ತಿರುನೆಲ್ವೇಲಿ: ಆಟವಾಡುತ್ತಿದ್ದ ವೇಳೆ ಕಾರಿನೊಳಗೆ ಸಿಲುಕಿ ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆದಿದೆ. ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು, ಇಬ್ಬರು ಬಾಲಕರು ಮತ್ತು ಒಂದು ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ತಿರುನೆಲ್ವೇಲಿ: ಆಟವಾಡುತ್ತಿದ್ದ ವೇಳೆ ಕಾರಿನೊಳಗೆ ಸಿಲುಕಿ ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆದಿದೆ. ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು, ಇಬ್ಬರು ಬಾಲಕರು ಮತ್ತು ಒಂದು ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ತಿರುನಲ್ವೇಲಿ ಜಿಲ್ಲೆಯ ಪನಗುಡಿ (Panagudi) ಬಳಿಯ ಲೆಬ್ಬೈ ಕುಡಿಯಿರಿಪ್ಪು (Lebbai Kudiyiruppu) ಎಂಬಲ್ಲಿ ಈ ಘಟನೆ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ಲೆಬ್ಬಾಯಿ ಕುಡಿಯಿರಿಪ್ಪುವಿನ ಕೀಲತೇರುವಿನ (Keelatheru) ದಿನಗೂಲಿ ಕಾರ್ಮಿಕ (daily-wage labourer) ನಾಗರಾಜ್ ( Nagaraj) ಅವರ ಮಕ್ಕಳಾದ 7 ವರ್ಷ ಪ್ರಾಯದ ನಿತೀಶ (Nithisha) ಮತ್ತು 5 ವರ್ಷ ಪ್ರಾಯದ ನಿತೀಶ್ (Nithish) ಮತ್ತು ಮತ್ತೊಬ್ಬ ಕೂಲಿ ಕಾರ್ಮಿಕ ಸುಧನ್ (Sudhan) ಅವರ ಮಗ 4 ವರ್ಷ ಪ್ರಾಯದ ಕಬಿಶಾಂತ್ (Kabishanth) ಮೃತಪಟ್ಟವರಾಗಿದ್ದು, ಇವರೆಲ್ಲರೂ ಅಕ್ಕಪಕ್ಕದ ಮನೆಯವರಾಗಿದ್ದಾರೆ.
Belagavi| ಆಟವಾಡಲು ಹೋಗಿ ಕಾಲುವೆಗೆ ಬಿದ್ದು ಇಬ್ಬರು ಮಕ್ಕಳ ದುರ್ಮರಣ
ನಾಗರಾಜ್ ಅವರ ಸಹೋದರ ಮಣಿಕಂದನ್ (Manikandan) ಕೆಲ ದಿನಗಳ ಹಿಂದೆ ಮನೆ ಬಳಿ ಹೋಂಡಾ ಕಾರನ್ನು ನಿಲ್ಲಿಸಿದ್ದರು. ಕೆಲವು ತಾಂತ್ರಿಕ ದೋಷದ ಕಾರಣ ಕಾರಿನ ಹಿಂಬದಿಯ ಬಾಗಿಲನ್ನು ಒಳಗಿನಿಂದ ತೆಗೆಯಲಾಗುತ್ತಿರಲಿಲ್ಲ. ಕೇಲವ ಹೊರಗಿನಿಂದ ಮಾತ್ರ ತೆರೆಯಬಹುದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪರಿಣಾಮ ಕಾರು ಹತ್ತಿ ಒಳಗೆ ಆಟವಾಡುತ್ತಿದ್ದ ಮೂವರು ಮಕ್ಕಳು ಬಾಗಿಲು ತೆರೆದು ಹೊರಗೆ ಬರಲಾಗದೆ ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ. ಶನಿವಾರ ಮಧ್ಯಾಹ್ನ ಊಟವಾದ ನಂತರ ಆಟವಾಡಲು ಹೋದಾಗ ಈ ಅನಾಹುತ ಸಂಭವಿಸಿದೆ.
ಮಧ್ಯಾಹ್ನ ಹೊರಗೆ ಹೋದ ಮಕ್ಕಳು ಸಂಜೆಯಾದರೂ ಎಲ್ಲಿಯೂ ಕಾಣಿಸದೇ ಇರುವುದನ್ನು ಗಮನಿಸಿದ ಪೋಷಕರು ನಂತರ ಹುಟುಕಾಟ ಆರಂಭಿಸಿದ್ದಾರೆ. ಈ ವೇಳೆ ದಾರಿಹೋಕರೊಬ್ಬರು ಮಕ್ಕಳು ಕಾರಿನ ಬಳಿ ಆಟವಾಡುತ್ತಿದ್ದುದನ್ನು ನೋಡಿದ್ದಾಗಿ ಹೇಳಿದ್ದಾರೆ. ನಂತರ ಕಾರಿನ ಬಳಿ ಹೋದಾಗ ಮಕ್ಕಳೆಲ್ಲರೂ ಕಾರಿನೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಬಳಿಕ ಸ್ಥಳೀಯರ ಸಹಾಯದಿಂದ ಬಾಗಿಲನ್ನು ಒಡೆದು ಮಕ್ಕಳನ್ನು ಪಾನಗುಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯದ್ದಿದ್ದಾರೆ. ಈ ವೇಳೆ ಅಲ್ಲಿ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ಘೋಷಣೆ ಮಾಡಿದ್ದಾರೆ.
ದೆಹಲಿಯಲ್ಲಿ ಕಫದ ಸಿರಪ್ ಕುಡಿದು ಮೂವರು ಮಕ್ಕಳ ದಾರುಣ ಸಾವು
ಮೂರು ದಿನಗಳಿಂದ ಕಾರನ್ನು ಅಲ್ಲಿಯೇ ನಿಲ್ಲಿಸಲಾಗಿದ್ದು, ಕಾರಿನೊಳಗೆ ಆಮ್ಲಜನಕದ ಕೊರತೆಯಿಂದಾಗಿ ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪಿ ಸರವಣನ್ (Saravanan) ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಎಸ್ಪಿ ಹೇಳಿದರು. ಸ್ಪೀಕರ್ ಎಂ.ಅಪ್ಪಾವು ಆಸ್ಪತ್ರೆಗೆ ಭೇಟಿ ನೀಡಿ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಆದರೆ ಆಟವಾಡುತ್ತಿದ್ದ ಮಕ್ಕಳು ಅಚಾನಕ್ ಆಗಿ ಸಾವಿನ ಮನೆ ಸೇರಿದ್ದು ಪೋಷಕರನ್ನು ದಂಗು ಬಡಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.