ಕೈಕೊಟ್ಟ ಗರ್ಲ್‌ಫ್ರೆಂಡ್‌ನ ಕಿಡ್ನಾಪ್‌ ಮಾಡ್ದ : ಮುಖದ ಮೇಲೆ ತನ್ನ ಹೆಸರನ್ನೇ ಟ್ಯಾಟೂ ಹಾಕ್ಸಿದ

ಪ್ರೀತಿಸಿದ ಯುವತಿ ಕೈ ಕೊಟ್ಟಳು ಎಂದು ಸಿಟ್ಟಿಗೆದ್ದ ಯುವಕ ಆಕೆಯ ಮೇಲೆ ವಿಚಿತ್ರವಾಗಿ ಸೇಡು ತೀರಿಸಿಕೊಂಡ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಮಾಜಿ ಗೆಳತಿಯನ್ನು ಅಪಹರಿಸಿದ ಯುವಕ ಆಕೆಯ ಮುಖದ ಮೇಲೆ ದೊಡ್ಡದಾಗಿ ತನ್ನ ಹೆಸರನ್ನು ಹಚ್ಚೆ ಹಾಕಿಸಿದ್ದಾನೆ. 

a man kidnapping his ex girlfriend and tattooing his name on her face akb

ಪ್ರೀತಿಸಿದ ಯುವತಿ ಕೈ ಕೊಟ್ಟಳು ಎಂದು ಸಿಟ್ಟಿಗೆದ್ದ ಯುವಕ ಆಕೆಯ ಮೇಲೆ ವಿಚಿತ್ರವಾಗಿ ಸೇಡು ತೀರಿಸಿಕೊಂಡ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಮಾಜಿ ಗೆಳತಿಯನ್ನು ಅಪಹರಿಸಿದ ಯುವಕ ಆಕೆಯ ಮುಖದ ಮೇಲೆ ದೊಡ್ಡದಾಗಿ ತನ್ನ ಹೆಸರನ್ನು ಹಚ್ಚೆ ಹಾಕಿಸಿದ್ದಾನೆ. 

ಬ್ರೆಜಿಲ್‌ನ ಸಾವೊ ಪಾಲೊ (Sao Paulo) ರಾಜ್ಯದ 18 ವರ್ಷದ ತಯಾನೆ ಕಾಲ್ಡಾಸ್ ಎಂಬ ಯುವತಿ ಶಾಲೆಗೆ ಹೋಗುತ್ತಿದ್ದಾಗ, ಆಕೆಯ ಮಾಜಿ ಗೆಳೆಯ ಗೇಬ್ರಿಯಲ್ ಕೊಯೆಲ್ಹೋ ( Gabriel Coelho) ಎಂಬಾತ ಆಕೆಯನ್ನು ತನ್ನ ಕಾರಿಗೆ ಹತ್ತುವಂತೆ ಒತ್ತಾಯಿಸಿದ್ದಾನೆ. ಒಂದು ವೇಳೆ ಕಾರಿಗೆ ಹತ್ತದಿದ್ದರೆ ಹಲ್ಲೆ ನಡೆಸುವೆ ಎಂದು ಆತ ಬೆದರಿಸಿದ್ದರಿಂದ ಯುವತಿ ಕಾರು ಹತ್ತಿದ್ದಾಳೆ. ನಂತರ ಆತ ಆಕೆಯನ್ನು ತೌಬಟೆ ಪುರಸಭೆಯಲ್ಲಿರುವ ತನ್ನ ಮನೆಗೆ ಕರೆದೊಯ್ದಿದ್ದಾನೆ.

ಪ್ರೀತ್ಸೆ..ಪ್ರೀತ್ಸೆ ಅಂತ ಯುವತಿಯ ಜೀವ ತಿಂದ ಭಗ್ನ ಪ್ರೇಮಿ...!

ಅಲ್ಲಿ 20 ವರ್ಷದ  ಗೇಬ್ರಿಯಲ್ ಕೊಯೆಲ್ಹೋ ಆತನ ಪೂರ್ಣ ಹೆಸರನ್ನು ಯುವತಿಯ ಬಲಭಾಗದ ಕೆನ್ನೆ ಮೇಲೆ  ಕಿವಿಯಿಂದ ಗಲ್ಲದವರೆಗೆ ಹಚ್ಚೆ ಹಾಕಿದ್ದಾನೆ. ಅಲ್ಲದೇ ಈ ವೇಳೆ ತಯಾನೆ ಖುಷಿಯಾಗಿದ್ದಳು ಎಂದು ಯುವಕ ಹೇಳಿದ್ದಾನೆ. ಮರುದಿನ ಯುವತಿ ತಯಾನೆ ಅವರ ತಾಯಿ ಸ್ಥಳೀಯ ಪೊಲೀಸರಿಗೆ ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದು, ಪೊಲೀಸರು ಕೊಯೆಲ್ಹೋ ನಿವಾಸದಲ್ಲಿ ಆಕೆಯನ್ನು  ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ತಾಯಿ ಮಗಳನ್ನು ಮನೆಗೆ ಕರೆದೊಯ್ದಿದ್ದು, ಮಗಳ ಮಾಜಿ ಗೆಳೆಯನ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ದೂರು ನೀಡಿದ್ದಾಳೆ. 

