2ನೇ ತರಗತಿ ವಿದ್ಯಾರ್ಥಿನಿ ಮೇಲೆ ಆಸಿಡ್ ಎರಚಿದ್ದ ಮುಖ್ಯ ಶಿಕ್ಷಕನ ವಿರುದ್ಧ ಎಫ್‌ಐಆರ್
ತಾನು ಹೇಳಿದ ಕೆಲಸವನ್ನು ಸರಿಯಾಗಿ ಮಾಡಿಲ್ಲವೆಂದು ಕೋಪಗೊಂಡ ಮುಖ್ಯ ಶಿಕ್ಷಕರೊಬ್ಬನು ಬಾಲಕಿಯ ಬೆನ್ನಿಗೆ ಆಸಿಡ್ ಸುರಿದು ಗಾಯಗೊಳಿಸಿದ ಘಟನೆ ಬಾಲೇನಹಳ್ಳಿ ಗೊಲ್ಲರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಮುಖ್ಯ ಶಿಕ್ಷಕನ ವರ್ತನೆಯ ಬಗ್ಗೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.
ಚಳ್ಳಕೆರೆ (ಅ.27): ತಾನು ಹೇಳಿದ ಕೆಲಸವನ್ನು ಸರಿಯಾಗಿ ಮಾಡಿಲ್ಲವೆಂದು ಕೋಪಗೊಂಡ ಮುಖ್ಯ ಶಿಕ್ಷಕರೊಬ್ಬನು ಬಾಲಕಿಯ ಬೆನ್ನಿಗೆ ಆಸಿಡ್ ಸುರಿದು ಗಾಯಗೊಳಿಸಿದ ಘಟನೆ ಬಾಲೇನಹಳ್ಳಿ ಗೊಲ್ಲರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಮುಖ್ಯ ಶಿಕ್ಷಕನ ವರ್ತನೆಯ ಬಗ್ಗೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.
ಬಾಲೇನಹಳ್ಳಿ ಗೊಲ್ಲರಹಟ್ಟಿಯ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿರುವ ಸಿಂಚನಾ (8) ಮುಖ್ಯ ಶಿಕ್ಷಕನ ಕೋಪಕ್ಕೆ ಗುರಿಯಾಗಿದ ಬಾಲಕಿ. ಈಕೆಯ ಬೆನ್ನಮೇಲೆ ಶೌಚಾಲಯ ಸ್ವಚ್ಛಗೊಳಿಸಲು ಉಪಯೋಗಿಸುವ ಆಸಿಡ್ ಎರಚಲಾಗಿದ್ದು, ನೋವಿನಿಂದ ಕಣ್ಣೀರಿಡುತ್ತಿದ್ದ ಬಾಲಕಿಯನ್ನು ಪೋಷಕರು ಹಾಗೂ ಗ್ರಾಮಸ್ಥರು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಅಜ್ಜ ಮೊಬೈಲ್ ಕೊಡಿಸದ್ದಕ್ಕೆ ವಿಷ ಸೇವಿಸಿ ಯುವಕ ಆತ್ಮಹತ್ಯೆ!
ಬಾಲಕಿಯ ತಂದೆ ಗುರುಸ್ವಾಮಿ ಈ ಬಗ್ಗೆ ಪತ್ರಿಕೆಗೆ ಮಾಹಿತಿ, ನೀಡಿ ದಸರಾ ರಜೆ ಮುಗಿದ ಹಿನ್ನೆಲೆಯಲ್ಲಿ ನನ್ನ ಮಗಳು ಸಿಂಚನಾ ಶಾಲೆಗೆ ಹೋಗಿದ್ದಳು. ಶಾಲೆಗೆ ಹೋದ ಸ್ವಲ್ಪ ಹೊತ್ತಿನಲ್ಲೇ ಮುಖ್ಯ ಶಿಕ್ಷಕ ರಂಗನಾಥ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ಆಸಿಡ್ ನೀಡಿದ್ದು, ಸ್ವಚ್ಛಗೊಳಿಸಿದ ನಂತರ ಬಂದು ವೀಕ್ಷಿಸಿದ ಮುಖ್ಯ ಶಿಕ್ಷಕ ರಂಗನಾಥ ನಿನಗೆ ಶೌಚಾಲಯ ಸ್ವಚ್ಛಗೊಳಿಸಲು ಬರುವುದಿಲ್ಲ. ಪೂರ್ಣಪ್ರಮಾಣದಲ್ಲಿ ಶುಚಿಯಾಗಿಲ್ಲವೆಂದು ಕೋಪಗೊಂಡು ಉಳಿದ ಆಸಿಡ್‌ನ್ನು ನನ್ನ ಮಗಳ ಬೆನ್ನಿನ ಭಾಗಕ್ಕೆ ಸುರಿದು ಬೈದಾಡಿದ್ದಾನೆ. ನನ್ನ ಮಗಳು ನೋವಿನಿಂದ ನರಳುತ್ತಿದ್ದು, ಮಾಹಿತಿ ಪಡೆದ ನಾನು ಕೂಡಲೇ ಶಾಲೆಗೆ ಹೋಗಿ ನನ್ನ ಸ್ನೇಹತರೊಂದಿಗೆ ಸಿಂಚನಾಳಾನ್ನು ಚಿತ್ರದುರ್ಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದೇನೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಆಸ್ಪತ್ರೆಯಲ್ಲೇ ಚೇತರಿಸಿಕೊಳ್ಳುತ್ತಿದ್ದು, ಮುಖ್ಯ ಶಿಕ್ಷಕನ ವಿರುದ್ದ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾನೆ.
ಮೊಬೈಲ್ ಅಡಿಕ್ಟ್ ತಾಯಿ, ತೋಳಲ್ಲೇ ಇದ್ದ ಮಗುವಿಗಾಗಿ ರೂಮೆಲ್ಲಾ ಹುಡುಕಾಡಿದ್ಲು!
ಮುಖ್ಯ ಶಿಕ್ಷಕ ಅಮಾನತ್ತು:
ವಿದ್ಯಾರ್ಥಿನಿ ಮೇಲೆ ಆಸಿಡ್ ಎರಚಿದ ಮುಖ್ಯ ಶಿಕ್ಷಕ ರಂಗಸ್ವಾಮಿ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿ ಚಿತ್ರದುರ್ಗ ಡಿಡಿಪಿಐ ರವಿಶಂಕರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಸದ್ಯ ಮುಖ್ಯ ಶಿಕ್ಷಕ ರಂಗಸ್ವಾಮಿ ವಿರುದ್ದ ವಿದ್ಯಾರ್ಥಿನಿ ತಾಯಿ ಪವಿತ್ರ ದೂರು ನೀಡಿದ್ದು, ಜೆಜೆ ಆಕ್ಟ್,IPC 284, 337 ಕಲಂ ನಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ವಿಚಾರಣೆಗೆ ಮುಂದಾಗಿರುವ ಪೊಲೀಸರು