*  ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ನಡೆದ ಘಟನೆ*  ಆಟವಾಡುತ್ತಾ ಹೋಗಿ ಕಾಲುವೆಯಲ್ಲಿ ಬಿದ್ದ ನಾಲ್ಕು ಮಕ್ಕಳು*  ಈ ಸಂಬಂಧ ಐಗಳಿ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲು  

ಅಥಣಿ(ಅ.10): ಕಾಲುವೆ ಹತ್ತಿರ ಆಟವಾಡಲು ಹೋಗಿ ಕಾಲು ಜಾರಿ ಕರಿಮಸೂತಿ ಕಾಲುವೆಗೆ ಬಿದ್ದು ಇಬ್ಬರು ಮಕ್ಕಳು(Children) ಸಾವನ್ನಪ್ಪಿದ ಘಟನೆ ಬೆಳಗಾವಿ(Belagavi) ಜಿಲ್ಲೆಯ ಅಥಣಿ(Athani) ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ವಿಜಯ ವಿನಾಯಕ ಪುಂಡಿಪಲ್ಲೆ(7) ಮತ್ತು ಸ್ವಪ್ನ ವಿನಾಯಕ ಪುಂಡಿಪಲ್ಲೆ (11) ಸಾವನಪ್ಪಿದ(Death) ಮಕ್ಕಳು. ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಹತ್ತಿರ ಹಾಯ್ದು ಹೋಗಿರುವ ಕರಿಮಸೂತಿ ಕಾಲುವೆ ನೀರು ತುಂಬಿ ಹರಿಯುತ್ತಿದ್ದು, ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಮಕ್ಕಳಾದ ಶ್ರೀಧರ ಶಂಕರ ಪುಂಡಿಪಲ್ಲೆ, ವಿಶ್ವನಾಥ ವಿನಾಯಕ ಪುಂಡಿಪಲ್ಲೆ, ವಿಜಯ ವಿನಾಯಕ ಪುಂಡಿಪಲ್ಲೆ ಹಾಗೂ ಸ್ವಪ್ನಾ ವಿನಾಯಕ ಪುಂಡಿಪಲ್ಲೆ ಎಂಬ ನಾಲ್ಕು ಜನ ಚಿಕ್ಕ ಮಕ್ಕಳು ಆಟವಾಡುತ್ತಾ ಹೋಗಿ ಕಾಲುವೆಯಲ್ಲಿ(Canal) ಬಿದ್ದಿದ್ದಾರೆ.

ಗಂಡ್ಮಕ್ಕಳನ್ನೂ ಬಿಡ್ತಿಲ್ಲ ಕಾಮುಕರು: ಯುವಕನ ಮೇಲೆ ಯುವಕನಿಂದಲೇ ಮೇಲೆ ರೇಪ್..!

ಈ ಘಟನೆಯಲ್ಲಿ 3 ವರ್ಷದ ಶ್ರೀಧರ ಶಂಕರ ಪುಂಡಿಪಲ್ಲೆ, 8 ವರ್ಷದ ವಿಶ್ವನಾಥ ವಿನಾಯಕ ಪುಂಡಿಪಲ್ಲೆ ಎಂಬ ಇಬ್ಬರು ಮಕ್ಕಳು ಕಾಲುವೆಯಲ್ಲಿ ಬೆಳೆದಿರುವ ಕಂಟಿಗಳನ್ನು ಹಿಡಿದುಕೊಂಡು ಆಕ್ರಂದನ ಮಾಡುತ್ತಿದ್ದ ಶಬ್ಧ ಕೇಳಿದ ಸಾರ್ವಜನಿಕರು ತಕ್ಷಣ ನೆರವಿಗೆ ಬಂದು ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ. ಅವರು ಆರೋಗ್ಯವಾಗಿದ್ದಾರೆ. ಆದರೆ, ಇನ್ನಿಬ್ಬರು ಮಕ್ಕಳು ನೀರಲ್ಲಿ ಮುಳುಗಿ ಸಾವನಪ್ಪಿದ್ದಾರೆ.

ಪೊಲೀಸರು(Police) ಮತ್ತು ಅಗ್ನಿ ಶಾಮಕ ದಳದವರು(Fire Department) ಸ್ಥಳಕ್ಕೆ ದಾವಿಸಿ ಮೃತ ಮಕ್ಕಳ ಶರೀರವನ್ನು(Deadbody) ಹೊರಗೆ ತೆಗೆದಿದ್ದಾರೆ. ಈ ಕುರಿತು ಐಗಳಿ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳು ಸಾವನ್ನಪಿದ ಘಟನೆಯನ್ನು ನೋಡಿ ಗ್ರಾಮಸ್ಥರ ಹಾಗೂ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.