Asianet Suvarna News Asianet Suvarna News

ಮನಕಲುಕುವ ವಿಡಿಯೋ, ಮಗಳಿಗೆ UPSC ಪರೀಕ್ಷೆ ಪ್ರವೇಶ ನಿರಾಕರಿಸಿದ ಬೆನ್ನಲ್ಲೇ ಪ್ರಜ್ಞೆ ತಪ್ಪಿದ ತಾಯಿ

ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಗೆ ತಡವಾಗಿ ಆಗಮಿಸಿದ ಕಾರಣ ಮಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಒಂದು ವರ್ಷದಿಂದ ಪರೀಕ್ಷೆಗೆ ತಯಾರು ಮಾಡಿದ ಮಗಳಿಗೆ ಪ್ರವೇಶ ನಿರಾಕರಿಸುತ್ತಿದ್ದಂತೆ ತಾಯಿ ಪ್ರಜ್ಞೆ ತಪ್ಪಿ ಬಿದ್ದರೆ, ತಂದೆ ಅಳುತ್ತಾ ಜರ್ಝರಿತನಾದ ಘಟನೆ ಮನಕಲುಕುವಂತಿದೆ.

UPSC Prelims exam Aspirant not allowed exam hall for being late mother faints father lose control ckm
Author
First Published Jun 17, 2024, 5:45 PM IST

ಗುರುಗ್ರಾಂ(ಜೂ.17) ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಬೇಕೆಂಬದು ಹಲವರ ಕನಸು. ಆದರೆ ಎಲ್ಲರಿಗೂ ಸಾಧ್ಯವಾಗುವಿದಿಲ್ಲ. ವರ್ಷವಿಡಿ ಓದು, ಕೋಚಿಂಗ್ ಪಡೆದು ಭಾರಿ ತಯಾರಿಯೊಂದಿಗೆ ಪರೀಕ್ಷೆಗೆ ಹಾಜರಾಗುತ್ತಾರೆ.ಹಲವು ಅಡೆ ತಡೆ, ಆರ್ಥಿಕ ಪರಿಸ್ಥಿತಿ ನಡುವೆ ಕಳೆದೊಂದು ವರ್ಷದಿಂದ ಕಠಿಣ ಅಭ್ಯಾಸ ಮಾಡಿ ಪ್ರಿಲಿಮ್ಸ್ ಪರೀಕ್ಷೆ ಹಾಜರಾದ ಅಭ್ಯರ್ಥಿಗೆ ತಡವಾಗಿ ಆಗಮಿಸಿದ್ದಾಳೆ ಅನ್ನೋ ಕಾರಣಕ್ಕೆ ಪ್ರವೇಶ ನಿರಾಕರಿಸದ ಘಟನೆ ಗುರುಗ್ರಾಂನಲ್ಲಿ ನಡೆದಿದೆ. ಪರಿಪರಿಯಾಗಿ ಬೇಡಿದರೂ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ಪ್ರವೇಶ ನಿರಾಕರಿಸಿದ ಬೆನ್ನಲ್ಲೇ ಯವತಿ ತಾಯಿ ಪ್ರಜ್ಞೆ ತಪ್ಪಿ ಬಿದ್ದರೆ, ತಂದೆ ಜರ್ಝರಿತನಾಗಿ ಅತ್ತು ಕರೆದಿದ್ದಾರೆ. ಮನಕಲುಕುವ ಈ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮೂಲಗಳ ಪ್ರಕಾರ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡಿಕೊಂಡು ಬಂದ  ಯುವತಿ 9 ಗಂಟೆ ಪರೀಕ್ಷಾ ಕೇಂದ್ರದ ಗೇಟಿನ ಮುಂದೆ ಹಾಜರಾಗಿದ್ದಾರೆ. 9.30ಕ್ಕೆ ಪರೀಕ್ಷೆ ಆರಂಭಗೊಳ್ಳುತ್ತಿದೆ. 9 ಗಂಟೆಗೆ ಆಗಮಿಸಿದರೂ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಪರಿಪರಿಯಾಗಿ ಬೇಡಿಕೊಂಡರು ಪರೀಕ್ಷೆ ಬರೆಯಲು ಯುವತಿಗೆ ಪ್ರವೇಶ ನಿರಾಕರಿಸಲಾಗಿದೆ.

ಪರೀಕ್ಷೆ ಪಾಸ್‌ಗಾಗಿ ಲಂಚ: ನೀಟ್‌ ಹಗರಣದಲ್ಲಿ ಕನ್ನಡಿಗರೂ ಭಾಗಿ!

