ಬೆಂಗಳೂರು: ಅನೈತಿಕ ಸಂಬಂಧ ಮುಂದುವರಿಕೆಗೆ ಕಾಟ ಕೊಟ್ಟಿದ್ದಕ್ಕೆ ಕಾರ್ಮಿಕನ ಕೊಲೆ
ಅ.15ರಂದು ರಾತ್ರಿ ಸೋಮೇಶ್ವರನಗರದಲ್ಲಿ ಸಜ್ಜನ್ ಸಿಂಗ್ ಮತ್ತು ರಾಜೇಶ್ ದಂಪತಿ ನಡುವೆ ಜಗಳ ಏರ್ಪಟ್ಟಿತ್ತು. ಜಗಳ ವಿಕೋಪಕ್ಕೆ ತಿರುಗಿದಾಗ ಕೋಪೋದ್ರಿಕ್ತನಾದ ರಾಜೇಶ್ ಚಾಕುವನಿಂದ ಸಜ್ಜನ್ ಸಿಂಗ್‌ನ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ. ಬಳಿಕ ದಂಪತಿಯ ಮೃತದೇಹವನ್ನು ಗಲ್ಲಿಯೊಂದರಲ್ಲಿ ಎಸೆದು ಪರಾರಿಯಾಗಿದ್ದರು.

ಬೆಂಗಳೂರು(ಅ.18): ಅನೈತಿಕ ಸಂಬಂಧ ಮುಂದುವರೆಸುವಂತೆ ಹಿಂದೆ ಬಿದ್ದು ಪೀಡಿಸುತ್ತಿದ್ದ ಕಾರ್ಮಿಕನ ಕತ್ತು ಕೊಯ್ದು ಕೊಲೆ ಮಾಡಿದ್ದ ಪ್ರಕರಣ ಸಂಬಂಧ ದಂಪತಿಯನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ರಾಜೇಶ್‌ಕುಮಾರ್(34) ಮತ್ತು ಆತನ ಪತ್ನಿ ನೇಹಾ ಕುಮಾರಿ(21) ಬಂಧಿತರು. ಆರೋಪಿಗಳು ಅ.15ರ ರಾತ್ರಿ ಬಿಹಾರ ಮೂಲದ ಸಜ್ಜನ್ ಸಿಂಗ್(33) ಎಂಬಾತನ ಕತ್ತುಕೊಯ್ದು ಕೊಲೆಗೈದು ಸೋಮೇಶ್ವರನಗರ ಗಲ್ಲಿಯೊಂದರಲ್ಲಿ ಮೃತದೇಹ ಎಸೆದಿದ್ದರು. ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರ ಮೂಲದ ಶಕೀಲ್ ಅಕ್ತರ್ ಬರ್ಬರ ಕೊಲೆ; ಎರಡನೇ ಮದುವೆ ಹತ್ಯೆಗೆ ಕಾರಣವಾಯ್ತಾ?
ಪ್ರಕರಣದ ಹಿನ್ನೆಲೆ:
ಕೊಲೆಯಾದ ಸಜ್ಜನ್ ಸಿಂಗ್ ಮತ್ತು ಆರೋಪಿ ದಂಪತಿ ಮೂವರು ಬಿಹಾರ ಮೂಲದವರು. ಕೆಲ ವರ್ಷಗಳ ಹಿಂದೆ ಉದ್ಯೋಗ ಅರಿಸಿ ಬೆಂಗಳೂರಿಗೆ ಬಂದು ಆರ್‌ಎಂಸಿ ಯಾರ್ಡ್‌ನಲ್ಲಿ ಕೂಲಿ ಮಾಡುತ್ತಿದ್ದರು. ಆರೋಪಿ ನೇಹಾ ಕುಮಾರಿ ಮತ್ತು ಮೃತ ಸಜ್ಜನ್ ಸಿಂಗ್ ಪರಿಚಿತರಾಗಿ ಆತ್ಮೀಯತೆ ಬೆಳೆದು ಅನೈತಿಕ ಸಂಬಂಧ ಏರ್ಪಟ್ಟಿತ್ತು. ಈ ವಿಚಾರ ರಾಜೇಶ್‌ಗೆ ಗೊತ್ತಾಗಿ ಇಬ್ಬರಿಗೂ ಎಚ್ಚರಿಕೆ ನೀಡಿದ್ದ. ಪತಿಯ ಬುದ್ಧಿವಾದದಿಂದ ಎಚ್ಚೆತ್ತುಕೊಂಡ ನೇಹಾ ಕೆಲ ದಿನಗಳಿಂದ ಸಜ್ಜನ್ ಸಿಂಗ್‌ನಿಂದ ಅಂತರ ಕಾಯ್ದುಕೊಂಡಿದ್ದಳು.
ಹರಪನಹಳ್ಳಿ: ಮಾತು ಕೇಳದ ಮಗಳ ಕೊಂದು ನೇಣಿಗೆ ಶರಣಾದ ತಾಯಿ
ಕೊಲೆಗೆ ಸಂಚು:
ಆದರೂ ಸಜ್ಜನ್ ಸಿಂಗ್ ತನ್ನೊಂದಿಗಿನ ಅನೈತಿಕ ಸಂಬಂಧ ಮುಂದುವರೆಸುವಂತೆ ನೇಹಾಳ ಹಿಂದೆ ಬಿದ್ದು ಕಾಡಲು ಆರಂಭಿಸಿದ್ದ. ಈತನ ಕಾಟದಿಂದ ಬೇಸತ್ತಿದ್ದ ನೇಹಾ, ಈ ವಿಚಾರವನ್ನು ಪತಿ ರಾಜೇಶ್‌ಗೆ ತಿಳಿಸಿದ್ದಳು. ಇದರಿಂದ ರೊಚ್ಚಿಗೆದ್ದ ರಾಜೇಶ್, ಸಜ್ಜನ್ ಸಿಂಗ್‌ನ ಕೊಲೆಗೆ ಸಂಚು ರೂಪಿಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಕತ್ತು ಕೊಯ್ದು ಕೊಲೆ:
ಅ.15ರಂದು ರಾತ್ರಿ ಸೋಮೇಶ್ವರನಗರದಲ್ಲಿ ಸಜ್ಜನ್ ಸಿಂಗ್ ಮತ್ತು ರಾಜೇಶ್ ದಂಪತಿ ನಡುವೆ ಜಗಳ ಏರ್ಪಟ್ಟಿತ್ತು. ಜಗಳ ವಿಕೋಪಕ್ಕೆ ತಿರುಗಿದಾಗ ಕೋಪೋದ್ರಿಕ್ತನಾದ ರಾಜೇಶ್ ಚಾಕುವನಿಂದ ಸಜ್ಜನ್ ಸಿಂಗ್‌ನ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ. ಬಳಿಕ ದಂಪತಿಯ ಮೃತದೇಹವನ್ನು ಗಲ್ಲಿಯೊಂದರಲ್ಲಿ ಎಸೆದು ಪರಾರಿಯಾಗಿದ್ದರು. ಅ.16ರ ಬೆಳಗ್ಗೆ ಸಾರ್ವಜನಿಕರು ಮೃತದೇಹ ಕಂಡು ನೀಡಿದ ಮಾಹಿತಿ ಮೇರೆಗೆ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.