ಜೈನ ಮುನಿ ಹಂತಕರಿಗೆ ಕಠಿಣ ಶಿಕ್ಷೆಯಾಗಲಿ: ಸಚಿವ ಎಂ.ಬಿ.ಪಾಟೀಲ್

ಹಿರೇಕೋಡಿ ಜೈನ ಮುನಿ ಕೊಲೆ ಮಾಡಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಆ ದಿಸೆಯಲ್ಲಿ ಸರ್ಕಾರ ಹಾಗೂ ಗೃಹ ಸಚಿವರು ಕ್ರಮ ಕೈಗೊಳ್ಳಲಿದ್ದು, ನಮ್ಮ ಸರ್ಕಾರ ಇಂತಹ ಕೃತ್ಯಗಳಿಗೆ ಆಸ್ಪದ ಕೊಡುವುದಿಲ್ಲ ಎಂದು ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.

Jain monk murder case Let the murderers be severely punished says mb patil at belgum rav

ಬೆಳಗಾವಿ (ಜು.10) ಹಿರೇಕೋಡಿ ಜೈನ ಮುನಿ ಕೊಲೆ ಮಾಡಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಆ ದಿಸೆಯಲ್ಲಿ ಸರ್ಕಾರ ಹಾಗೂ ಗೃಹ ಸಚಿವರು ಕ್ರಮ ಕೈಗೊಳ್ಳಲಿದ್ದು, ನಮ್ಮ ಸರ್ಕಾರ ಇಂತಹ ಕೃತ್ಯಗಳಿಗೆ ಆಸ್ಪದ ಕೊಡುವುದಿಲ್ಲ ಎಂದು ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ(MB Patil) ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಮೇಲೆ ನಂಬಿಕೆ ಇಲ್ಲ. ಪೊಲೀಸರ ಮೇಲೆ ಸರ್ಕಾರದಿಂದ ಒತ್ತಡ ಹಾಕಲಾಗುತ್ತಿದೆ ಎಂಬ ಶಾಸಕ ಅಭಯ ಪಾಟೀಲ(Abhay patil MLA) ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕ ಅಭಯ ಪಾಟೀಲರು ಈ ರೀತಿ ಯಾವುದನ್ನೋ ಯಾವುದಕ್ಕೋ ಹೋಲಿಸಬಾರದು ಎಂದರು.

ಬಿಜೆಪಿ ನಾಯಕರ ವಿರುದ್ಧ ಎಂ.ಬಿ.ಪಾಟೀಲ್‌ ಹೊಸ ಬಾಂಬ್‌: ವಿಪಕ್ಷ ನಾಯಕನ ಆಯ್ಕೆಗೆ ಕೋಟಿ ಕೋಟಿ ಡೀಲ್‌ ?

ಇದರಲ್ಲಿ ಕಾಂಗ್ರೆಸ್‌ ಪಾತ್ರ ಏನಿದೆ?, ಶಾಸಕ ಲಕ್ಷ್ಮಣ ಸವದಿ(Laxman savadi MLA) ಕೂಡ ಅಲ್ಲಿಗೆ ಭೇಟಿ ನೀಡಿದ್ದಾರೆ. ಇಂತಹ ಕೃತ್ಯ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಆದ್ದರಿಂದ ಅಭಯ ಪಾಟೀಲ ಇದರಲ್ಲಿ ರಾಜಕೀಯ ಬೆರೆಸಬಾರದು. ಬೇರೆ ಬೇರೆ ಸರ್ಕಾರಗಳಿದ್ದಾಗ ಇಂತಹ ಘಟನೆಯಾಗಿವೆ. ಇವು ಹೇಯ ಕೃತ್ಯ ಇಂತಹ ಆರೋಪಿಗಳನ್ನು ಕ್ಷಮಿಸಬಾರದು ಎಂದರು.

