Raichur: ಬ್ಲ್ಯಾಕ್‌ಮೇಲ್‌ ಮಾಡಿ 5 ಲಕ್ಷಕ್ಕೆ ಬೇಡಿಕೆ, 6 ಜನ ನಕಲಿ ಪತ್ರಕರ್ತರ ಬಂಧನ

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ನಡೆದ ಘಟನೆ 

6 Fake Journalists Arrested For Blackmail Case in Raichur grg

ರಾಯಚೂರು(ಆ.31):  ಬ್ಲ್ಯಾಕ್‌ಮೇಲ್‌ ಮಾಡಿ, ಐದು ಲಕ್ಷಕ್ಕೆ ಬೇಡಿಕೆ ಇಟ್ಟಿದ ಆರು ಜನ ನಕಲಿ ಪತ್ರಕರ್ತರನ್ನ ಪೊಲೀಸರು ಬಂಧಿಸಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಇಂದು(ಬುಧವಾರ) ನಡೆದಿದೆ.  ಬೆಂಗಳೂರು ಮೂಲದ ಆರು ಜನ ನಕಲಿ ಪತ್ರಕರ್ತರನ್ನ ಪೊಲೀಸರು ಬಂಧಿಸಿದ್ದಾರೆ. ಮೂವರು ಮಹಿಳೆಯರು ಹಾಗೂ ಮೂವರು ಪುರುಷ ನಕಲಿ ಪತ್ರಕರ್ತರನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತರನ್ನ ರಾಜು ಬಿ, ನಾಗರಾಜ ಸಿ, ಪ್ರದಿಪಗೌಡ, ಅರ್ಪಿತ, ಮಹಾದೇವಿ, ಮೆಗಾ ಎಸ್ ಬಂಧಿತ ಯೂಟ್ಯೂಬ್ ಚಾನೆಲ್ ಹೆಸರಿನ ನಕಲಿ ಪತ್ರಕರ್ತರಾಗಿದ್ದಾರೆ. 

ಚಿಕ್ಕೋಡಿ: ಖೋಟಾ ನೋಟು ಜಾಲ ಪತ್ತೆ: ಮುಗ್ದ ಜನರಿಗೆ ವಂಚಿಸುತ್ತಿದ್ದ ಗ್ಯಾಂಗ್‌ ಅರೆಸ್ಟ್

ಯೂಟ್ಯೂಬ್ ಚಾನೆಲ್ ಹೆಸರು ಹೇಳಿಕೊಂಡು ಸ್ಥಳೀಯ ಅಕ್ಕಿ ಮಾರಾಟಗಾರರಿಗೆ ಬಂಧಿತ ಆರೋಪಿಗಳು ಬ್ಲಾಕ್ ಮೇಲ್ ಮಾಡಿದ್ದರು. ಅಕ್ಕಿ ವ್ಯಾಪಾರಿ ವೀರೇಶ ಎಂಬುವರ ಅಂಗಡಿಗೆ ನುಗ್ಗಿದ್ದ ನಕಲಿ ಪತ್ರಕರ್ತರು ಕ್ಯಾಮರಾ ಮತ್ತು ಲೋಗೋ ಹಿಡಿದು ನೀವು ಅಕ್ರಮವಾಗಿ ಪಡಿತರ ಆಹಾರ ಧಾನ್ಯದ ಅಕ್ಕಿ ಮಾರಾಟ ಮಾಡುತಿದ್ದೀರಿ, ನಿಮ್ಮ‌ ಬಗ್ಗೆ ಸುದ್ದಿವಾಹಿನಿಯಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿ, ಬ್ಲಾಕ್ ಮೇಲ್ ಮಾಡಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. 
ಇವರ ಬಗ್ಗೆ ಅನುಮಾನಗೊಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳೀಯರ ದೂರಿನ ಬಳಿಕ ನಕಲಿ ಪತ್ರಕರ್ತರ ಅಸಲಿ ಬಣ್ಣ ಬಯಲಾಗಿದೆ. ಹಣದ ಬೇಡಿಕೆ ಇಟ್ಟ ಬಗ್ಗೆ ಅಕ್ಕಿ ವ್ಯಾಪಾರಿ ವಿರೇಶ ಅವರು ಸ್ಥಳೀಯ ಪತ್ರಕರ್ತರಿಗೆ ಮಾಹಿತಿ ನೀಡಿದ್ದರು. 

ಬೆಂಗಳೂರು: ದೂರವಾಗಿದ್ದ ಪ್ರಿಯಕರನ ಅಪಹರಿಸಿ ಥಳಿಸಿದ ಪ್ರಿಯತಮೆ..!

ಸ್ಥಳಕ್ಕೆ ಧಾವಿಸಿದ ಮುದಗಲ್ ಠಾಣೆಯ ಪೊಲೀಸರು ನಕಲಿ ಪತ್ರಕರ್ತರನ್ನ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಿಂದ ಕ್ಯಾಮರಾ, ಐಡಿ ಕಾರ್ಡ್ ಹಾಗೂ ಮಾರುತಿ ಸ್ವಿಫ್ಟ್ ಕಾರ್‌ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ. 

ಈ ಸಂಬಂಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆಯೂ ಇದೇ ರೀತಿಯ ಬ್ಲಾಕ್ ಮೇಲ್ ಪ್ರಕರಣದಲ್ಲಿ ಬಂಧಿತರಾಗಿದ್ದರು ಇದೇ ನಕಲಿ ಪತ್ರಕರ್ತರು. ಬಂಧಿತ ಆರೋಪಿಗಳ ವಿರುದ್ಧ ಈಗಾಗಲೇ ಬ್ಲಾಕ್ ಮೇಲ್‌ ಮಾಡಿದ ನಾಲ್ಕೈದು ಪ್ರಕರಣಗಳು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿವೆ. ಆರು ಜನರನ್ನು ವಶಕ್ಕೆ ಪಡೆದು ಮುದಗಲ್ ಠಾಣೆಯ ಪೊಲೀಸರು ತನಿಖೆಯನ್ನ ಆರಂಭಿಸಿದ್ದಾರೆ.  
 

Latest Videos
Follow Us:
Download App:
  • android
  • ios