Asianet Suvarna News Asianet Suvarna News

ಪತ್ನಿ ಗರ್ಭಿಣಿಯಾಗಿದ್ದಕ್ಕೆ ಹಣೆಗೆ ಶೂಟ್ ಮಾಡ್ಕೊಂಡ ಗಂಡ

ಪತ್ನಿ ಗರ್ಭಿಣಿಯಾಗಿದ್ದು, ಸೋನುಗೆ ಖುಷಿ ತಂದಿರಲಿಲ್ಲ. ಹಾಗಾಗಿ ಶೂಟ್ ಮಾಡಿಕೊಂಡೆ ಎಂದು ಸೋನು ತನ್ನ ಹೇಳಿಕೆಯನ್ನು ದಾಖಲಿಸಿದ್ದಾನೆ.

husband-shot-himself-after fight with pregnant wife mrq
Author
First Published Jul 3, 2024, 12:00 PM IST

ಜೈಪುರ: ರಾಜಸ್ಥಾನದ ಭರತಪುರ (Bharathpur, Rajasthan) ಜಿಲ್ಲೆಯಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಸೋನು ಹೆಸರಿನ ಯುವಕನೋರ್ವ ಹಣೆಗೆ ಶೂಟ್ ಮಾಡಿಕೊಂಡಿದ್ದಾನೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರಿಂದ ಯುವಕ (Youth) ಬದುಕುಳಿದಿದ್ದಾನೆ. ಸದ್ಯ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ಭರತಪುರ ಜಿಲ್ಲೆಯ ಉಚ್ಚೈನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಒಂದು ವರ್ಷದ ಹಿಂದೆ ಸೋನು ಮದುವೆ ರೇಖಾ ಎಂಬಾಕೆ ಜೊತೆ ಆಗಿತ್ತು. ಮದುವೆ ಬಳಿಕ ಸೋನುಗೆ ಪತ್ನಿ ರೇಖಾ ಕಿರುಕುಳ ನೀಡುತ್ತಿದ್ದಳು ಎಂದು ವರದಿಯಾಗಿದೆ. ಸೋನು ಏನೇ ಕೇಳಿದರೂ ರೇಖಾ ಉತ್ತರ ಕೊಡುತ್ತಿರಲಿಲ್ಲ. ಈ ಸಂಬಂಧ ಇಬ್ಬರ ನಡುವೆ ಪದೇ ಪದೇ ಮನಸ್ತಾಪ ಉಂಟಾಗುತ್ತಿತ್ತು. 

ಮದ್ವೆಯಾಗಿದ್ರೂ ಇಬ್ಬರ ಜೊತೆ ಸರಸ ಸಲ್ಲಾಪ; ಅಡ್ಡಿಯಾದ ಗಂಡನಿಗೆ ಚಟ್ಟ ಕಟ್ಟಿದ್ಳು!

ಈ ಬಗ್ಗೆ ಸೋನು ಕುಟುಂಬಸ್ಥರ ಬಳಿಯೂ ಹೇಳಿಕೊಂಡಿದ್ದನು. ಮದುವೆಯಾದ ಹೊಸತರಲ್ಲಿ ಹೀಗೆಲ್ಲಾ ಆಗುತ್ತೆ ಎಂದು ಹೇಳಿ ಕುಟುಂಬಸ್ಥರು ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕೌಟುಂಬಿಕ ಕಲಹದಿಂದ ಬೇಸತ್ತ ಪ್ರಾಣವನ್ನೇ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದನು. ಮತ್ತೆ ಸೋನು ಹಾಗೂ ಕುಟುಂಬಸ್ಥರ ನಡುವೆ ಜಗಳ ನಡೆದಿದೆ. ಕೋಪದಿಂದ ಕೋಣೆಯೊಳಗೆ ಹೋದ ಸೋನು ಮಾಡಿಕೊಂಡಿದ್ದಾನೆ. ದೊಡ್ಡ ಸೌಂಡ್ ಕೇಳುತ್ತಿದ್ದಂತೆ ಕುಟುಂಬಸ್ಥರು ಒಳಗೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಸೋನು ಬಿದ್ದಿದ್ದನು. ಕೂಡಲೇ ಪೋಷಕರು ಸೋನುನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಪೊಲೀಸರ ಮುಂದೆ ಸೋನು ಹೇಳಿದ್ದೇನು?

ಪತ್ನಿ ಗರ್ಭಿಣಿಯಾಗಿದ್ದು, ಸೋನುಗೆ ಖುಷಿ ತಂದಿರಲಿಲ್ಲ. ಹಾಗಾಗಿ ಶೂಟ್ ಮಾಡಿಕೊಂಡೆ ಎಂದು ಸೋನು ತನ್ನ ಹೇಳಿಕೆಯನ್ನು ದಾಖಲಿಸಿದ್ದಾನೆ. ಸುಮಾರು ಆರು ತಿಂಗಳ ಹಿಂದೆ ಸೋನುಗೆ ಗ್ರಾಮದ ಹೊರವಲಯದಲ್ಲಿ ಎರಡು ಗನ್‌ಗಳು ಸಿಕ್ಕಿದ್ದವು. ಆದ್ರೆ ಈ ವಿಷಯವನ್ನು ಪೊಲೀಸರಿಗೆ ಹೇಳದೇ ಎರಡೂ ಗನ್‌ಗಳನ್ನು ತನ್ನ ಬಳಿಯಲ್ಲಿಯೇ ಇರಿಸಿಕೊಂಡಿದ್ದನು. ಇದೇ ಒಂದು ಗನ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಪೊಲೀಸರು ಎರಡು ಗನ್ ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸುತ್ತಿದ್ದಾರೆ.

ಪ್ರಿಯತಮೆಯನ್ನ ಕೊಂದ ಬಳಿಕ ಆತ್ಮಹತ್ಯೆ ಯೋಚನೆ; ತಾಯಿ ಸಮಾಧಿ ಬಳಿ ಹೋದ ಬಳಿಕ ನಡೀತು ಅಚ್ಚರಿ

Latest Videos
Follow Us:
Download App:
  • android
  • ios