ಬಿಹಾರ ಮೂಲದ ಶಕೀಲ್ ಅಕ್ತರ್ ಬರ್ಬರ ಕೊಲೆ; ಎರಡನೇ ಮದುವೆ ಹತ್ಯೆಗೆ ಕಾರಣವಾಯ್ತಾ?
ಮಾರಕಾಸ್ತ್ರಗಳಿಂದ ಬಿಹಾರ ಮೂಲದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಸಂಪಿಗೆಹಳ್ಳಿಯ ಕೋಗಿಲು ಲೇಔಟ್‌ನಲ್ಲಿ ನಡೆದಿದೆ.

ಬೆಂಗಳೂರು (ಅ.15): ಮಾರಕಾಸ್ತ್ರಗಳಿಂದ ಬಿಹಾರ ಮೂಲದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಸಂಪಿಗೆಹಳ್ಳಿಯ ಕೋಗಿಲು ಲೇಔಟ್‌ನಲ್ಲಿ ನಡೆದಿದೆ.
ಶಕೀಲ್ ಅಕ್ತರ್ (28) ಕೊಲೆಯಾದ ವ್ಯಕ್ತಿ. ಹತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಶಕೀಲ್. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದರಲ್ಲಿ ಕಾರ್ಪೋರೆಂಟರ್ ಕೆಲಸ ಮಾಡ್ತಿದ್ದ. ಇಬ್ಬರನ್ನು ವಿವಾಹ ಮಾಡಿಕೊಂಡಿದ್ದ ಶಕೀಲ್. ಓರ್ವ ಮಹಿಳೆ ಬಿಹಾರದಲ್ಲಿದ್ದರೆ, ಬೆಂಗಳೂರಿನಲ್ಲಿ ಓರ್ವಳನ್ನು ಮದುವೆಯಾಗಿದ್ದ. ಎರಡನೇ ಪತ್ನಿ ಹಾಗೂ ಮಗು ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದ.
ಮಗಳನ್ನೇ ಕೊಲೆ ಮಾಡಲು ಅಪ್ಪ ನಿರ್ಧರಿಸಿದ್ದೇಕೆ..? ಮರ್ಯಾದಾ ಹತ್ಯೆಯಿಂದಿತ್ತು ಕರುಣಾಜನಕ ಕಥೆ..!
ಆರೋಪಿಗಳನ್ನು ಶಕೀಲ್ ಅಕ್ತರ್‌ನ ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ಚೀಲದಲ್ಲಿ ಕಟ್ಟಿ ಮನೆಮುಂದಿನ ಖಾಲಿ ಸೈಟ್‌ವೊಂದರಲ್ಲಿ ಪಿಟ್ ಗುಂಡಿಯಲ್ಲಿ ಬಿಸಾಕಿ ಪರಾರಿಯಾಗಿರುವ ಆರೋಪಿಗಳು. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸದ್ಯ ಹತ್ಯೆ ಘಟನೆ ಸಂಬಂಧ ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಮುಂದಾದ ಪೊಲೀಸರು.
ಲಗ್ಗೆರೆಯಲ್ಲಿ ಅಪರಿಚಿತ ಶವ ಪತ್ತೆ:
ಬೆಂಗಳೂರಿನ ಲಗ್ಗೆರೆ 16ನೇ ಕ್ರಾಸ್ ನಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಎಂ ಸ್ಯಾಂಡ್ ಒಳಗೆ ಹೂತಿಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಮೃತದೇಹ. ಮೃತ ವ್ಯಕ್ತಿ ಸುಮಾರು 35-40 ವಯಸ್ಸು. ಇಂದು ವಾಸನೆಯಿಂದ ಬೀದಿನಾಯಿಗಳು ಕಲ್ಲು ಪೂಡಿ ರಾಶಿ ಕೆದರುತ್ತಿದ್ದ ನಾಯಿಗಳು. ನಾಯಿಗಳು ಮಣ್ಣು ಕೆದರುತ್ತಿದ್ದಂತೆ ಹೊರಗೆ ಕಾಣಿಸಿದ ಶವ. ಈ ಘಟನೆ ಕಂಡು ಸುತ್ತಮುತ್ತಲಿನ ಸ್ಥಳೀಯರಿಗೆ ಆತಂಕ. ಶವ ನೋಡಲು ಜಮಾಯಿಸಿದ ಜನರು. ಬಳಿಕ ಪೊಲೀಸರಿಗೆ ಮಾಹಿತಿ. ಸ್ಥಳಕ್ಕೆ ಭೇಟಿ ನೀಡಿದ ರಾಜಗೋಪಾಲನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.
ಪ್ರಯಾಣಿಕ ಕೋಳಿಮಾಂಸ ತಂದಿದ್ದಕ್ಕೆ ಬಸ್ ಸೀದಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದ ಚಾಲಕ!
ಮನೆ ಕಟ್ಟಿಸಲು ಎಂ ಸ್ಯಾಂಡ್ ತರಿಸಲಾಗಿತ್ತು. ಕಳೆದ ಮೂರು ದಿನಗಳ ಹಿಂದೆ ಬಂದಿದ್ದ ಎಂ ಸ್ಯಾಂಡ್ ಲೋಡ್. ಎಂ ಸ್ಯಾಂಡ್ ಮಧ್ಯಭಾಗದಲ್ಲಿ ಪತ್ತೆಯಾಗಿರುವ ಮೃತದೇಹ. ಹೀಗಾಗಿ ದುಷ್ಕರ್ಮಿಗಳು ಕೊಲೆ ಮಾಡಿ ಎಂ ಸ್ಯಾಂಡ್ ಲೋಡ್‌ನಲ್ಲಿ ಹೂತಾಕಿರುವ ಶಂಕೆ. ಮನೆ ಕಟ್ಟಿಸುತ್ತಿರೋ ಮಾಲೀಕನಿಗೆ ಕರೆ ಮಾಡಿದ ಪೊಲೀಸರು. ಸದ್ಯ ತಮಿಳುನಾಡಿನ ಊರಿಗೆ ಹೋಗಿರೋ ಮನೆ ಮಾಲೀಕ. ಘಟನಾ ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಭೇಟಿ. ವಿಧಿವಿಜ್ಞಾನ ಅಧಿಕಾರಿಗಳಿಂದ ಎಂ ಸ್ಯಾಂಡ್ ಹಾಗೂ ಮೃತದೇಹ ಪರಿಶೀಲನೆ.