ವಿಜಯಪುರ: ಸಾಲದ ಹೆಸ್ರಲ್ಲಿ ವಿಡಿಸಿಸಿ ಬ್ಯಾಂಕ್‌ನಲ್ಲಿ ಮಹಾಮೋಸ..!
ಬೇರೊಬ್ಬನ ಹೆಸ್ರಲ್ಲಿ ಸಾಲ ಪಡೆದು ಬ್ಯಾಂಕಿಗ ಫಂಗನಾಮ, ಹೆಸ್ರು ಯಾರದ್ದೋ, ಸಾಲದ ಹಣ ಇನ್ಯಾರಿಗೋ, ಅನುಮಾನ ಮೂಡಿಸಿದೆ 11 ಲಕ್ಷ ಮೋಸದ ಸಾಲ ಪ್ರಕರಣ
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ(ನ.20): ಎಲ್ಲ ದಾಖಲಾತಿ ನೀಡಿ ಚಪ್ಪಲಿ ಹರಿಯೋವರೆಗೆ ಬ್ಯಾಂಕಿ ಅಲೆದಾಡಿದ್ರು ಸಾಲ ಸಿಗೋದು ಡೌಟು. ಆದ್ರೆ ವಿಜಯಪುರ ನಗರದಲ್ಲಿ ನಡೆದ ಅದೊಂದು ಮೋಸದ ಸಾಲದ ಕಥೆಯನ್ನ ಕೇಳಿದ್ರೆ ಹಲವು ಅನುಮಾನಗಳ ಹುಟ್ಟುವುದು ಪಕ್ಕಾ. ನಗರದ ವಿಡಿಸಿಸಿ ಬ್ಯಾಂಕ್‌ನಲ್ಲಿ ನಕಲಿ ದಾಖಲೆ, ಸಹಿ ಮಾಡಿ ವ್ಯಕ್ತಿಯೊಬ್ಬ 11 ಲಕ್ಷ ರೂ. ಎಗರಿಸಿದ್ದಾನೆ. ಆದ್ರೆ ಸಾಲದ ಹಣ ಪಡೆದವನು ಯಾರೋ ನೋಟಿಸ್ ಹೋಗಿದ್ದು ಮಾತ್ರ ಇನ್ನೊಬ್ಬನಿಗೆ. ಹೀಗಾಗಿ ಇದೊಂದು ಪ್ರಕರಣ ಇದೆ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಹಲವರಲ್ಲಿ ಆತಂಕ ಮೂಡಿಸಿದೆ. ಹಣಕಾಸಿನ ಅಡಚಣೆ ಹಿನ್ನೆಲೆ ಸಾಲ ತೆಗೆದುಕೊಳ್ಳಲು ಹೋದ ವ್ಯಕ್ತಿಯ ದಾಖಲೆ ಪಡೆದು ಆತನಿಗೆ ಗೊತ್ತಿಲ್ಲದಂತೆ 11 ಲಕ್ಷ ಸಾಲ ಪಡೆದು ಮೋಸಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಾಲ ಪಡೆಯಲು ಬಂದವನ ಯಾಮಾರಿಸಿದರು..!
ನಗರದ ಬಸವೇಶ್ವರ ವೃತ್ತದಲ್ಲಿರುವ ವಿಡಿಸಿಸಿ ಬ್ಯಾಂಕ್‌ನಲ್ಲಿ ಮಠಪತಿ ಗಲ್ಲಿಯ ನಿವಾಸಿ ಅರವಿಂದ ಕೃಷ್ಣ ಕಾಳಿ ಎಂಬಾತ ವಂಚನೆಗೆ ಒಳಗಾಗಿದ್ದಾನೆ. ಈತನ ಹೆಸರಲ್ಲಿ ಖಾತೆ ತೆರೆದು 11 ಲಕ್ಷ ಸಾಲ ತೆಗೆದಿದ್ದು, ಬ್ಯಾಂಕ್‌ನಿಂದ ನೋಟಿಸ್ ಬಂದಾಗಲೇ ವಂಚನೆಯ ಅರಿವಾಗಿದೆ. ಇನ್ನೂ ನಗರದ ದಿವಟೇರಿ ಗಲ್ಲಿಯ ನಿವಾಸಿ ಶಿವಕುಮಾರ ನಿಂಗೊಂಡ ಚಿಕ್ಕೋಡಿ ಎಂಬಾತ ಪರಿಚಯ ವಾಗಿದ್ದು, ಸಾಲ ಕೊಡಿಸುವುದಾಗಿ ಹೇಳಿ ಅರವಿಂದನ ಆಧಾರ್ ಕಾರ್ಡ್, ಫೋಟೊ ಹಾಗೂ ಮನೆ ಉತಾರೆ ಪಡೆದುಕೊಂಡು ಸಾಲ ಮಂಜೂರಿ ಮಾಡಿ ಕೊಡುವುದಾಗಿ ಆಶ್ವಾಸನೆ ನೀಡಿ ಮೋಸ ಮಾಡಿದ್ದಾನೆ. ಈ ಕುರಿತು ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಶಿಫ್: ಹಾಸನದ ಯುವತಿ ಸುಲಿಗೆ ಮಾಡಿದ್ದು ಲಕ್ಷ-ಲಕ್ಷ ಹಣ
ಸಾಲ ಮಂಜೂರು ಮಾಡಿಸುವುದಾಗಿ ಮೋಸ..!
