Asianet Suvarna News Asianet Suvarna News

Hassan: ಜಮೀನು ವಿಷಯದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಜಮೀನು ವಿಷಯದಲ್ಲಿ ನಡೆದ ಜಗಳ- ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ತಿರುಮನಹಳ್ಳಿಯಲ್ಲಿ ನಡೆದಿದೆ. ಇಬ್ಬರು ಯೋಧರ ಕುಟುಂಬಗಳ ನಡುವೆ ಗಲಾಟೆಯಾಗಿದ್ದು, ಜಗಳದ ವೇಳೆ ಕುಡುಗೋಲಿನಿಂದ ಯೋಧ ಚಂದನ್ ಮತ್ತು ಆತನ ಕುಟುಂಬದವರಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. 

A fight over land ended in murder at hassan gvd
Author
First Published Nov 20, 2022, 1:42 PM IST

ಹಾಸನ (ನ.20): ಜಮೀನು ವಿಷಯದಲ್ಲಿ ನಡೆದ ಜಗಳ- ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ತಿರುಮನಹಳ್ಳಿಯಲ್ಲಿ ನಡೆದಿದೆ. ಇಬ್ಬರು ಯೋಧರ ಕುಟುಂಬಗಳ ನಡುವೆ ಗಲಾಟೆಯಾಗಿದ್ದು, ಜಗಳದ ವೇಳೆ ಕುಡುಗೋಲಿನಿಂದ ಯೋಧ ಚಂದನ್ ಮತ್ತು ಆತನ ಕುಟುಂಬದವರಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. 

ಯಶ್ವಂತ್ ಮತ್ತು ಯಶ್ವಂತ್ ಸಹೋದರ ಯೋಧ ಯತೀಶ್ ಮೇಲೆ ಹಲ್ಲೆ ನಡೆಸಲಾಗಿದ್ದು, ಹಲ್ಲೆಯಿಂದ ಗಾಯಗೊಂಡಿದ್ದ ಯಶ್ವಂತ್ ಅಧಿಕ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ. ಮೃತ ಯಶ್ವಂತ್ ಸಹೋದರ ಯೋಧ ಯತೀಶ್‌ಗೆ ಖಾಸಗಿ‌‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಂದನ್ ಮತ್ತು ಯಶ್ವಂತ್ ಕುಟುಂಬದ ನಡುವೆ ಜಮೀನಿಗಾಗಿ ಕಿತ್ತಾಟ ನಡೆದಿದೆ. 

