Asianet Suvarna News Asianet Suvarna News

ಪ್ರಿಯತಮೆಯನ್ನ ಕೊಂದ ಬಳಿಕ ಆತ್ಮಹತ್ಯೆ ಯೋಚನೆ; ತಾಯಿ ಸಮಾಧಿ ಬಳಿ ಹೋದ ಬಳಿಕ ನಡೀತು ಅಚ್ಚರಿ

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯುವಕನಿಗೆ ಹೆದರಿಕೆಯಾಗಿದೆ. ಕೊನೆಗೆ ಏನು ತೋಚದಿದ್ದಾಗ ಪೂರ್ವ ಅಂಧೇರಿಯಲ್ಲಿರುವ ತಾಯಿ ಸಮಾಧಿ ಬಳಿ ಹೋಗಿದ್ದಾನೆ. ಸುಮಾರು ಐದು ಗಂಟೆ ಸಮಾಧಿ ಬಳಿಯೇ ಕುಳಿತು ಕಾಲ ಕಳೆದಿದ್ದಾನೆ.

22 year old youth killed his girlfriend mrq
Author
First Published Jul 2, 2024, 3:39 PM IST

ಮುಂಬೈ: ಮನುಷ್ಯ ಜೀವನದಲ್ಲಿ ಗೊತ್ತೋ, ಗೊತ್ತಿಲ್ಲದೆಯೋ ಹಲವು ತಪ್ಪುಗಳನ್ನು ಮಾಡುತ್ತಾನೆ. ನಂತರ ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪ ಉಂಟಾಗುತ್ತದೆ. ಇಂತಹ ಘಟನೆಗಳು ಸುತ್ತಮುತ್ತಲೂ ನಡೆಯುತ್ತಿರುತ್ತವೆ. ಅವಘಡ ಸಂಭವಿಸಿದ ಬಳಿಕ ಸ್ವಲ್ಪ ಸಮಯ ಕುಳಿತು ಯೋಚಿಸಿದಾಗ ಈ ತಪ್ಪು ಮಾಡಬಾರದಿತ್ತು. ಕೋಪದ ಕೈಗೆ ಬುದ್ಧಿ ಕೊಡಬಾರದಿತ್ತು ಎಂದು ಅರ್ಥವಾಗುತ್ತದೆ. ಇದೇ ರೀತಿಯ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.  22 ವರ್ಷದ ಯುವಕನೋರ್ವ ತನ್ನ ಪ್ರೇಯಸಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. 

ಯುವಕ ಹಾಗೂ ಯುವತಿ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಕೋಪದಲ್ಲಿ ಪ್ರೇಯಸಿಯ ಕತ್ತು ಹಿಸುಕಿಯ ಆಕೆಯ ಉಸಿರು ನಿಲ್ಲಿಸಿದ್ದಾನೆ. ಕೊಲೆಯ ಬಳಿಕ ಪಶ್ಚಾತ್ತಾಪ ಉಂಟಾಗಿದೆ. ಈ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಯೋಚನೆ ಬಂದಿದೆ. ಕೂಡಲೇ ಅಂಗಡಿಗೆ ಹೋಗಿ ಇಲಿ ಪಾಷಾಣ ಖರೀದಿಸಿ ತಂದಿದ್ದಾನೆ. ಆದ್ರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯುವಕನಿಗೆ ಹೆದರಿಕೆಯಾಗಿದೆ. ಕೊನೆಗೆ ಏನು ತೋಚದಿದ್ದಾಗ ಪೂರ್ವ ಅಂಧೇರಿಯಲ್ಲಿರುವ ತಾಯಿ ಸಮಾಧಿ ಬಳಿ ಹೋಗಿದ್ದಾನೆ. ಸುಮಾರು ಐದು ಗಂಟೆ ಸಮಾಧಿ ಬಳಿಯೇ ಕುಳಿತು ಕಾಲ ಕಳೆದಿದ್ದಾನೆ. ಯುವಕನನ್ನು ಹುಡುಕುತ್ತಾ ಆತನ ತಂದೆ ಸಮಾಧಿ ಬಳಿ ಬಂದಾಗ ನಡೆದ ಘಟನೆಯನ್ನು ಅಪ್ಪನ ಮುಂದೆ ಹೇಳಿದ್ದಾನೆ. ಕೊನೆಗೆ ತಂದೆಯೇ ಪೊಲೀಸರಿಗೆ ಮಾಹಿತಿ ನೀಡಿ ಮಗನನ್ನು ಬಂಧಿಸಿ ಕರೆದೊಯ್ಯುವಂತೆ ಹೇಳಿದ್ದಾರೆ. 

ಪೊಲೀಸರಿಗೆ ಮಾಹಿತಿ ನೀಡಿದ ಆರೋಪಿಯ ತಂದೆ

ಯುವಕನ ಬಂಧನದ ಬಳಿಕ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಆರೋಪಿಯ ತಂದೆಗೆ ಒಂದು ವೇಳೆ ಮಗ ತಪ್ಪು ಮಾಡಿದ್ರೆ ಆತನಿಗೆ ಶಿಕ್ಷೆ ಆಗಬೇಕು ಎಂಬವುದು ಅವರ ಮಾತಾಗಿತ್ತು. ಹಾಗಾಗಿ ವಿಷಯ ತಿಳಿಯುತ್ತಲೇ ಮೊದಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭಾನುವಾರ ಬೆಳಗಿನ ಜಾವ ಸುಮಾರು 4.30ಕ್ಕೆ ಯುವತಿಯ ಕೊಲೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನಿ ತಾಯಿ-ಮಗಳಿಗೆ ಹೈದರಾಬಾದ್‌ನಲ್ಲಿ ತಾಲಿಬಾನ್‌ ಮಾದರಿಯ ಶಿಕ್ಷೆ; ನರಕ ತೋರಿಸಿದ ಕುಟುಂಬಸ್ಥರು

ಮರೊಳ ನಾಕಾ ಬಳಿಕ ಅಶೋಕ್ ಟವರ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ 18 ವರ್ಷದ ಯುವತಿಯ ಕೊಲೆ ನಡೆದಿತ್ತು. ಕೊಲೆಯಾದ ಯುವತಿಯನ್ನು ಸಾರಾ ಸೈಯದ್ ಹಾಗೂ ಆರೋಪಿಯನ್ನು ಸೊಲಕರ್ ಎಂದು ಗುರುತಿಸಲಾಗಿದೆ. ಇನ್ನು ಘಃಟನೆ ನಡೆದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾ ಇಲ್ಲದ ಕಾರಣ ಯುವಕ-ಯುವತಿಯ ಚಲನವಲನದ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ತಂದೆ ಮುಂದೆ ತಪ್ಪೊಪ್ಪಿಕೊಂಡ ಯುವಕ

ಆರೋಪಿ ತಂದೆ ಆಟೋರಿಕ್ಷಾ ಚಾಲಕರಾಗಿದ್ದು, ತಡರಾತ್ರಿಯಾದ್ರೂ ಮಗ ಮನೆಗೆ ಬಂದಿರಲಿಲ್ಲ. ತಾಯಿ ಸಮಾಧಿ ಬಳಿ ಹೋಗಿರಬೇಕೆಂದು ಅನುಮಾನಿಸಿ ಸ್ಮಶಾನಕ್ಕೆ ತೆರಳಿದ್ದರು. ಅಲ್ಲಿ ತಾಯಿ ಸಮಾಧಿ ಪಕ್ಕದಲ್ಲಿಯೇ ಮಗ ಕುಳಿತಿದ್ದನು. ತಂದೆ ಸಂತೈಸಿ ಏನಾಯ್ತು ಅಂತ ಕೇಳಿದಾಗ ಮಗ ನಡೆದ ಎಲ್ಲಾ ಘಟನೆಯನ್ನು ಹೇಳಿದ್ದನು.

ಕಾರ್‌ನಲ್ಲೇ ಗುಪ್ತ್‌ ಗುಪ್ತ್‌, ರೆಡ್‌ಹ್ಯಾಂಡ್‌ಆಗಿ ಸಿಕ್ಕಿಬಿದ್ದ ಸುಂದರ ಮಹಿಳಾ ಪೇದೆ!

ಮೂರು ವರ್ಷಗಳಿಂದ ಪ್ರೀತಿ, ಪ್ರೇಮ

ಆರೋಪಿ ಯುವಕ 12ನೇ ತರಗತಿವರೆಗೂ ಓದಿದ್ದು, ನಂತರ ಮೆಕಾನಿಕ್ ಕೋರ್ಸ್ ಮಾಡಿಕೊಂಡಿದ್ದನು. ಯುವಕನ ಪ್ರೇಯಸಿ 12ನೇ ತರಗತಿಯಲ್ಲಿ ಓದುತ್ತಿದ್ದಳು. ಇಬ್ಬರ ಮಧ್ಯೆ ಜಗಳವಾಗಿದ್ದು, ಕೋಪದಲ್ಲಿ ಆಕೆಯ ಸ್ಕಾರ್ಫ್ ಬಳಸಿ ಕತ್ತು ಹಿಸುಕಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದನು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಸ್ಥಳೀಯರು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು. ವೈದ್ಯರು ಯುವತಿ ಮೃತಪಟ್ಟಿರೋದನ್ನು ಖಚಿತಪಡಿಸಿದ್ದಾರೆ. ಯುವಕ-ಯುವತಿ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ನ್ಯಾಯಾಲಯ ಆರೋಪಿಯನ್ನು ಐದು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.

Latest Videos
Follow Us:
Download App:
  • android
  • ios