ಪುಟ್ಟ ಮಗುವಿಗೆ ಬಿಸಿ ಮಾಡಿದ ಕಬ್ಬಿಣವಿಟ್ಟ ತಾಯಿ 5 ತಿಂಗಳ ಪುಟ್ಟ ಹೆಣ್ಣು ಮಗು ಸಾವು

ಜೈಪುರ(ಜು.10): ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಐದು ತಿಂಗಳ ಬಾಲಕಿ ಅಮ್ಮನ ಎಡವಟ್ಟಿನಿಂದ ಸಾವನ್ನಪ್ಪಿದ್ದಾಳೆ. ತಾಯಿ ಮಗುವಿನ ಹೊಟ್ಟೆಗೆ ಸಂಬಂಧಿಸಿದ ಕೆಲವು ಕಾಯಿಲೆ ಗುಣಪಡಿಸುವ ಸಲುವಾಗಿ ಬಿಸಿ ಕಬ್ಬಿಣ ತಾಗಿಸಿದ್ದರು. ಇದರ ನಂತರ ಮಗು ಸಾವನ್ನಪ್ಪಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೊಲೀಸರು ಈ ವಿಷಯದ ಬಗ್ಗೆ ತಿಳಿದುಕೊಂಡ ನಂತರ, ಮರಣೋತ್ತರ ಪರೀಕ್ಷೆಗಾಗಿ ಶಿಶುವಿನ ದೇಹವನ್ನು ಪಡೆದಿದ್ದು ಪೋಷಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ರಮೇಶ್ ಬಗರಿಯಾ ಮತ್ತು ಅವರ ಪತ್ನಿ ಲಹರಿ ಜಿಲ್ಲೆಯ ಮಂಡಲ್ ಬ್ಲಾಕ್‌ನ ಲುಹರಿಯಾ ಗ್ರಾಮದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ, ದಂಪತಿಗಳ ಶಿಶು ಮಗಳು ಲೀಲಾ ಅನಾರೋಗ್ಯದಿಂದ ಬಳಲುತ್ತಿದ್ದರು. ಅವಳು ಸರಿಯಾಗಿ ಹಾಲು ಕುಡಿಯದೆ ಯಾವಾಗಲೂ ಅಳುತ್ತಿದ್ದಳು.

ಬಾಡಿಗೆ ಬೇಡ..ಕಿಸ್ ಕೊಟ್ರೆ ಸಾಕು.. 50 ವರ್ಷದ ಚಪಲ ಚೆನ್ನಿಗರಾಯ ಮನೆ ಮಾಲೀಕ!

ಹುಡುಗಿಗೆ ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆ ಇದೆ ಎಂದು ಲಹರಿ ನಂಬಿದ್ದರು. ತನ್ನ ಮಗಳ ಚಿಕಿತ್ಸೆಗಾಗಿ ಸ್ಥಳೀಯ ತಾಂತ್ರಿಕನನ್ನು ಸಂಪರ್ಕಿಸಿದ್ದಾರೆ. ಆದರೆ ಅವನು ಹಳ್ಳಿಯಿಂದ ಹೊರಗೆ ಹೋಗಿದ್ದನು. ಇದನ್ನು ಅನುಸರಿಸಿ, ಲಹರಿ ಗುರುವಾರ ತನ್ನ ಪುಟ್ಟ ಮಗಳಿಗೆ ಬಿಸಿ ಕಬ್ಬಿಣ ತಾಗಿಸಿದ್ದಾರೆ.

ಮಗುವಿನ ಸ್ಥಿತಿ ಹದಗೆಟ್ಟಿತು. ಆಕೆಯನ್ನು ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಆಕೆಗೆ ವೆಂಟಿಲೇಟರ್ ಬೆಂಬಲ ನೀಡಲಾಯಿತು. ಏಳು ಗಂಟೆಗಳ ನಂತರ, ಮಗು ಮೃತಪಟ್ಟಳು.