Vijayapura: ನಾಗರಬೆಟ್ಟ ಎಕ್ಸ್‌ಪರ್ಟ್ ಶಾಲೆಯಲ್ಲಿ ಅನುಮಾನಾಸ್ಪದವಾಗಿ ವಿದ್ಯಾರ್ಥಿಯ ಸಾವು

ಯಶ್ವಂತ್ ಕಡೆಯ ಸ್ವಲ್ಪ ಜಾಗ ನಮಗೆ ಸೇರಿದ್ದೆಂದು ಚಂದನ್ ಕುಟುಂಬ ಹಲವು ಬಾರಿ ಗಲಾಟೆ ನಡೆಸಿದ್ದರು. ಇನ್ನು ಅಜ್ಜಿ ಬಳಿಯಿದ್ದ ಕುಡುಗೋಲು ಕಿತ್ತುಕೊಂಡು ಯೋಧ ಚಂದನ್ ಮಾರಣಾಂತಿಕ ಹಲ್ಲೆ ಮಾಡಿದ್ದು, ಯೋಧರ ಕುಟುಂಬದ ಜಗಳ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಯೋಧ ಚಂದನ್ ಕುಡುಗೋಲಿನಿಂದ ಕೊಚ್ಚುವ ದೃಶ್ಯ ಸೆರೆಯಾಗಿದ್ದು, ಚಂದನ್ ಮತ್ತು ಆತನ ಸಹೋದರ ಅಶ್ವಥ್ ಸೇರಿ ಐವರ ವಿರುದ್ದ ದೂರು ದಾಖಲಾಗಿದೆ. ಸದ್ಯ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳಾಗದ ಕಾರಣಕ್ಕೆ ಮಹಿಳೆ ಕೊಲೆ: ಮಹಿಳೆಗೆ ಮಕ್ಕಳಾಗದ ಕಾರಣಕ್ಕಾಗಿ ಪತಿ ಸೇರಿದಂತೆ ಆತನ ತಂದೆ ಇತರ ಆರು ಜನ ಸೇರಿ ಆಕೆಯ ಬಾಯಿಗೆ ಬಟ್ಟೆತುರುಕಿ ರುಬ್ಬುವ ಗುಂಡಿನಿಂದ ಜಜ್ಜಿ ಕೊಲೆ ಮಾಡಿದ್ದಾರೆಂದು ಮಹಿಳೆಯ ಪೋಷಕರು ಕೊಟ್ಟೂರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆಯ ಪತಿ ಆನಂದ ಕೊಟ್ರಬಸಪ್ಪ, ವೀರೇಶ, ಮತ್ತಿತರ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಹಿಳೆ ಈರಮ್ಮ (38) ಮೃತ ಮಹಿಳೆ.

ಈರಮ್ಮ ಅವರನ್ನು 2011ರಲ್ಲಿ ಕೊಟ್ಟೂರು ಪಟ್ಟಣದ ಪೋಟೋಗ್ರಾಫರ್‌ ಆಗಿದ್ದ ಆನಂದ ಅವರಿಗೆ ಮದುವೆ ಮಾಡಿ ಕೊಟ್ಟಿದ್ದರು. ಈರಮ್ಮ ಅವರಿಗೆ ಮಕ್ಕಳಾಗದೇ ಇರುವುದರಿಂದ ಗಂಡನ ಮನೆಯವರು ದಿನನಿತ್ಯ ಕಿರುಕುಳ ನೀಡುತ್ತಿದ್ದರಲ್ಲದೇ, ಹೊಡೆಯುತ್ತಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಗಂಡನ ಮನೆಯವರ ಕಿರುಕುಳ ಮುಂದುವರಿದು ನ. 16ರಿಂದ 18ರ ಮೂರು ದಿನಗಳ ಒಳಗೆ ಈರಮ್ಮ ಅವರಿಗೆ ಹೊಡೆದು, ರುಬ್ಬುವ ಗುಂಡಿನಿಂದ ಮುಖ ಮತ್ತು ತಲೆಗೆ ಜಜ್ಜಿ ಕೊಲೆ ಮಾಡಿದ್ದಾರೆಂದು ಈರಮ್ಮ ಅವರ ಪೋಷಕರು ದೂರಿದ್ದಾರೆ.

ವಿಜಯಪುರ: ಸಾಲದ ಹೆಸ್ರಲ್ಲಿ ವಿಡಿಸಿಸಿ ಬ್ಯಾಂಕ್‌ನಲ್ಲಿ ಮಹಾಮೋಸ..!

ಪ್ರಕರಣದ ಹಿನ್ನಲೆಯಲ್ಲಿ ಪೊಲೀಸ್‌ ಅಧಿಕಾರಿಗಳು ಪತಿ ಆನಂದ ಸೇರಿದಂತೆ ಇತರ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಜಿ. ಹರೀಶ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಸೋಮಶೇಖರ ಎಚ್‌. ಕೆಂಚಾರೆಡ್ಡಿ, ಸಬ್‌ ಇನ್‌ಸ್ಪೆಕ್ಟರ್‌ ವಿಜಯಕೃಷ್ಣ ಭೇಟಿ ನೀಡಿ ಪರಿಶೀಲಿಸಿದರು.

Follow Us:
Download App:
  • android
  • ios