Asianet Suvarna News Asianet Suvarna News

ಬೇಸ್‌ಬಾಲ್‌ ಬ್ಯಾಟ್‌ನಿಂದ ಹಲ್ಲೆಗೈದು, ಬಿಯರ್ ಬಾಟೆಲ್‌ನಿಂದ ತಲೆಗೆ ಹೊಡೆದು ಮಾಜಿ ಗೆಳೆಯನನ್ನ ಕೊಂದ ಆಂಟಿ

ಗಂಡನನ್ನು ಬಿಟ್ಟ ಬ್ರಿಜ್‌ವೀರ್ ಸಿಂಗ್ ಜೊತೆಯಲ್ಲಿದ್ದ ಕವಿತಾ ಚಹಾರ್, ಕೆಲ ವರ್ಷಗಳ ನಂತರ ಸುರೇಂದ್ರನ ಮನೆ ಸೇರಿಕೊಂಡಿದ್ದಳು.

A 38-year-old woman killed ex boyfriend in agra mrq
Author
First Published Jun 18, 2024, 5:39 PM IST

ಆಗ್ರಾ: 38 ವರ್ಷದ ಮಹಿಳೆ ತನ್ನ ಮಾಜಿ ಪ್ರಿಯಕರನನ್ನು (Ex Boyfriend) ಬೇಸ್‌ಬಾಲ್ ಬ್ಯಾಟ್‌ ಹಾಗೂ ಬಿಯರ್ ಬಾಟೆಲ್ ತಲೆ ಮೇಲೆ ಹೊಡೆದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ (Agra, Uttar Pradesh) ನಡೆದಿದೆ.  ಬ್ರಿಜ್‌ವೀರ್ ಸಿಂಗ್ (40) ಎಂಬಾತನೇ ಮಾಜಿ ಗೆಳತಿ ಕವಿತಾ ಚಹಾರ್‌ ಳಿಂದ ಕೊಲೆಯಾದ (Murder) ಪ್ರಿಯಕರ. ಬ್ರಿಜ್‌ವೀರ್ ಸಿಂಗ್ ಶವ ಶನಿವಾರ ಆಗ್ರಾದ ಮಲ್ಪುರ ಪ್ರದೇಶದಲ್ಲಿ ಸಿಕ್ಕಿದೆ. ಬ್ರಿಜ್‌ವೀರ್ ಸಿಂಗ್ ಜೊತೆಗಿನ ಸಂಬಂಧ (Relationship) ಮುರಿದುಕೊಂಡ ನಂತರ ಕವಿತಾ ಚಹಾರ್ ಬೇರೊಬ್ಬನ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಳು. ಆದರೆ ಇದನ್ನು ಬ್ರಿಜ್‌ವೀರ್ ಸಿಂಗ್ ವಿರೋಧಿಸಿದ್ದನು. ಇದರಿಂದ ಬ್ರಿಜ್‌ವೀರ್ ಸಿಂಗ್ ಉಸಿರು ನಿಲ್ಲಿಸಿದ್ದಾಳೆ. 

ಉಪಾಯವಾಗಿ ಬ್ರಿಜ್‌ವೀರ್ ಸಿಂಗ್ ನನ್ನು ಕರೆಸಿಕೊಂಡ ಕವಿತಾ ತನ್ನ ಹೊಸ ಗೆಳೆಯ ಹಾಗೂ ಆಕೆಯ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಎಲ್ಲರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಸೋನಮ್  ಕುಮಾರ್ ಮಾಹಿತಿ ನೀಡಿದ್ದಾರೆ.

ಗಂಡನ ಬಿಟ್ಟು ಬ್ರಿಜ್‌ವೀರ್, ನಂತರ ಸುರೇಂದ್ರನ ತೆಕ್ಕೆಗೆ

ಈಗಾಗಲೇ ಮದುವೆಯಾಗಿದ್ದ ಕವಿತಾ, ಕೊಲೆಯಾಗಿದ್ದ ಬ್ರಿಜ್‌ವೀರ್ ಸಿಂಗ್ ಜೊತೆ ಸಂಬಂಧ ಹೊಂದಿದ್ದಳು. ಕವಿತಾಳ ಮನೆ ಸಮೀಪವೇ ಬ್ರಿಜ್‌ವೀರ್ ಸಿಂಗ್ ವಾಸವಾಗಿದ್ದನು. ಅಕ್ಕ ಪಕ್ಕದ ಮನೆಯವರಾಗಿದ್ದರಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿರಲು ಆರಂಭಿಸಿದ್ದಾರೆ. 2007ರಿಂದ ಇಬ್ಬರು ಜೊತೆಯಾಗಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಕಾಲನಂತರ ಕವಿತಾಗೆ ಸುರೇಂದ್ರ ಚಹಾರ್ ಎಂಬಾತನ ಪರಿಚಯವಾಗಿದೆ. ಬ್ರಿಜ್‌ವೀರ್ ಸಿಂಗ್‌ಗೆ ಗುಡ್‌ಬೈ ಹೇಳಿದ ಸುರೇಂದ್ರ ಜೊತೆ ವಾಸಿಸಲು ಕವಿತಾ ಶುರು ಮಾಡಿದ್ದಾಳೆ.  ಇದರಿಂದ ಕೋಪಗೊಂಡ ಬ್ರಿಜ್‌ವೀರ್ ಸಿಂಗ್ 2019ರಲ್ಲಿ ಸುರೇಂದ್ರ ಒಡೆತನದ ಬಟ್ಟೆ ಮಳಿಗೆಗೆ ಬೆಂಕಿ ಹಾಕಿದ್ದಾನೆ. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಬ್ರಿಜ್‌ವೀರ್ ಸಿಂಗ್ ಕೆಲ ದಿನಗಳ ಹಿಂದೆಯಷ್ಟೇ ಜೈಲಿನಿಂದ ಹೊರ ಬಂದಿದ್ದನು.

ಮನಕಲುಕುವ ವಿಡಿಯೋ, ಮಗಳಿಗೆ UPSC ಪರೀಕ್ಷೆ ಪ್ರವೇಶ ನಿರಾಕರಿಸಿದ ಬೆನ್ನಲ್ಲೇ ಪ್ರಜ್ಞೆ ತಪ್ಪಿದ ತಾಯಿ

ಸಂಚು ಮಾಡಿ ಕೊಲೆ

ಜೈಲಿನಿಂದ ಹೊರ ಬರುತ್ತಿದ್ದಂತೆ ಕವಿತಾಳಿಗೆ ಫೋನ್ ಮಾಡಿ ಬೆದರಿಕೆ ಹಾಕಲು ಶುರು ಮಾಡಿಕೊಂಡಿದ್ದನು. ಇದರಿಂದ ರೋಸಿ ಹೋಗಿದ್ದ ಕವಿತಾ, ಜೂನ್ 15ರಂದು ಮಾತನಾಡೋಣ ಬಾ ಎಂದು ಬ್ರಿಜ್‌ ವೀರ್‌ ಸಿಂಗ್‌ನನ್ನು ಕರೆಸಿಕೊಂಡಿದ್ದಾಳೆ. ಈ ವೇಳೆ ಸುರೇಂದ್ರ ಹಾಗೂ ಆತನ ಗೆಳೆಯರಾದ ಅತುಲ್, ರೋಹಿತ್, ಸೋನು ಮತ್ತು ಕವಿತಾ ಎಲ್ಲರೂ ಸೇರಿ ಬೇಸ್‌ಬಾಲ್ ಬ್ಯಾಟ್‌ನಿಂದ  ಹಲ್ಲೆ ನಡೆಸಿದ್ದಾರೆ. ಕವಿತಾ ಸಹ ಬಿಯರ್ ಬಾಟೆಲ್‌ನಿಂದ ಬ್ರಿಜ್‌ವೀರ್ ತಲೆಗೆ  ಹೊಡೆದಿದ್ದಾಳೆ. ನಂತರ ಬ್ರಿಜ್‌ವೀರ್ ಸಾಯುತ್ತಿದ್ದಂತೆ ಆತನ ಶವವನ್ನು ರೊಹ್ತಾ ಕಾಲುವೆಯಲ್ಲಿ ಎಸೆದು ಪರಾರಿಯಾಗಿದ್ದರು.

ಕವಿತಾ ಜೊತೆಗಿನ ಸಂಬಂಧದಿಂದಾಗಿ ಬ್ರಿಜ್‌ ವೀರ್ ತನ್ನ ಕುಟುಂಬಸ್ಥರಿಂದ ದೂರವಾಗಿದ್ದನು. ಹಾಗಾಗಿ ಕುಟುಂಬಸ್ಥರನ್ನು ಶವವನ್ನ ಪಡೆಯಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಕವಿತಾ ಮತ್ತು ಆಕೆಯ ಸಹಚರರ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 302 ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನನ್ನ ಜೊತೆ ಹಾಗೇಕೆ ಮಾಡಿದೆ.. ನಡುರಸ್ತೆಯಲ್ಲಿ ಸ್ಪ್ಯಾನರ್‌ನಿಂದ ಹೊಡೆದು ಹೊಡೆದೇ ಯುವತಿಯ ಸಾಯಿಸಿದ ಹಂತಕ

Latest Videos
Follow Us:
Download App:
  • android
  • ios