'ಎಚ್ಚರವಾದಾಗ ಆತ ರೇಪ್‌ ಮಾಡ್ತಿದ್ದ..' ಡ್ರಗ್‌ ನಶೆಯಲ್ಲಿದ್ದ ಯುವತಿ ಮೇಲೆ ಇನ್ಸ್‌ಟಾಗ್ರಾಮ್‌ ಸ್ನೇಹಿತನಿಂದ ಅತ್ಯಾಚಾರ!

ಆತನ ಕ್ಷಮೆ ನನಗೆ ಏನೇನೋ ಅಲ್ಲ ಎಂದಿರುವ ಯುವತಿ ತನ್ನ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಇನ್ಸ್‌ಟಾಗ್ರಾಮ್‌ನಲ್ಲಿ ವಿವರವಾಗಿ ಬರೆದುಕೊಂಡಿದ್ದಾಳೆ.

Mumbai Girl Drugged and Raped By Insta Friend Narrates Her roofied  On Instagram san

ಮುಂಬೈ (ಜ.27): ಸೋಶಿಯಲ್‌ ಮೀಡಿಯಾದಲ್ಲಿ ಪರಿಚಿತನಾದ ಹುಡುಗನೊಬ್ಬ ನನಗೆ ಡ್ರಗ್‌ ನೀಡಿ ರೇಪ್‌ ಮಾಡಿದ್ದಾನೆ ಎಂದು 21 ವರ್ಷದ ಯುವತಿಯೊಬ್ಬಳು ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ತನಗೆ ಆದ ಕಷ್ಟವನ್ನು ಸಂಪೂರ್ಣವಾಗಿ ಬರೆದುಕೊಂಡಿರುವ ಆಕೆ, ನನ್ನ ಜೀವನದ ಅತ್ಯಂತ ಆಘಾತಕಾರಿ ಅನುಭವ ಎಂದು ವಿವರಿಸಿದ್ದಾರೆ. ಹೀತಿಕ್‌ ಶಾ ಎನ್ನುವ ವ್ಯಕ್ತಿಯ ಮೇಲೆ ಯುವತಿ ಆರೋಪ ಮಾಡಿದ್ದು, ಘಟನೆ ನಡೆದು ಈ ಕುರಿತಾಗಿ ದೂರು ನೀಡಿ 12 ದಿನಗಳಾಗಿದ್ದೂ ಪೊಲೀಸರು ಆ ವ್ಯಕ್ತಿಯನ್ನು ಈವರೆಗೂ ಬಂಧಿಸಿಲ್ಲ ಎಂದು ಹೇಳಿದ್ದಾರೆ. ತನ್ನ ಐಡೆಂಟಿಟಿಯನ್ನು ಬಹಿರಂಗಪಡಿಸಲು ಯುವತಿ ನಿರಾಕರಿಸಿದ್ದು, ಇದಕ್ಕಾಗಿ 'ಪನಿಶ್‌ ಮೈ ರೇಪಿಸ್ಟ್‌' (punishmyrapist) ಎನ್ನುವ ಇನ್ಸ್‌ಟಾಗ್ರಾಮ್‌ ಖಾತೆಯ ಮೂಲಕ ಎರಡು ದಿನಗಳ ಹಿಂದೆ ತನಗಾದ ಅನುಭವದ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾಳೆ. ಅದು ಮಾತ್ರವಲ್ಲದೆ, ತನ್ನನ್ನು ರೇಪ್‌ ಮಾಡಿರುವ ವ್ಯಕ್ತಿ ಯಾರು ಎನ್ನುವ ಬಗ್ಗೆ ಆತನ ಇನ್ಸ್‌ಟಾಗ್ರಾಮ್‌ ಹ್ಯಾಂಡಲ್‌ಅನ್ನೂ ಟ್ಯಾಗ್‌ ಮಾಡಿದ್ದಾರೆ. ಇಬ್ಬರು ಭೇಟಿಯಾಗಬೇಕು ಎಂದು ನಿರ್ಧಾರ ಮಾಡುವ ಮುನ್ನ ಆತನೊಂದಿಗೆ ನಾನು ಇನ್ಸ್‌ಟಾಗ್ರಾಮ್‌ನಲ್ಲಿ ಮಾತ್ರವೇ ಮಾತನಾಡಿದ್ದೆ ಎಂದು ಆಕೆ ಬರೆದುಕೊಂಡಿದ್ದಾರೆ. ಜನವರಿ 13 ರಂದು ಈ ಘಟನೆ ನಡೆದಿದ್ದು, ಪ್ರಕರಣದ ಬಗ್ಗೆ ದಕ್ಷಿಣ ಮುಂಬೈನ ವೊರ್ಲಿ ಪೊಲೀಸ್‌ ತನಿಖೆ ಆರಂಭಿಸಿದ್ದಾರೆ.

