Asianet Suvarna News Asianet Suvarna News

ಹರಪನಹಳ್ಳ‍ಿ: ಮಾತು ಕೇಳದ ಮಗಳ ಕೊಂದು ನೇಣಿಗೆ ಶರಣಾದ ತಾಯಿ

ಘಟನೆಯಲ್ಲಿ ಪುತ್ರಿ ಸ್ಥಳದಲ್ಲೇ ಮೃತಪಟ್ಟರೆ, ಪುತ್ರ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ಇಬ್ಬರೂ ಮಕ್ಕಳು ಮೃತಪಟ್ಟರೆಂದು ಭಾವಿಸಿ ನೊಂದುಕೊಂಡ ಬೇಗಂಬೀ ನಂತರ ತಾನು ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Mother Committed Suicide After Her Daughter Killed at Harapanahalli in Vijayanagara grg
Author
First Published Oct 15, 2023, 1:41 PM IST

ಹರಪನಹಳ್ಳ‍ಿ(ಅ.15):  ಕ್ಲುಲ್ಲಕ ವಿಚಾರಕ್ಕೆ ಗಲಾಟೆ ನಡೆದು ತಾಯಿ ತನ್ನಿಬ್ಬರು ಮಕ್ಕಳಿಗೆ ಕಟ್ಟಿಗೆಯಿಂದ ಬಲವಾಗಿ ಹೊಡೆದಿದ್ದು, ಇದರಿಂದ ಮಗಳು ಮೃತಪಟ್ಟರೆ, ಮಗ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಘಟನೆ ಹರಪನಹಳ್ಳಿ ತಾಲೂಕಿನ ಹುಲ್ಲಿಕಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ. ನಂತರ ತಾಯಿ ನೇಣಿಗೆ ಶರಣಾಗಿದ್ದಾಳೆ.

ಶಮನಾಬಾನು (18) ತಾಯಿ ಹಲ್ಲೆಯಿಂದ ಮೃತಪಟ್ಟಾಕೆ. ಬೇಗಂಬೀ (50) ನೇಣಿಗೆ ಶರಣಾದಾಕೆ. ಮಕ್ಕಳು ಮಾತು ಕೇಳುತ್ತಿಲ್ಲ ಎನ್ನುವ ವಿಚಾರದಲ್ಲಿ ಶುಕ್ರವಾರ ರಾತ್ರಿ ಮಗಳು ಶಮನಾಬಾನು, ಪುತ್ರ ಅಮಾನುಲ್ಲಾ ಹಾಗೂ ತಾಯಿ ಮಧ್ಯೆ ಜಗಳ ಆರಂಭವಾಗಿದೆ. ಇದು ತಾರಕಕ್ಕೇರಿ ಬೆಳಗಿನ ಜಾವ ಇಬ್ಬರೂ ಮಕ್ಕಳ ತಲೆಗೆ ತಾಯಿ ಕಟ್ಟಿಗೆಯಿಂದ ಹೊಡೆದಿದ್ದಾಳೆ. 

ಕೊಪ್ಪಳ: ಹಣಕ್ಕಾಗಿ ವಿಪರೀತ ಕಿರುಕುಳ, ಗುತ್ತಿಗೆದಾರ ಆತ್ಮಹತ್ಯೆ

ಘಟನೆಯಲ್ಲಿ ಪುತ್ರಿ ಸ್ಥಳದಲ್ಲೇ ಮೃತಪಟ್ಟರೆ, ಪುತ್ರ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ಇಬ್ಬರೂ ಮಕ್ಕಳು ಮೃತಪಟ್ಟರೆಂದು ಭಾವಿಸಿ ನೊಂದುಕೊಂಡ ಬೇಗಂಬೀ ನಂತರ ತಾನು ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Follow Us:
Download App:
  • android
  • ios