ಹೊಸಪೇಟೆ ಬಳಿ ಭೀಕರ ಅಪಘಾತ: ಬಳ್ಳಾರಿ ಕೌಲ್‌ಬಜಾರ್‌ನ ನಾಲ್ವರು ಸಾವು

ತುಂಗಭದ್ರಾ (ಟಿಬಿ ಡ್ಯಾಂ) ನೋಡಲು ಆಗಮಿಸಿದ್ದ ಬಳ್ಳಾರಿ ಪ್ರವಾಸಿಗರ ಆಟೋಗೆ ಲಾರಿ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

Ballari Four people died had come to see Hospet Tungabhadra dam sat

ವಿಜಯನಗರ (ಜೂ.30): ಬಳ್ಳಾರಿ ನಗರದಿಂದ ಹೊಸಪೇಟೆ ಬಳಿಯಿರುವ ತುಂಗಭದ್ರಾ (ಟಿಬಿ ಡ್ಯಾಂ) ನೋಡಲು ಆಗಮಿಸಿದ್ದ ಪ್ರವಾಸಿಗರ ಆಟೋಗೆ ಲಾರಿ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಬ್ರಿಡ್ಜ್ ಬಳಿ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ. ಎರಡು ಆಟೋ ಮತ್ತು ಲಾರಿ ನಡುವೆ ಡಿಕ್ಕಿಯಾಗಿದ್ದು, ಈ ಭೀಕರ ಅಪಘಾತಕ್ಕೆ ನಾಲ್ವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಹೊಸಪೇಟೆ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಮೂವರ ಸ್ಥಿತಿ ಗಂಭೀರಬವಾಗಿದೆ. ಆಸ್ಪತ್ರೆಗೆ ರವಾನಿಸಿದವರ ಪೈಕಿ ಇಬ್ಬರು ಮಕ್ಕಳು, ಒಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆಯಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. 

ಚೆಲುವಿನ ಚಿತ್ತಾರ ಮಾದರಿ ಪ್ರೇಮಕಥೆ: ಅಲ್ಲಿ ಹುಡ್ಗ ಹುಚ್ಚನಾದ್ರೆ, ಇಲ್ಲಿ ಹುಡುಗಿಯೇ ಹುಚ್ಚಿಯಾದ್ಲು!

ಬಳ್ಳಾರಿ ಮೂಲದ ಮೂವರು ಮೃತರು: ಇನ್ನು ಬಳ್ಳಾರಿ ನಗರದ ಕೌಲ್ ಬಜಾರ್ ಬಳಿಯ ಗೌತಮ್ ನಗರದವರು ಎಂದು ಹೇಳಲಾಗುತ್ತಿದೆ. ಮನೆಯ ಎಲ್ಲ ಸದಸ್ಯರು ಹೊಸಪೇಟೆ ಬಳಿಯ ತುಂಭದ್ರಾ ಜಲಾಶಯ ವೀಕ್ಷಣೆಗೆಂದು ಬಂದಿದ್ದರು ಎಂದು ತಿಳಿದುಬಂದಿದೆ. ದುರಾದೃಷ್ಟವಶಾತ್‌ ಆಟೋಗೆ ಲಾರಿ ಡಿಕ್ಕಿ ಹೊಡೆದು ಮಸಣ ಸೇರಿದ್ದಾರೆ.

ಬಕ್ರೀದ್‌ ಹಬ್ಬದ ಬೆನ್ನಲ್ಲೇ ಮುಸ್ಲಿಂ ಯುವಕನ ಕೊಲೆ:  ಬಳ್ಳಾರಿ (ಜೂ.30) : ಬಕ್ರೀದ್ ಹಬ್ಬದಂದು ಸ್ನೇಹಿತರ ಜೊತೆ ಪಾರ್ಟಿ ಮಾಡುವಾಗ ಮಾತಿಗೆ ಮಾತು ಬೆಳೆದು ನಡೆದ ಜಗಳದಲ್ಲಿ ಯುವಕನೋರ್ವನನ್ನು ಕೊಲೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸೂರಿ ಕಾಲೋನಿಯಲ್ಲಿ ನಡೆದಿದೆ. ಲಿಯಾಖತ್ ಅಲಿಯಾಸ್ ರೋಷನ್ (24) ಕೊಲೆಯಾದ ಯುವಕ. ಕಲ್ಬುರ್ಗಿಯಲ್ಲಿ ಅರೇಬಿಕ್ ವಿದ್ಯಾಭ್ಯಾಸ ಮಾಡುತ್ತಿದ್ದ  ಲಿಯಾಖತ್. ಬಕ್ರೀದ್ ಹಬ್ಬ ಹಿನ್ನಲೆಯಲ್ಲಿ ಬುಧವಾರ ಸಂಜೆ ಬಳ್ಳಾರಿಗೆ ಆಗಮಿಸಿದ್ದ ಯುವಕ. ಬೆಳಗ್ಗೆ ಕುಟುಂಬದವರೊಡಗೂಡಿ ಬಕ್ರೀದ್ ಹಬ್ಬ ಆಚರಿಸಿದ್ದ ಲಿಯಾಕತ್. ಸಂಜೆ ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದನು. 

ಒಂದೇ ಕೋಮಿನ ಯುವಕರ ನಡುವೆ ಜಗಳ; ಬಕ್ರೀದ್ ಹಬ್ಬದ ದಿನವೇ ಯುವಕ ಕೊಲೆ

ಪಾರ್ಟಿ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ: ಎಲ್ಲರೂ ಒಂದೇ ಸಮುದಾಯದ ಸ್ನೇಹಿತರು. ಪಾರ್ಟಿ ಮಾಡುವ ವೇಳೆ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ. ಸಣ್ಣ ಜಗಳ ವಿಕೋಪಕ್ಕೆ ತಿರುಗಿದೆ ಈ ವೇಳೆ ಮಾರಾಕಾಸ್ತ್ರದಿಂದ ನಡೆದ ದಾಳಿಗೆ ಯುವಕ ಲಿಯಾಕರ್ ಬಲಿಯಾಗಿದ್ದಾನೆ. ಆದರೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಸ್ಥಳಕ್ಕೆ ಎಎಸ್ಪಿ ನಟರಾಜ್, ಗ್ರಾಮೀಣ ಠಾಣೆಯ  ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿದ್ದ ಸ್ಥಳ ಪರಿಶೀಲನೆ ನಡೆಸಿ, ಸಂಶಯಾಸ್ಪದ ಯುವಕರನ್ನು ವಶಕ್ಕೆ ಪಡೆದಿರುವ ಪೊಲೀಸರು. ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿ‌ ತನಿಖೆ ಕೈಗೊಂಡಿದ್ದಾರೆ.

Latest Videos
Follow Us:
Download App:
  • android
  • ios