*   ಕಲಬುರಗಿ ಜಿಲ್ಲೆಯ ಶಹಬಾದ ತಾಲೂಕಿನ ಮರತೂರ ಗ್ರಾಮದಲ್ಲಿ ನಡೆದ ಘಟನೆ*   ಪೊಲೀಸ್‌ ಠಾಣೆ ಮುಂದೆ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ* ಪತ್ನಿ ಸೀತಾ ಹಾಗೂ ಮಕ್ಕಳಿಗೆ ಕ್ಷಮೆ ಕೇಳಿದ ಮನೋಜ್‌

ಕಲಬುರಗಿ(ಮೇ.28): ತನ್ನ ಹಾಗೂ ತನ್ನ ಪತ್ನಿ ವಿನಾಕಾರಣ ವಿರುದ್ಧ ಪೊಲೀಸ್‌ ಠಾಣೆಗೆ ದೂರು ನೀಡಿ ಕುಟುಂಬದ ಮರಾರ‍ಯದೆ ಹರಾಜು ಮಾಡಿದ್ದಾರೆಂದು ಡೆತ್‌ನೋಟ್‌ ಬರೆದಿಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಹಬಾದ ತಾಲೂಕಿನ ಮರತೂರ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ ಅಲಿಯಾಸ್‌ ಮನೋಜ್‌ ಸಿಂದೆ (32) ಎಂಬಾತನೇ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಸಾಯಬಣ್ಣಾ ಜೋಗುರ, ಶರಣಮ್ಮ ನಾಟೀಕರ್‌, ಪ್ರತಿಭಾ ನಾಗೇಶ ಹಾಗೂ ಪ್ರತಿಭಾಳ ತಾಯಿಯ ಹೆಸರನ್ನ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿ ಇವರೆಲ್ಲರೂ ತನ್ನ ಸಾವಿಗೆ ಕಾರಣ ಎಂದು ದೂರಿ ಸಾವನ್ನಪ್ಪಿದ್ದಾನೆ.

ಮನೋಜ್‌ ಪತ್ನಿಯ ಅಣ್ಣ ಮತ್ತು ಆತನ ಹೆಂಡತಿ ನಡುವೆ ಕೌಟುಂಬಿಕ ಕಲಹ ನಡೆದಿತ್ತು, ಈ ನಡುವೆ ಅಣ್ಣನ ಮಗು ಕಾಣೆಯಾಗಿದೆ. ಮಗು ಕಾಣೆಯಾಗಲು ನೀವೇ ಕಾರಣ ಎಂದು ಆರೋಪಿಸಿ ಮನೋಜ್‌ ಹಾಗೂ ಆತನ ಪತ್ನಿ ಹೆಸರಿನಲ್ಲಿ ಮನೋಜ್‌ ಅಣ್ಣನ ಮನೆಯವರು ಶಹಾಬಾದ್‌ ಠಾಣೆಗೆ ದೂರು ನೀಡಿದ್ದಾರೆ.

ಗೆಳತಿ ಸಾವಿನಿಂದ ಖಿನ್ನತೆಗೆ ಜಾರಿದ ಮಾಡೆಲ್ ಆತ್ಮಹತ್ಯೆ : ಅಪಾರ್ಟ್‌ಮೆಂಟ್‌ನಲ್ಲಿ ಶವ ಪತ್ತೆ

ಪೊಲೀಸ್‌ ದೌರ್ಜನ್ಯ ಆರೋಪ:

ದೂರಿನ ಹಿನ್ನೆಲೆ ಮನೋಜನನ್ನ ಠಾಣೆಗೆ ಎಳೆದೊಯ್ದ ಪೊಲೀಸರು, ಎರಡು ದಿನ ಅಲ್ಲೇ ಕೂಡಿ ಹಾಕಿ, ಮನಸೋ ಇಚ್ಛೆ ಥಳಿಸಿದ್ದಾರೆ. ಪೊಲೀಸರ ದೌರ್ಜನ್ಯ, ಹೊಡೆತದಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದ ಮನೋಜ್‌, ಕುಟುಂಬದ ಮರಾರ‍ಯದೆ ಬೀದಿಪಾಲಾಯ್ತು ಎಂದು ಮಾನಸಿಕವಾಗಿ ನೊಂದು, ಪೊಲೀಸರ ಮುಂದಿನ ಕ್ರಮಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹೀಗಾಗಿ, ಮನೋಜ್‌ ಶವವನ್ನ ಶಹಬಾದ್‌ ಪೊಲೀಸ್‌ ಠಾಣೆ ಎದುರಿಟ್ಟು ಕುಟುಂಬಸ್ಥರು, ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ತಾನು ಜೀವನದಲ್ಲಿ ಯಾವುದೇ ತಪ್ಪು ಮಾಡಿಲ್ಲ, ಯಾರಿಗೂ ಮೋಸ ಮಾಡಿಲ್ಲ, ಹೀಗೆ ಅಕಾಲಿಕ ಸಾವನ್ನಪ್ಪುತ್ತಿರೋದೇ ತಾನು ಮಾಡಿದ ಬಹುದೊಡ್ಡ ತಪ್ಪು ಎಂದು ಚೀಟಿಯಲ್ಲಿ ಬರೆದಿಟ್ಟಿರುವ ಮನೋಜ್‌ ತನ್ನ ಪತ್ನಿ ಸೀತಾ ಹಾಗೂ ಮಕ್ಕಳಿಗೆ ಕ್ಷಮೆ ಕೇಳಿದ್ದಾನೆ. ತನ್ನ ಮೇಲಿನ ಎಫ್‌ಐಆರ್‌ಗೂ ಮನೋಜ್‌ ಹೆರಿದ್ದನೆಂಬುದು ಆತನ ಡೆತ್‌ನೋಟ್‌ನಲ್ಲಿ ಗಮನಿಸಿದಾಗ ಗೊತ್ತಾಗುತ್ತದೆ. ತಾನು ಹಾಗೂ ತನ್ನ ಪತ್ನಿಗೆ ಜೈಲಿಗೆ ತಳ್ಳುವವರಿದ್ದಾರೆಂದು ಬೆದರಿದಂತಿದ್ದ ಮನೋಜ್‌ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಬಂಧುಗಳು ಆತನ ಸಾವಿಗೆ ಗೋಳಾಡುತ್ತಿದ್ದಾರೆ.