ವಿಜಯಪುರದ ಮಠಪತಿ ಗಲ್ಲಿಯ ಬಿಜೆನೆಸ್ ಮ್ಯಾನ್ ಅರವಿಂದ ಕೃಷ್ಣ ಕಾಳೆ ಎಂಬುವರು, ಕಳೆದ ವರ್ಷ 2021 ಫೆಬ್ರವರಿ 15ರಂದು ಸಾಲ ಪಡೆಯಲು ಬಸವೇಶ್ವರ ಸರ್ಕಲ್ ಬಳಿ ಇರುವ ವಿಡಿಸಿಸಿ ಬ್ಯಾಂಕ್ ಹೋದ ವೇಳೆ ಅಲ್ಲಿ ದಿವಟಗೇರಿ ಗಲ್ಲಿಯ ನಿವಾಸಿ ಶಿವಕುಮಾರ ನಿಂಗೊಂಡ ಚಿಕ್ಕೋಡಿ ಸಾಲ ಪಡೆಯಲು ಬಂದ ಅರವಿಂದ ಕಾಳೆ ಜತೆ ಸಲುಗೆಯಾಗಿ ಮಾತನಾಡಿ ಸ್ನೇಹ ಬೆಳೆಸಿಕೊಂಡಿದ್ದನು. ನಿಮ್ಮ ಸಾಲ ನಾನು ಮಂಜೂರು ಮಾಡಿಕೊಡುವುದಾಗಿ ಹೇಳಿ ಅಧಾರ ಕಾರ್ಡ್, ಪೋಟೋ, ಮನೆಯ ಆಸ್ತಿ ಉತಾರೆ ಪಡೆದುಕೊಂಡು, ಸಾಲ ಕೊಡಿಸುವುದಾಗಿ ಭರವಸೆ ನೀಡಿ, ನಂತರ ಆರೋಪಿ ಶಿವಕುಮಾರ ಚಿಕ್ಕೋಡಿ ವಾಪಸ್ ಭೇಟಿಯಾಗಿರಲಿಲ್ಲ.
ನೋಟಿಸ್ ಜಾರಿಯಾದ ಮೇಲೆ ಶಾಕ್..!
2022 ಅಕ್ಟೋಬರ್ ಕ್ಕಡ ವಿಡಿಸಿಸಿ ಬ್ಯಾಂಕಿನಿಂದ ಮೋಸಕ್ಕೆ ಒಳಗಾದ ಅರವಿಂದ ಕಾಳೆಗೆ ಸಾಲ ಕುರಿತು ನೋಟಿಸ್ ಜಾರಿಯಾದ ಮೇಲೆ ತಾನು ಶಿವಕುಮಾರ ಚಿಕ್ಕೋಡಿ ಎಂಬವನಿಂದ ಮೋಸ ಹೋಗಿರುವುದಾಗಿ ಅರವಿಗೆ ಬಂದಿದೆ. ಸದ್ಯ ಸಾಲ ಪಡೆದ ಮಾಹಿತಿಯನ್ನು ಬ್ಯಾಂಕ್ ನೀಡಿದ್ದು, ಇದು ಕಟ್ ಬಾಕಿಯಾಗಿದೆ. ಮನೆ ಜಪ್ತಿ ಮಾಡುವುದಾಗಿ ನೋಟಿಸ್ ನಲ್ಲಿ ತಿಳಿಸಿದ್ದಾರೆ.
Bengaluru: ಬಿಬಿಎಂಪಿಗೆ 130 ಕೋಟಿ ತೆರಿಗೆ ಮೋಸ!
ಖೊಟ್ಟಿ ದಾಖಲೆ, ನಕಲಿ ಸಹಿ, ದೂರು ದಾಖಲು..!
ಖೊಟ್ಟಿ ದಾಖಲೆ ಸೃಷ್ಟಿ ಮಾಡಿ, ನಕಲಿ ಸಹಿ ಮಾಡಿ ವಿಡಿಸಿಸಿ ಬ್ಯಾಂಕ್ ನಿಂದ ಆರೋಪಿ ಶಿವಕುಮಾರ ಚಿಕ್ಕೋಡಿ ಬ್ಯಾಂಕ್ ಸಾಲ ಪಡೆಯಲು ಬಂದ ಅರವಿಂದ ಕಾಳೆ ಹೆಸರಿನಲ್ಲಿ 11ಲಕ್ಷ ರೂ. ಸಾಲ ಪಡೆದು ವಂಚನೆ ಮಾಡಿರುವದು ಬೆಳಕಿಗೆ ಬಂದಿದೆ. ಸದ್ಯ 11ಲಕ್ಷ ರೂ. ಹಣ ಮೋಸಕ್ಕೆ ಒಳಗಾಗಿರುವ ಅರವಿಂದ ಕಾಳೆ, ಮೋಸ ಮಾಡಿ ತಲೆಮರೆಸಿಕೊಂಡಿರುವ ಶಿವಕುಮಾರ ಚಿಕ್ಕೋಡಿ ವಿರುದ್ಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಐಪಿಸಿ ಕಲಂ 420, 465, 468 ಹಾಗೂ 471 ಅಡಿ ಪ್ರಕರಣ ದಾಖಲಿಸಿ ದ್ದಾರೆ.
ಪ್ರಕರಣ ಗಂಭೀರವಾಗಿ ಪರಿಗಣಿಸಿದ ವಿಜಯಪುರ ಎಸ್ಪಿ..!
ಈ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ಆನಂದಕುಮಾರ ಆರೋಪಿ ಶಿವಕುಮಾರ ಚಿಕ್ಕೋಡಿ ವಿರುದ್ಧ ಹಲವು ವಂಚನೆ, ಮೋಸ ಪ್ರಕರಣ ದಾಖಲಾಗಿವೆ. ಸದ್ಯ ಗಾಂಧಿ ಔಕ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕರು ಸಹ ಈ ರೀತಿ ಅಪರಿಚಿತರಿಗೆ ತಮ್ಮ ಮೂಲ ದಾಖಲೆಗಳನ್ನು ನೀಡಿ ಮೋಸಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.