Asianet Suvarna News Asianet Suvarna News

ಚಿಕ್ಕಬಳ್ಳಾಪುರ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯ ಕೊಲೆ ಮಾಡಿದ ಪ್ರಿಯಕರ

ಕೊಲೆಯಾದ ಮಹಿಳೆಯನ್ನು ದೀಪ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ತಮಿಳುನಾಡಿನ ದಿವಾಕರ ಎಂಬುವನು ಈಕೆಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. 

40 Year Old Women Killed in Chikkaballapur grg
Author
First Published Feb 12, 2024, 1:30 AM IST

ಚಿಕ್ಕಬಳ್ಳಾಪುರ(ಫೆ.12): ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಆರೋಪಿ ಪರಾರಿಯಾದ ಘಟನೆ ನಗರದ 29 ನೇ ವಾರ್ಡ್ ನ ರೈಲ್ವೇ ಸ್ಟೇಷನ್ ಮುಖ್ಯರಸ್ತೆಯ ಚಾಮರಾಜಪೇಟೆಯಲ್ಲಿ ಬಾಡಿಗೆ ಕೊಠಡಿಯೊಂದರಲ್ಲಿ ನಡೆದಿದೆ.

ಕೊಲೆಯಾದ ಮಹಿಳೆಯನ್ನು ದೀಪ(40) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ತಮಿಳುನಾಡಿನ ದಿವಾಕರ ಎಂಬುವನು ಈಕೆಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. 

ತಂದೂರಿ ರೊಟ್ಟಿ ಮಾಡುತ್ತಿದ್ದವ ಮಧ್ಯರಾತ್ರಿ ಮಸಣ ಸೇರಿದ, ನಾಲ್ಕು ದಿನ 4 ಕೊಲೆಗೆ ಬಿಚ್ಚಿಬಿದ್ದ ಧಾರವಾಡ

ಫೆ.7 ರಂದು ಕೊಠಡಿಗೆ ಆಗಮಿಸಿದ್ದ ಈಕೆಯನ್ನು ಕೊಲೆ ಮಾಡಿರುವ ಆರೋಪಿ, ಕೊಠಡಿ ಬೀಗ ಹಾಕಿ ಕೊಂಡು ತೆರಳಿದ್ದಾನೆ. ಶನಿವಾರ ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದು ರಾತ್ರಿ ಮನೆಯ ಬಾಗಿಲಿನ ಬೀಗದ ಕಿಂಡಿಯಿಂದ ಮನೆ ಮಾಲಿಕರು ಇಣುಕಿ ನೋಡಿದಾಗ ಮಹಿಳೆಯ ಶವ ಕಾಣಿಸಿದೆ. ಕೂಡಲೇ ಮನೆ ಮಾಲೀಕರು ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios