ದುಷ್ಕರ್ಮಿಗಳು ಕುಡಿದ ಮತ್ತಿನಲ್ಲಿ ವ್ಯಕ್ತಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಹೊರವಲಯದ ಧೂಳ್ ಪೇಟೆಯಲ್ಲಿ ನಡೆದಿದೆ.

ವಿಜಯನಗರ (ಜು.9): ದುಷ್ಕರ್ಮಿಗಳು ಕುಡಿದ ಮತ್ತಿನಲ್ಲಿ ವ್ಯಕ್ತಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಹೊರವಲಯದ ಧೂಳ್ ಪೇಟೆಯಲ್ಲಿ ನಡೆದಿದೆ.

ಶ್ರೀನಿವಾಸ್ ಅಲಿಯಾಸ್ ಮುಕ್ಕಣ್ಣ ( 24) ಕೊಲೆಯಾದ ವ್ಯಕ್ತಿ. ಆಚಾರಿವರ್ಮ( 23) , ಪ್ರತಾಪ್ ( 25) ಕೊಲೆ ಮಾಡಿದ ಆರೋಪಿಗಳು. ನಿನ್ನೆ ಸಾಯಂಕಾಲ ಆರೋಪಿಗಳು ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಜೊತೆಗೆ ಜಗಳ ಮಾಡಿದ್ದಾರೆ. ಇದೇ ದ್ವೇಷದಿಂದ ತಡರಾತ್ರಿ ಮತ್ತೆ ವ್ಯಕ್ತಿಯೊಂದಿಗೆ ಜಗಳ ತೆಗೆದಿರುವ ದುಷ್ಕರ್ಮಿಗಳು. ಮಾತಿಗೆ ಮಾತಿಗೆ ಬೆಳೆದು ವಿಕೋಪಕ್ಕೆ ತಿರುಗಿದೆ. ಆಚಾರಿವರ್ಮ ಮತ್ತು ಪ್ರತಾಪ್ ಇಬ್ಬರೂ ಸೇರಿ ಚಾಕುವಿನಿಂದ ಇರಿದು ಶ್ರೀನಿವಾಸ್ ಅಲಿಯಾಸ್ ಮುಕ್ಕಣ್ಣನನ್ನು ಕೊಲೆ ಮಾಡಿದ್ದಾರೆ. 

ಮದುವೆ‌‌ ವಿಚಾರದಲ್ಲಿ ಬೇಸರ: ಬೆಂಗಳೂರಿನ ಬೆಸ್ಕಾಂ ಇಂಜಿನಿಯರ್ ಪಾವಗಡದಲ್ಲಿ ಆತ್ಮಹತ್ಯೆ

ಕೊಲೆಯಾದ ಶ್ರೀನಿವಾಸನ ಅಣ್ಣ ರಮೇಶ್ ನೀಡಿದ ದೂರಿನ ಆಧಾರದ ಮೇಲೆ ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ ಸದ್ಯ ಕೊಲೆಗೆ ಕಾರಣ ಏನು ಎಂಬ ಬಗ್ಗೆ ತಿಳಿಯಲು ತನಿಖೆ ಚುರುಕುಗೊಳಿಸಿರುವ ಪೊಲೀಸರು.

ಕುಡಿದ ಅಮಲಿನಲ್ಲಿ ಬೆಂಕಿ ಹೆಚ್ಚಿಕೊಂಡು ಯುವಕ ಆತ್ಮಹತ್ಯೆ

ಮಂಡ್ಯ: ಕುಡಿದ ಅಮಲಿನಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿ​ರುವ ಘಟನೆ ತಾಲೂಕಿನ ಚನ್ನಪ್ಪನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಾರಾಯಣ ಅವರ ಪುತ್ರ ಸುರೇಶ (24) ಮೃತ ಯುವಕ. ವಿಪರೀತ ಕುಡಿತದ ಚಟ ಹೊಂದಿದ್ದ ಯುವಕ ಹೊಟ್ಟೆನೋವಿನಿಂದ ಬಳಲುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದನು. ಈತನ ಸಂಬಂಧಿಕರು ಸಮಾಧಾನಪಡಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೆಂಕಿ ಹಚ್ಚಿಕೊಂಡು ತೀವ್ರ ಗಾಯಗೊಂಡಿದ್ದ ಯುವಕನನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಸ್ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್‌: ವರ್ಗಾವಣೆಗೆ ಬೇಸತ್ರಾ ಜಗದೀಶ್‌..?