ಘಟನೆಯ ಬಳಿಕ ಗೇಬ್ರಿಯಲ್ ಕೊಯೆಲ್ಹೋ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಗೇಬ್ರಿಯಲ್ ಕೊಯೆಲ್ಹೋ  ಅವರ ತಂದೆ ಯುವತಿ ಟ್ಯಾಟೂ ಹಾಕಿರುವುದಕ್ಕೆ ಖುಷಿ ಪಟ್ಟಿದ್ದಾಳೆ ಎಂದು ಆರೋಪಿಸಿದ್ದಾರೆ. ಆದರೆ ಯುವತಿ ತಯಾನೆ ನಾನು ಆತನ ಬಗ್ಗೆ ಹೆದರುತ್ತಿದೆ ಎಂದು ಕ್ಯಾಲ್ಡಾಸ್ ಟಿವಿ ಬ್ಯಾಂಡ್ ವೇಲ್‌ಗೆ ತಿಳಿಸಿದ್ದಾರೆ. ಇಂದಿನ ಕಾನೂನಿನಿಂದಾಗಿ ಅವನು ಹೆಚ್ಚು ಕಾಲ (ಜೈಲಿನಲ್ಲಿ) ಉಳಿಯುವುದಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ಈ ಪರಿಸ್ಥಿತಿಯಿಂದಾಗಿ ನನಗೆ ಹೆದರಿಕೆಯಾಗುತ್ತಿದೆ ಎಂದು ಯುವತಿ ಹೇಳಿದ್ದಾಳೆ. ಯುವತಿಯ ವಕೀಲರು ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡ ನಂತರ ಹಲವಾರು ಬ್ರೆಜಿಲಿಯನ್ ಪ್ರಭಾವಿಗಳು ಮತ್ತು ಹಚ್ಚೆ ತೆಗೆಯುವ ಅಂಗಡಿಗಳವರು ಅವಳಿಗೆ ಸಹಾಯ ಮಾಡಲು ಸೇರಿಕೊಂಡರು. ಹೀಗಾಗಿ ಈ 18 ವರ್ಷದ ಯುವತಿ ಲೇಸರ್ ಮೂಲಕ ಈ ಹಚ್ಚೆ ತೆಗೆಯುವ ಮೊದಲ ಸೆಷನ್‌ಗೆ ಹಾಜರಾಗಿದ್ದಳು.

ಪ್ರೀತಿ ನಿರಾಕರಿಸಿದ್ದಕ್ಕೆ ಹುಡುಗಿ ಮೇಲೆ ಆ್ಯಸಿಡ್ ದಾಳಿ ಮಾಡಿದ ವಿಕೃತ ಪ್ರೇಮಿ

ಗೇಬ್ರಿಯಲ್ ಕೊಯೆಲ್ಹೋ ಹಾಗೂ  ತಯಾನೆ ಕಾಲ್ಡಾಸ್ ಇಬ್ಬರೂ 2019 ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು, ಮತ್ತು ಮೊದಲಿಗೆ ಎಲ್ಲವೂ ಸರಿಯಾಗಿ ನಡೆಯುತ್ತಿತ್ತು. ಸಂಬಂಧವು ಪ್ರಾರಂಭವಾದ ಸುಮಾರು ಒಂದು ವರ್ಷದ ನಂತರ, ಹಚ್ಚೆ ಕಲಾವಿದನೂ ಆಗಿರುವ ಕೊಯೆಲ್ಹೋ ಯುವತಿಯ ಮೇಲೆ ಅಸೂಯೆಗೊಂಡು ಹಲ್ಲೆ ಮಾಡಲು ಶುರು ಮಾಡಿದ್ದ. ಆ ಸಮಯದಲ್ಲಿ ಅವಳ ತಾಯಿ ಅವನನ್ನು ತೊರೆಯುವಂತೆ ಮನವೊಲಿಸಿದ್ದಳು.

ಎಂಟು ತಿಂಗಳ ಕಾಲ ಇಬ್ಬರೂ ಬೇರ್ಪಟ್ಟಿದ್ದರು. ಆದರೆ ಆತ  ಇನ್ನು ಮುಂದೆ ಅವಳನ್ನು ಹೊಡೆಯುವುದಿಲ್ಲ ಎಂದು ಭರವಸೆ ನೀಡಿದ ನಂತರ ಮತ್ತೆ ಇಬ್ಬರು ಒಟ್ಟಿಗೆ ಸೇರಿದ್ದರು. ಆದರೆ ಯುವಕ ಮತ್ತೆ ತನ್ನ ಭರವಸೆಯನ್ನು ಮುರಿದ ಎಂದು ತಿಳಿದು ಬಂದಿದೆ. ಹೀಗಾಗಿ ಹುಡುಗಿಯ ಪೋಷಕರು ಕೆಲವು ತಿಂಗಳುಗಳ ಕಾಲ ಅವಳನ್ನು ಸಾವೊ ಪಾಲೊಗೆ(Sao Paulo) ಕಳುಹಿಸಲು ಪ್ರಯತ್ನಿಸಿದರು. ಆದರೆ ಅವಳು ಟೌಬಾಟೆಗೆ (Taubaté)  ಹಿಂದಿರುಗಿದ ತಕ್ಷಣ, ಅವಳ ಮಾಜಿ ಗೆಳೆಯ ಮತ್ತೆ ಅವಳನ್ನು ಬೆದರಿಸಲು ಪ್ರಾರಂಭಿಸಿದ ಎಂದು ಪೊಲೀಸರು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios