ಅಕ್ಕಲಕೋಟೆ ಬಳಿ ಭೀಕರ ಅಪಘಾತ: ಪಂಢರಪುರ ಯಾತ್ರೆಗೆ ಹೊರಟಿದ್ದ 7 ಜನರ ಸಾವು!
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಶಿರವಾಳವಾಡಿ ಹೊರ ವಲಯದಲ್ಲಿ ಕ್ರೂಸರ್ ಮತ್ತು ಭಾರಿ ಗಾತ್ರದ ಸಿಮೆಂಟ್ ಕಂಟೇನರ್ ಮಧ್ಯೆ ಸಂಭವಿಸಿರುವ ಮುಖಾಮುಖಿ ಢಿಕ್ಕಿಯಲ್ಲಿ ಒಂದು ಮಗು ಹಾಗೂ ಸೇರಿದಂತೆ 7 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಕಲಬುರಗಿ/ ಆಳಂದ: (ಜು.1) ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಶಿರವಾಳವಾಡಿ ಹೊರ ವಲಯದಲ್ಲಿ ಕ್ರೂಸರ್ ಮತ್ತು ಭಾರಿ ಗಾತ್ರದ ಸಿಮೆಂಟ್ ಕಂಟೇನರ್ ಮಧ್ಯೆ ಸಂಭವಿಸಿರುವ ಮುಖಾಮುಖಿ ಢಿಕ್ಕಿಯಲ್ಲಿ ಒಂದು ಮಗು ಹಾಗೂ ಸೇರಿದಂತೆ 7 ಜನರು ದಾರುಣವಾಗಿ ಸಾವನ್ನಪ್ಪಿರುವ ದುರಂತ ಘಟನೆ ಶುಕ್ರವಾರ ಸಂಜೆ ನಡೆದಿದೆ. ಭೀಕರವಾದಂತಹ ಈ ರಸ್ತೆ ಅಪಘಾತದಲ್ಲಿ ಮೃತ ಪಟ್ಟವರೆಲ್ಲರೂ ಆಳಂದ ತಾಲೂಕಿನ ಅಣೂರು ಗ್ರಾಮದವರಾಗಿದ್ದಾರೆ.
ಅಪಘಾತದಲ್ಲಿ ಸಾವನಪ್ಪಿದವರು:
ಲಲಿತಾ ಮಹಾದೇವ ಬುಗ್ಗೆ (50), ರೋಹಿಣಿ ಗೋಪಾಳ ಪೂಜಾರಿ (40), ಸುಂದರಾಬಾಯಿ ಭಾರತಸಿಂಗ ರಾಜಪೂತ(55), ಸಾಯಿನಾಥ ಗೋವಿಂದ ಪೂಜಾರಿ (10) ಎಲ್ಲರೂ ಅಣೂರ ಗ್ರಾಮದವರು. ಛಾಯಾ ಹನುಮಾನ ನನ್ನವರೆ (46) ಇಂದಾಪೂರ (ಪುಣೆ), ಹಾಗೂ ಸಂಗೀತಾ ಮದನ ಮಾನೆ (35) ಬೇಡಗಾ (ಉಮರಗಾ)
ಹೊಸಪೇಟೆ ಬಳಿ ಭೀಕರ ಅಪಘಾತ: ಬಳ್ಳಾರಿ ಕೌಲ್‌ಬಜಾರ್‌ನ ನಾಲ್ವರು ಸಾವು
ಅಪಘಾತದಲ್ಲಿ ಗಂಭೀರ ಗಾಯಗೊಂಡವರು :
ಸುಮೀತ ಪೂಜಾರಿ (9) ಅಣೂರ, ರೇಖಾ ಗೋವಿಂದ ಪೂಜಾರಿ, (40), ಗೋಪಾಳ ಚಂದ್ರಕಾಂತ ಪೂಜಾರಿ (45), ಅಜೀತ ಅಶೋಕ ಕುಂದಳೆ (30) , ಭಾಗ್ಯೇಶ ಅಶೋಕ ಕುಂದಲೆ (19) , ಕಲ್ಪನಾ ಅಶೋಕ ಕುಂದಲೆ (40) , ಅಶೋಕ ಕುಂದಲೆ (45), ಕೋಮಲ ಶ್ಯಾಮೆಡೆ (50), ಸುನೀಲ ಪಾಂಚಾಳ (50) ವಿಠ್ಠಲ ಹಣಮಂತ ನನ್ನವರೆ (35) ಗಾಯಗೊಂಡಿದ್ದಾರೆ.
ಆಶಾಢ ಏಕಾದಶಿ ನಿಮಿತ್ತ ಪಂಢರಪುರ ಯಾತ್ರೆ:
ಆಣೂರ ಗ್ರಾಮದ ಮಾನೆ, ಪೂಜಾರಿ, ನನ್ನೇವರ್ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಆಷಾಢ ಮಾಸದ ಪರಮ ಪವಿತ್ರ ಏಕಾದಶಿ ದಿನದಂದು ಪಂಢರಪೂರಕ್ಕೆ ಹೋಗಿ ವಿಠ್ಠಲ, ರುಕ್ಮಿಣಿ ದರುಶನ ಪಡೆದು ಊರಿಗೆ ಮರಳುತ್ತಿದ್ದಾಗ ಇವರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಅಪಘಾತವಾಗಿದೆ. ಪಂಢರಪುರದಿಂದ ಇವರು ಊರಿಗೆ ಮರಳುವಾಗ ದಾರಿಯಲ್ಲಿ ಘತ್ತರಗಿ ಭಾಗ್ಯವಂತಿ ದರುಶನ ಪಡೆದು ಅಕ್ಕಲಕೋಟೆ ಸ್ವಾಮಿ ಸಮರ್ಥರ ದರುಶನ ಪಡೆದುಕೊಂಡು ಇನ್ನೇನು ಆಣೂರ ಸೇರೋರಿದ್ದರು. ದಾರಿಯಲ್ಲೇ ಶಿರವಾಳ ವಾಡಿ ಬಳಿ ಸಿಮೆಂಟ್ ತುಂಬಿದ್ದ ಕಂಟೈನರ್ ಹಾಗೂ ಕ್ರೂಸರ್ ಮುಖಾಮುಖಿಯಾಗಿ ಢಿಕ್ಕಿ ಹೊಡೆದು ದುರಂತದಲ್ಲಿ 7 ಸಾವು ಸಂಭವಿಸಿದೆ.
ಹಾಸನ: ಬೈಕ್ ವೀಲ್ಹಿಂಗ್ ಹುಚ್ಚಾಟದ ವೇಳೆ ಭೀಕರ ಅಪಘಾತ, ಇಬ್ಬರು ಯುವತಿಯರಿಗೆ ಗಂಭೀರ ಗಾಯ
ಎರಡು ಕುಟುಂಬಗಳ ಸದಸ್ಯರ ಪೈಕಿ ಅಸುನೀಗಿದವರಲ್ಲಿ 6 ಜನ ಮಹಿಳೆಯರು ಹಾಗೂ ಒಂದು ಮಗು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಆಳಂದ ಪೊಲೀಸರು ಭೇಟಿ ನೀಡಿ ಪರಿಹಾರ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಪರಿಶೀಲನೆ ಮಾಡುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸವೂ ನಡೆದಿದೆ ಎಂದು ಆಳಂದ ಸಿಪಿಐ ಮಹಾದೇವ ಪಂಚಮುಖಿ ಹಾಗೂ ಡಿವೈಎಸ್‌ಪಿ ತಿಳಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರು ಆರೋಗ್ಯ ವಿಚಾರಿಸಿದರು.