಲಕರ ನಡೆವೆ ನಡೆಯುತ್ತಿದ್ದ ಗಲಾಟೆ ಬಿಡಿಸಲು ಹೋದ ಮತ್ತೊಬ್ಬ ಚಾಲಕನನ್ನು ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ ಕರಿನಾಯಕನಹಳ್ಳಿ ಗ್ರಾಮದ ಬಳಿ ಇರುವ ಹೋಂಡಾ ಫ್ಯಾಕ್ಟರಿಯ ಮುಂಭಾಗ ನಡೆದಿದೆ.
ಮೃತ ವ್ಯಕ್ತಿಯನ್ನು ಉತ್ತರ ಭಾರತ ಮೂಲದ ರಾಮಗೋಪಾಲ್ (60) ಎಂದು ಗುರುತಿಸಲಾಗಿದೆ. ಫ್ಯಾಕ್ಟರಿಯ ಮುಂದೆ ಲಾರಿಗೆ ವಾಹನ ದ್ವಿಚಕ್ರವಾಹನಗಳನ್ನು ಲೋಡ್ ಮಾಡಲು ನಿಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಲಾರಿಯ ಅಕ್ಕಪಕ್ಕ ನಿಲ್ಲಿಸಿದ್ದ ಲಾರಿ¿å ಚಾಲಕರು ಯಾವುದೋ ವಿಚಾರಕ್ಕೆ ಗಲಾಟೆÜ ಆರಂಭವಾಗಿದೆ. ಆಗ ಜಗಳವನ್ನು ಬಿಡಿಸಲು ಹೋದ ರಾಮ್ ಗೋಪಾಲ್ ಮೇಲೆ ಚರಣ್ ಸಿಂಗ್(54), ಅಜಯ್(32), ಪ್ರಕಾಶ್ ಸಿಂಗ್(25) ಎಂಬುವರು ರಾಡ್‌ನಿಂದ ಹೊಡೆದಿದ್ದಾರೆ. ತೀವ್ರ ಗಾಯಗೊಂಡ ರಾಮ್ ಗೋಪಾಲ್‌ನನ್ನು ತಕ್ಷಣ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಮ್ ಗೋಪಾಲ್ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹೊಸಪೇಟೆ: ಕ್ಷುಲ್ಲಕ ಕಾರಣ ಮಾತಿಗೆ ಮಾತು ಬೆಳೆದು ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯ!
ವ್ಯಕ್ತಿ ಸಾವು; ಕೊಲೆ ಶಂಕೆ
ಹೊಸದುರ್ಗ: ಬಸ್ ನಿಲ್ದಾಣದಲ್ಲಿ ಮಲಗಿದ್ದ ವ್ಯಕ್ತಿಯೋರ್ವ ಸೋಮವಾರ ಬೆಳಿಗ್ಗೆ ಸಾವನ್ನಪ್ಪಿದ್ದು, ಆತನನ್ನು ಹೊಡೆದು ಸಾಯಿಸಲಾಗಿದೆ ಎಂದು ಮೃತರ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಮೃತನನ್ನು ಬೆಲಗೂರು ಗ್ರಾಮದ ಕಾವಲು ಸಿದ್ದರಾಮಪ್ಪ (60) ಎಂದು ಗುರುತಿಸಲಾಗಿದೆ. ಬೆಲಗೂರಿನ ಮುರುಂಡಿ ತಿಮ್ಮಣ್ಣ ಹಾಗೂ ಮೃತನಾದ ಕಾವಲು ಸಿದ್ದರಾಮಪ್ಪ ನಡುವೆ ಭಾನುವಾರ ರಾತ್ರಿ ಗಲಾಟೆ ಆಗಿದೆ. ಸಿದ್ದರಾಮಪ್ಪ ಮುರುಂಡಿ ತಿಮ್ಮಣ್ಣಗೆ ಬೈಯ್ದಿದ್ದಾನೆ. ಇದರಿಂದ ಕುಪಿತನಾದ ತಿಮ್ಮಣ್ಣನ ಮಗ ರಘು ಅಲಿಯಾಸ್ ರಘುವೀರ ಸಿದ್ದರಾಮಪ್ಪನಿಗೆ ಹೊಡೆದಿದ್ದ ಎನ್ನಲಾಗಿದೆ. ಒದೆ ತಿಂದ ಸಿದ್ದರಾಮಪ್ಪ ಬೆಲಗೂರಿನ ಬಸ್ ನಿಲ್ದಾಣದಲ್ಲಿ ಬಂದು ಮಲಗಿದ್ದಾನೆ. ಆದರೆ ಬೆಳಿಗ್ಗೆ ನೋಡಲಾಗಿ, ಆತ ಸಾವನ್ನಪ್ಪಿದ್ದ ಎನ್ನಲಾಗಿದೆ. ಈ ಸಂಬಂಧ ಶ್ರೀರಾಂಪುರ ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೈನ ಮುನಿ ಹಂತಕರಿಗೆ ಕಠಿಣ ಶಿಕ್ಷೆಯಾಗಲಿ: ಸಚಿವ ಎಂ.ಬಿ.ಪಾಟೀಲ್