ಕೃಷ್ಣಾ ತೀರದ ಜನರಿಗೆ ಬಜೆಟ್‌ನಲ್ಲಿ ಅನ್ಯಾಯವಾಗಿದೆ ನಿರಾಣಿ ಆರೋಪ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರೇನೂ ಮಾಡಿದ್ದಾರೆ ಎಂದು ಹೇಳಲಿ. ಕೃಷ್ಣ ಮೇಲ್ದಂಡೆ ಯೋಜನೆಯಡಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಧನ ಮೀಸಲಿಟ್ಟಿದ್ದರು ಎನ್ನುತ್ತಾರೆæ. ಆದರೆ, ಎಷ್ಟುಖರ್ಚು ಮಾಡಿರಿ, ಇಬ್ಬರಿಗಷ್ಟೇ ಕೊಟ್ಟಿದ್ದಾರೆ ಅವರಿಗೂ ಇನ್ನೂ ಹಣ ಮುಟ್ಟಿಲ್ಲ. 5 ಸಾವಿರ ಕೋಟಿಯಲ್ಲ ಐದು ಪೈಸೆನೂ ಕೊಟ್ಟಿಲ್ಲ ರಾಜಕೀಯ ಮಾಡಲು ನನ್ನ ಕ್ಷೇತ್ರಕ್ಕೆ ಬಂದು ಕಾರ್ಯಕ್ರಮ ಮಾಡಿದ್ದಾರೆ. ಆದರೆ, ಒಂದು ರುಪಾಯಿನೂ ಅವರು ಕೊಟ್ಟಿಲ್ಲ ಸಾಂಕೇತಿಕವಾಗಿ ಇಬ್ಬರಿಗೆ ಕೊಡುವ ಮೂಲಕ ಸುಮ್ಮನೇ ಕಣ್ಣೊರೆಸುವ ತಂತ್ರ ಮಾಡಿದ್ದಾರೆ ಎಂದು ದೂರಿದರು.

ಹಿಂದಿನ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಬಜೆಟ್‌ಗಿಂತ .4,000 ರಿಂದ ​.5,000 ಕೋಟಿ ಹೆಚ್ಚುವರಿ ಟೆಂಡರ್‌ ಕರೆದಿದ್ದಾರೆ. ನೀರಾವರಿ ಇಲಾಖೆಯಲ್ಲಿ .10ರಿಂದ ​15 ಸಾವಿರ ಕೋಟಿ ಹೆಚ್ಚುವರಿ ಟೆಂಡರ್‌ ಮಾಡಿದ್ದಾರೆ. ಇದೆಲ್ಲವೂ ಯಾಕೇ ಅನ್ನೋದು ಚೆನ್ನಾಗಿ ಗೊತ್ತಿದೆ ಎಂದು ಟಾಂಗ್‌ ನೀಡಿದರು.

 

'ಓರ್ವ ಸಾಧುವನ್ನು ಈ ರೀತಿ ಹತ್ಯೆ ಮಾಡಿದರೆ ಇನ್ನು ಸಾಮಾನ್ಯರ ಪಾಡೇನು? -ಪೇಜಾವರಶ್ರೀ

ಬಜೆಟ್‌ನಲ್ಲಿ ನೀರಾವರಿಗೆ ಅನುದಾನದ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಯೋಜನೆಗಳಿಗೆ .32 ಸಾವಿರ ಕೋಟಿ ಕೊಟ್ಟಿದ್ದೇವೆ. ಇದರೊಂದಿಗೆ ಹೊಸ ಯೋಜನೆ ಘೋಷಿಸಿದ್ದೇವೆ. ಬರುವ 8ರಿಂದ ​9 ತಿಂಗಳಲ್ಲಿ ಹೊಸ ಬಜೆಟ್‌ ಬರುತ್ತದೆ. ಆಗ ಹೆಚ್ಚಿನ ಯೋಜನೆಗಳಿಗೆ ಹಣ ಮೀಸಲಿಡುತ್ತೇವೆ ಎಂದರು.

Latest Videos
Follow Us:
Download App:
  • android
  • ios