Asianet Suvarna News Asianet Suvarna News

ಚಿಕ್ಕೋಡಿ: ಖೋಟಾ ನೋಟು ಜಾಲ ಪತ್ತೆ: ಮುಗ್ದ ಜನರಿಗೆ ವಂಚಿಸುತ್ತಿದ್ದ ಗ್ಯಾಂಗ್‌ ಅರೆಸ್ಟ್

Fake Currency Gang Arrested: ಗಡಿಯಲ್ಲಿ ಖೋಟಾ ನೋಟು ಜಾಲವನ್ನು ಮಹಾರಾಷ್ಟ್ರದ ಗಡಹಿಂಗ್ಲಜ್ ಪೊಲೀಸರು ಪತ್ತೆ ಹಚ್ಚಿದ್ದಾರೆ

Fake Currency Gang including one from Chikkodi Arrested by Maharashtra police mnj
Author
First Published Aug 28, 2022, 4:22 PM IST

ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕೊಡಿ (ಆ. 28):  ಗಡಿಯಲ್ಲಿ ಖೋಟಾ ನೋಟು ಜಾಲವನ್ನು ಮಹಾರಾಷ್ಟ್ರದ ಗಡಹಿಂಗ್ಲಜ್ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಪಟ್ಟಣದ  ಯುವಕ ಸೇರಿ ಇನ್ನಿಬ್ಬರನ್ನು ಗಡಹಿಂಗ್ಲಜ್ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಈ ತಂಡ ಖೋಟಾ ನೋಟು ಪ್ರಿಂಟ್ ಮಾಡಿ ಅವುಗಳನ್ನು ಸಂತೆ ಬಜಾರ್‌ನಲ್ಲಿ ವ್ಯವರಿಸುವ ಮುಗ್ದ ಜನರಿಗೆ ನೀಡಿ ವಂಚನೆ ಮಾಡುತ್ತಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಿಕ್ಕೋಡಿ ಮೂಲದ ಅಬ್ದುಲ್ ರಜಾಕ್ ಮಕಾಂದಾರ್ ಎಂಬ ಯುವಕನನ್ನು ಮಹಾರಾಷ್ಟ್ರದ ಗಡಹಿಂಗ್ಲಜ್ ಪೊಲೀಸರು ಬಂಧಿಸಿದ್ದಾರೆ. ಅವನೊಂದಿಗೆ ವ್ಯವಹಾರಕ್ಕೆ ಸಹಕಾರ ನೀಡಿತ್ತಿದ್ದ ಗಡಹಿಂಗ್ಲಜ್ ತಾಲೂಕಿನ ಇನ್ನಿಬ್ಬರು ಆರೋಪಿಗಳನ್ನೂ ಸಹ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. 

ಬಂಧಿತರಿಂದ ಖೋಟಾ ನೋಟು ಪ್ರಿಂಟ್ ಮಾಡುವ ಪ್ರಿಂಟರ್ ಹಾಗೂ 500, 200, 100ರ ಮುಖಬೆಲೆಯ 2 ಲಕ್ಷ 28 ಸಾವಿರ ರೂಪಾಯಿ ಖೋಟಾ ನೋಟನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರ್ನಾಟಕದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಆಕ್ಟಿವ್ ಆಗಿದ್ದ ಈ ಗ್ಯಾಂಗ್ ಇನ್ನೂ ಎಲ್ಲೆಲ್ಲಿ ಖೋಟಾ ನೋಟುಗಳನ್ನು ಹರಿಬಿಟ್ಟಿದೆ ಎಂಬುದರ ಬಗ್ಗೆಯೂ ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ‌ಈ ಕುರಿತು ಮಹಾರಾಷ್ಟ್ರದ ಗಡಹಿಂಗ್ಲಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕಿಗೆ ನಕಲಿ ನೋಟು ಹಾಕಿ ಹೊಸ ನೋಟು ಕೇಳಿದವಳ ಬಂಧನ

ನಕಲಿನೋಟು ಪ್ರಕರಣ: ಐವರ ಬಂಧನ: ಖೋಟಾನೋಟು ಚಲಾವಣೆಗಾಗಿ ಹೊಸಪೇಟೆ ನಗರಕ್ಕೆ ಆಗಮಿಸಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಹೊಸಪೇಟೆ ಪಟ್ಟಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ದಾವಣಗೆರೆ ಜಿಲ್ಲೆ ವದಗನಹಟ್ಟಿನಿವಾಸಿ ಕುಬೇರಪ್ಪ ತಳವಾರ (58), ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ದೊಡ್ಡಗೋಪೆನ ಹಳ್ಳಿಯ ರುದ್ರೇಶ್‌ (39), ಮಂಡ್ಯ ಜಿಲ್ಲೆ ಮೊಗರಹಳ್ಳಿ ನಿವಾಸಿ ಎಸ್‌. ರಾಜೇಶ್‌ (28), ರವಿ (30), ಮೈಸೂರು ವಿನಾಯಕ ನಗರದ ಪ್ರಶಾಂತ (30) ಎಂಬವರನ್ನು ಬಂಧಿಸಲಾಗಿದೆ.

 ಆರೋಪಿಗಳಿಂದ .500 ಮುಖ ಬೆಲೆಯ .1.56 ಲಕ್ಷ ಮೊತ್ತದ ಖೋಟಾ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಶನಿವಾರ ನಗರದ ರಾಣಿ ಪೇಟೆ ವೆಂಕಟೇಶ್ವರ ಲಾಡ್ಜನಲ್ಲಿ ತಂಗಿದ್ದು, ಖೋಟಾ ನೋಟು ಚಲಾವಣೆಗೆ ಬಂದಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪಟ್ಟಣ ಠಾಣೆ ಪೊಲೀಸರು ದಾಳಿ ನಡೆಸಿ, ಆರೋಪಿಗಳು ಬಂಧಿಸಿದ್ದಾರೆ. ಆರೋಪಿಗಳನ್ಮು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಖೋಟಾ ನೋಟಿನ ದಂಧೆ: ಖತರ್ನಾಕ್ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಉತ್ತರ ಕನ್ನಡ ಪೊಲೀಸರು

Follow Us:
Download App:
  • android
  • ios