Asianet Suvarna News Asianet Suvarna News

16 ರ ಬಾಲಕಿಯ ಜತೆ 61 ರ ಮುದುಕನಿಗೆ ಅಕ್ರಮ ಸಂಬಂಧ? ಕೊಡಲಿಯಿಂದ ಕೊಚ್ಚಿ ಕೊಂದ ಯುವತಿ ತಂದೆ

16ರ ಹರೆಯದ ಕುಟುಂಬಕ್ಕೆ ಆಕೆ ಗರ್ಭಿಣಿ ಎಂದು ತಿಳಿದು ಬಂದಿದೆ. ಇದಕ್ಕೆ ಯಾರು ಹೊಣೆ ಎಂದು ಕೇಳಿದಾಗ 61ರ ಹರೆಯದ ವ್ಯಕ್ತಿಯ ಹೆಸರನ್ನು ಹೇಳಿದ್ದಾಳೆ.

61 year old father of 7 daughters had allegedly illicit relationship with 16 year old girl was hacked to death with an axe ash
Author
First Published Jan 27, 2024, 6:04 PM IST

ಲಖನೌ (ಜನವರಿ 27, 2024): 16 ವರ್ಷದ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ 61 ವರ್ಷದ ವ್ಯಕ್ತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು 61 ವರ್ಷದ ರಾಮ್ ಅಸರೆ ಕುಶ್ವಾಹ ಎಂದು ಗುರುತಿಸಲಾಗಿದೆ. 

ಈ ಘಟನೆ ಇಡೀ ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಕೊಲೆಯಾದ ವೃದ್ಧನಿಗೆ 7 ಜನ ಹೆಣ್ಣು ಮಕ್ಕಳಿರುವುದು ಅಚ್ಚರಿ ಮೂಡಿಸಿದೆ. ಸದ್ಯ, ಮೃತ ರಾಮ್ ಅಸರಾ ಕುಶ್ವಾಹ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

'ಎಚ್ಚರವಾದಾಗ ಆತ ರೇಪ್‌ ಮಾಡ್ತಿದ್ದ..' ಡ್ರಗ್‌ ನಶೆಯಲ್ಲಿದ್ದ ಯುವತಿ ಮೇಲೆ ಇನ್ಸ್‌ಟಾಗ್ರಾಮ್‌ ಸ್ನೇಹಿತನಿಂದ ಅತ್ಯಾಚಾರ!

ಮೂಲಗಳ ಪ್ರಕಾರ 16ರ ಹರೆಯದ ಕುಟುಂಬಕ್ಕೆ ಆಕೆ ಗರ್ಭಿಣಿ ಎಂದು ತಿಳಿದು ಬಂದಿದೆ. ಇದಕ್ಕೆ ಯಾರು ಹೊಣೆ ಎಂದು ಕೇಳಿದಾಗ 61ರ ಹರೆಯದ ವ್ಯಕ್ತಿಯ ಹೆಸರನ್ನು ಹೇಳಿದ್ದಾಳೆ. ಇದರಿಂದ ಕುಪಿತಗೊಂಡ ಬಾಲಕಿಯ ತಂದೆ ವೃದ್ಧನ ಮೇಲೆ ಕೊಡಲಿಯಿಂದ ಗಂಭೀರವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.

ಕೋಪದಿಂದ ಸಂತ್ರಸ್ತೆಯ ತಂದೆ, ಮುದುಕನ ಕುತ್ತಿಗೆಗೆ ಕೊಡಲಿಯನ್ನು ಹಾಕಿ ಕತ್ತರಿಸಿದರು. ನಂತರ ಆ ವ್ಯಕ್ತಿ ತೀವ್ರವಾಗಿ ಗಾಯಗೊಂಡರು. ಬಳಿಕ, ಅವರನ್ನು ಝಾನ್ಸಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತಾದರೂ, ಅವರು ಶುಕ್ರವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಕೊಲೆಗಡುಕನಿಗೆ ನೈಟ್ರೋಜನ್‌ ಗ್ಯಾಸ್‌ ನೀಡಿ ಮರಣದಂಡನೆ: ಅಮೆರಿಕದಲ್ಲಿ ವಿಶ್ವದ ಮೊದಲ ಪ್ರಕರಣ

ಸದ್ಯ ಝಾನ್ಸಿ ಮೆಡಿಕಲ್ ಕಾಲೇಜ್ ಮೃತ ವೃದ್ಧೆಯ ಶವದ ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರ ಮುಂದೆ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದೆ. ಮೃತ ರಾಮ್ ಅಸರೆ ಕುಶ್ವಾಹ ಹಮೀರ್‌ಪುರದ ಜಲಾಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂಲಿವಾಸಾ ಗ್ರಾಮದ ನಿವಾಸಿಯಾಗಿದ್ದರು. ಇವರು ಕೃಷಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಈ ಸಂಬಂಧ ಮಾತನಾಡಿದ ವೃದ್ಧನ ಅಳಿಯ ಬ್ರಿಜೇಂದ್ರ ಕುಶ್ವಾಹ, ನನ್ನ ಮಾವ ರಾಮ್ ಕೃಷಿ ಕೆಲಸ ಮಾಡುತ್ತಿದ್ದರು. ಇಲ್ಲಿನ 16 ವರ್ಷದ ಬಾಲಕಿ ಗರ್ಭಿಣಿಯಾಗಿದ್ದಳು. ಜನವರಿ 1 ರಂದು ಆಕೆಗೆ ಗರ್ಭಪಾತವಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಅವರು ನನ್ನ ಮಾವ ಮೇಲೆ ಆರೋಪಿಸಿದರು. ಆದರೆ ಕೇಳಿದಾಗ ಅದು ನಾನಲ್ಲ ಎಂದು ಅವರು ನಿರಾಕರಿಸಿದರು. ನಾನು ಪೊಲೀಸರಿಗೆ ದೂರು ನೀಡಲು ಪ್ರಯತ್ನಿಸಿದಾಗಲೂ ಅವರು ಇಲ್ಲ ಎಂದು ಹೇಳಿದರು ಎಂದೂ ಹೇಳಿಕೊಂಡಿದ್ದಾರೆ.

ರಾಮ್ ಆಸರೆ ರಿಗೆ 8 ಹೆಣ್ಣು ಮಕ್ಕಳಿದ್ದಾರೆ. ಅವರಲ್ಲಿ 6 ಹೆಣ್ಣುಮಕ್ಕಳಿಗೆ ಮದುವೆಯಾಗಿದೆ. ಇಬ್ಬರು ಹೆಣ್ಣು ಮಕ್ಕಳು ಇನ್ನೂ ಮದುವೆಯಾಗಿಲ್ಲ. ಕೊಲೆ ಮಾಡಿದ ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿಲ್ಲ ಎಂದೂ ಅಳಿಯ ದೂರಿದ್ದಾರೆ.

Follow Us:
Download App:
  • android
  • ios