ಪ್ರವೇಶ ನಿರಾಕರಣೆಯಿಂದ ಯುವತಿ ತಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಂದೆಗೆ ಏನು ಮಾಡಬೇಕೆಂದು ತೋಚರೆ ಅಳುತ್ತಾ, ಮಗಳ ಭವಿಷ್ಯ ಹಾಳಾಗುತ್ತಿದೆ. ಒಂದು ಅವಕಾಶ ಮಾಡಿಕೊಡಿ ಎಂದು ಗೋಳಾಡಿದ ವಿಡಿಯೋ ವೈರಲ್ ಆಗಿದೆ. ಆದರೆ ಯುವತಿ ತಂದೆಯನ್ನು ಸಮಾಧಾನಿಸುತ್ತಾ ತಾಯಿಯ ಆರೈಕೆ ಮಾಡಿದ್ದಾಳೆ. ಅಪ್ಪ ತಾಳ್ಮೆ ಕಳೆದುಕೊಳ್ಳಬೇಡಿ. ನೀರು ಕುಡಿಯಿರಿ. ಯಾಕೆ ಕೂಗಾಡುತ್ತಿದ್ದೀರಿ. ಮುಂದಿನ ವರ್ಷ ಬರೆಯುತ್ತೇನೆ, ಸಮಸ್ಯೆ ಇಲ್ಲ ಎಂದು ಯುವತಿ ತಂದೆಗೆ ಮನವಿ ಮಾಡಿದ್ದಾಳೆ.

 

 

ಒಂದು ವರ್ಷ ಹೋಯಿತಲ್ಲ ಮಗಳೇ ಎಂದು ತಂದೆ ಅಳುತ್ತಾ ನಿಂತರೆ, ಪರ್ವಾಗಿಲ್ಲ, ನನಗೆ ವಯಸ್ಸಾಗಿಲ್ಲ. ಮುಂದಿನ ವರ್ಷ ಬರೆಯುತ್ತೇನೆ. ಸಮಾಧಾನ ಮಾಡಿಕೊಳ್ಳಿ ಎಂದು ತಂದೆಯನ್ನು ಸಮಾಧಾನಿಸಿದ್ದಾಳೆ. ತಾಯಿಗೆ ನೀರು ಕುಡಿಸುವ ಪ್ರಯತ್ನ ಮಾಡಿದ್ದಾಳೆ. ಅಭ್ಯರ್ಥಿ ಹಾಗೂ ಆಕೆಯ ಪೋಷಕರು ಅದೆಷ್ಟೇ ಅತ್ತರೂ ಪರೀಕ್ಷೆಗೆ ಪ್ರವೇಶ ನಿರಾಕರಿಸಲಾಗಿದೆ.

ಪಿಎಸ್‌ಐ ಮರುಪರೀಕ್ಷೆಯಲ್ಲೂ ವ್ಯಾಪಕ ನಿಯಮ ಉಲ್ಲಂಘನೆ?: ಕೋರ್ಟ್‌ ಮೆಟ್ಟಿಲೇರಲು ಅಭ್ಯರ್ಥಿಗಳ ಸಿದ್ಧತೆ

ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ನಾನು ಪರೀಕ್ಷೆ ಬರೆದಿದ್ದ. ನನ್ನ ಕೇಂದ್ರದಲ್ಲಿ 9 ಗಂಟೆಗೆ ಪ್ರವೇಶ ನೀಡಿದ್ದಾರೆ. ಕೆಲ ಕೇಂದ್ರಗಳಲ್ಲಿ ಅಲ್ಲಿನ ಅಧಿಕಾರಿಗಳ ಕಟ್ಟು ನಿಟ್ಟಿನ ನಿಯಮ ಪಾಲಿಸುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ತಂದೆ ತಾಯಿ ತಾಳ್ಮೆ ಕಳೆದುಕೊಂಡು ಜರ್ಝರಿತರಾದರೂ ಯುವತಿ ಮಾತ ಎದೆಗುಂಧದೆ ಧೈರ್ಯದಿಂದ ಎಲ್ಲರನ್ನು ಸಮಾಧಾನಿಸುತ್ತಿದ್ದಾಳೆ. ಈಕೆ ಮುಂದಿನ ವರ್ಷ ಯುಪಿಎಸ್‌ಸಿ ಪರೀಕ್ಷೆ ಬರೆದು ಉತ್ತಮ ಸ್ಥಾನದೊಂದಿಗೆ ಪಾಸ್ ಆಗಲಿದೆ. ಈಕೆಗೆ ಎಲ್ಲಾ ಸವಾಲುಗಳನ್ನು ನಿಭಾಯಿಸುವ ಶಕ್ತಿ ಎಂದು ಎಂದು ಹಲವರು ಕಮೆಂಟ್ ಮಾಡಿದ್ದಾರೆ.
 

Latest Videos
Follow Us:
Download App:
  • android
  • ios