ಸಾಮಾನ್ಯ ದಿನವೊಂದು ನನ್ನ ಪಾಲಿಗೆ ಯಾವ ರೀತಿಯಲ್ಲಿ ಕರಾಳ ದಿನವಾಗಿ ಮಾರ್ಪಟ್ಟಿತು ಎನ್ನುವ ಬಗ್ಗೆ ಇನ್ಸ್‌ಟಾಗ್ರಾಮ್‌ನಲ್ಲಿ ಆಕೆ ವಿವರವಾಗಿ ಬರೆದಿದ್ದಾರೆ. ಹೀತಿಕ್‌ ಶಾನನ್ನು ಭೇಟಿಯಾಗಿ ಆತನೊಂದಿಗೆ ಕೆಲ ಡ್ರಿಂಕ್ಸ್‌ ಕುಡಿಯುವ ಮೂಲಕ ಆರಂಭವಾಗಿದ್ದ ಆ ಸಂಜೆ ಬಳಿಕ ಬಾಸ್ಟಿಯನ್‌ ರೆಸ್ಟೋರೆಂಟ್‌ಗೆ ಶಿಫ್ಟ್‌ ಆಗಿತ್ತು ಎಂದು ಬರೆದಿದ್ದಾರೆ. ಅಲ್ಲಿ ಕೆಲವು ಟಕಿಲಾ ಶಾಟ್ಸ್‌ಗಳನ್ನು ಕುಡಿದ ಬಳಿಕ ನನಗೆ ನಶೆ ಏರುವುದರೊಂದಿಗೆ ಆತಂಕವಾಗಲು ಆರಂಭವಾಗಿತ್ತು. ಆತ ನನಗೆ ತಿಳಿಯದೇ ಅದರಲ್ಲಿ ಡ್ರಗ್ಸ್‌ ಸೇರಿಸಿದ್ದಿರಬಹುದು ಎಂದು ಆಕೆ ಶಂಕಿಸಿದ್ದಾರೆ.

ಆತ ನನಗೆ ಇನ್ನಷ್ಟು ಕುಡಿಯುವಂತೆ ಒತ್ತಾಯ ಮಾಡುತ್ತಿದ್ದ. ಆದರೆ, ನನಗೆ ಬ್ಲಾಕ್‌ಔಟ್‌ (ಬ್ಲಾಕ್‌ ಔಟ್‌ ಎಂದರೆ ಆ ಕ್ಷಣದಿಂದ ಏನಾಗುವುದು ಅವರ ನೆನಪಿನಲ್ಲಿ ಇರದೇ ಇರುವ ಪರಿಸ್ಥಿತಿ ) ಆಗಿತ್ತು. ಅದಾದ ಬಳಿಕ ಏನಾಯಿತು ಎನ್ನುವುದೇ ನನಗೆ ಗೊತ್ತಾಗುತ್ತಿಲ್ಲ. ನನ್ನ ಪ್ರಕಾರ ನಾನು ರೂಫಿಡ್‌ (roofied) ಅಗಿರಬಹುದು ಎಂದಿದ್ದಾರೆ. ಡ್ರಗ್ಸ್‌ ನಶೆಯಲ್ಲಿದ್ದ ವ್ಯಕ್ತಿ ಮೇಲೆ ಆಗುವ ಲೈಂಗಿಕ ದೌರ್ಜನ್ಯಕ್ಕೆ ಸಾಮಾನ್ಯವಾಗಿ ಇಂಗ್ಲೀಷ್‌ನಲ್ಲಿ ರೂಫಿಡ್‌ ಎಂದು ಕರೆಯುತ್ತಾರೆ.

ನನಗೆ ಬ್ಲಾಕ್‌ಔಟ್‌ ಆಗಿತ್ತು ಎನ್ನುವ ಆಕೆ, ಒಂದು ಹಂತದಲ್ಲಿ ನನಗೆ ಎಚ್ಚರವಾದಾಗ ಹೀತಕ್‌ ಶಾ ನನ್ನ ಮೇಲೆ ರೇಪ್‌ ಮಾಡುತ್ತಿದ್ದ. ಈ ಹಂತದಲ್ಲಿ ನಾನು ಅತನನ್ನು ತಡೆಯಲು ಪ್ರಯತ್ನಿಸಿದರೂ ಅದು ವಿಫಲವಾಗಿತ್ತು. ಆತ ರೇಪ್‌ ಮಾಡುವುದನ್ನು ಮುಂದುವರಿಸಿದ್ದ. ಸಿಟ್ಟಿನಲ್ಲಿ ಆತ ಮೂರು ಬಾರಿ ನನ್ನ ಕೆನ್ನೆಗೆ ಹೊಡೆದಿದ್ದ. ನನ್ನನ್ನು ಆತ ಹೆದರಿಸಿದ್ದ ಕಾರಣ ಸಿಕ್ಕಾಪಟ್ಟೆ ಭಯವಾಗಿತ್ತು ಎಂದು ಯುವತಿ ಆರೋಪಿಸಿದ್ದಾಳೆ.

ಬಹುಶಃ ಹೀತಕ್‌ ಶಾನ ಸ್ನೇಹಿತನ ನಿವಾಸದಲ್ಲಿ ಈ ಘಟನೆ ನಡೆದಿರಬಹುದು ಎಂದು ಯುವತಿ ತಿಳಿಸಿದ್ದು, ಹಾಗೇನಾದರೂ ಸಹಾಯಕ್ಕೆ ಯಾರನ್ನಾದರೂ ಕರೆದರೆ ಮುಂದಿನ ಪರಿಣಾಮ ಸರಿ ಇರೋದಿಲ್ಲ ಎಂದು ಆತ ಎಚ್ಚರಿಸಿದ್ದ ಎಂದಿದ್ದಾರೆ. 'ಇದು ಆತನ ಸ್ನೇಹಿತನ ಮನೆಯಾಗಿತ್ತು. ಆತನ ಸ್ನೇಹಿತರು ಅವನ ಬೆಂಬಲಕ್ಕೆ ನಿಂತಿದ್ದರು. ನಾನು ಸಹಾಯಕ್ಕೆ ಯಾರನ್ನಾದರೂ ಕರೆಯುವ ಮುನ್ನವೇ ಆತ ನನ್ನನ್ನು ಹೊರಕಳಿಸಲು ಯೋಚಿಸುತ್ತಿದ್ದ. ಸ್ನೇಹಿತರ ಎದುರೇ ನನಗೆ ಬೆದರಿಕೆ ಹಾಕಿದ್ದ' ಎಂದಿದ್ದಾರೆ. ಈ ಹಂತದಲ್ಲಿ ನಾನು ನನ್ನ ಸಂಬಂಧಿಗೆ ಫೋನ್‌ ಮಾಡಿ ನನ್ನ ಕರೆದುಕೊಂಡು ಹೋಗುವಂತೆ ತಿಳಿಸಿದ್ದೆ. ಬಳಿಕ ಆದ ಘಟನೆಯನ್ನು ತನ್ನ ಪಾಲಕರಿಗೆ ತಿಳಿಸಿದ ಬಳಿಕ, ಅದೇ ವಾರ ಎಫ್‌ಐಆರ್‌ ದಾಖಲಿಸಿದ್ದೆ ಎಂದು ಬರೆದುಕೊಂಡಿದ್ದಾರೆ.

ಈ ಘಟನೆಯ ಬಗ್ಗೆ ಹೀತಕ್‌ ಶಾ ಕ್ಷಮೆ ಕೋರಿದ್ದ ಎಂದೂ ಹೇಳಿರುವ ಆಕೆ, ಆ ಕ್ಷಣದಲ್ಲಿ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. "ಹಾಯ್, ಇಂದು ರಾತ್ರಿ ಏನಾಯಿತು ಎನ್ನುವುದರ ಬಗ್ಗೆ ನನಗೆ  ಪ್ರಾಮಾಣಿಕವಾಗಿ ವಿಷಾದವಿದೆ. ಏನಾಯಿತೋ ಅದನ್ನು ಮಾಡಲು ನನ್ನ ಉದ್ದೇಶವಿರಲಿಲ್ಲ. ಆ ಕ್ಷಣದಲ್ಲಿ ಸ್ಥಿತಿ ಉಲ್ಭಣವಾಯಿತು. ಇದಕ್ಕಾಗಿ ನನಗೆ ಬೇಸರವಿದೆ. ಇದನ್ನು ಬೆನ್ನ ಹಿಂದೆ ಬಿಟ್ಟು ನಾವು ಮುಂದೆ ಸಾಗಬಹುದು ಎಂದು ಭಾವಿಸುತ್ತೇನೆ. ನಿನಗೆ ನಾನು ಮತ್ತೊಮ್ಮೆ ಕ್ಷಮೆ ಯಾಚನೆ ಮಾಡುತ್ತೇನೆ' ಎಂದು ಹೀತಕ್‌ ಶಾ ಸಂದೇಶ ಕಳಿಸಿದ್ದ ಎಂದಿದ್ದಲ್ಲದೆ, ಅದರ ಸ್ಕ್ರೀನ್‌ ಶಾಟ್‌ಅನ್ನು ಹಂಚಿಕೊಂಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by @punishmyrapist

'L01-501' ಕೋಡ್‌ ಪತ್ತೆ ಮಾಡಿದ ಮುಂಬೈ ಪೊಲೀಸ್‌, 38 ದಿನಗಳ ಬಳಿಕ ಸಿಕ್ತು ಯುವತಿಯ ಶವ!

ಆದರೆ, ಆತನ ಕ್ಷಮೆ ನನಗೆ ಆಗಿರುವ ಹಿಂಸೆಯ ಎದುರು ಏನೂ ಅಲ್ಲ ಎಂದಿರುವ ಯುವತಿ, ಘಟನೆ ನಡೆದು ಇಷ್ಟು ದಿನಗಳಾದರೂ ಆರೋಪಿ ಪತ್ತೆಯಾಗಿಲ್ಲ ಎಂದಿದ್ದಾರೆ. 12 ದಿನಗಳಾಗಿವೆ. ಹಾಗಿದ್ದರೂ ಆತನ ಬಂಧನವಾಗಿಲ್ಲ. ಈಗಾಗಲೇ ಆತ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ ಎಂದು ತಿಳಿಸಿದ್ದಾರೆ. 

ತಪ್ಪು QR Code ಶೇರ್‌ ಮಾಡಿದ ಕಾಂಗ್ರೆಸ್‌, ಕೋಟಿ ಕೋಟಿ ಕಳೆದುಕೊಂಡ Donate for Desh ಅಭಿಯಾನ!

ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರಕ್ಕೆ ಶಿಕ್ಷೆ), ಮತ್ತು 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಯ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮುಂಬೈ ಪೊಲೀಸರು, "ನೀವು ಅದನ್ನು ಸರಿಯಾಗಿ ವರದಿ ಮಾಡಿದ್ದೀರಿ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಲು ತನಿಖೆ ಸರಿಯಾಗಿ ನಡೆಯಬೇಕು ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ" ಎಂದು ಹೇಳಿದ್ದಾರೆ.
 

Latest Videos
Follow Us:
Download App:
  • android
  • ios