ಚಿಕ್ಕಬಳ್ಳಾಪುರ: ಹೊಸ ವರ್ಷದ ಪಾರ್ಟಿ, ಕಂಠ ಪೂರ್ತಿ ಮದ್ಯ ಕುಡಿಸಿ ಗೆಳೆಯನನ್ನೇ ಕೊಂದ ಸ್ನೇಹಿತರು..!

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮದನಪಲ್ಲಿ ರಸ್ತೆಯ ಐಮರೆಡ್ಡಿಹಳ್ಳಿಯ ಬಾಲಾಜಿ ಡಾಬಾ ಬಳಿ ನಡೆದ ಘಟನೆ 

28 Year Old Young Man Killed in Chikkaballapur grg

ಚಿಕ್ಕಬಳ್ಳಾಪುರ(ಜ.01):  ಹೊಸ ವರ್ಷದ ಸೋಗಿನಲ್ಲಿ ಸ್ನೇಹಿತರಿಂದಲೇ ಸ್ನೇಹಿತನನ್ನ ಹತ್ಯೆಗೈದ ಘಟನೆ  ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮದನಪಲ್ಲಿ ರಸ್ತೆಯ ಐಮರೆಡ್ಡಿಹಳ್ಳಿಯ ಬಾಲಾಜಿ ಡಾಬಾ ಬಳಿ ನಡೆದಿದೆ. ನವೀನ್ ರೆಡ್ಡಿ(28) ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾನೆ. 

ಮೃತ ನವೀನ್ ರೆಡ್ಡಿ ಚಿಂತಾಮಣಿ ತಾಲೂಕಿನ ದೊಡ್ಡಗಂಜೂರು ಗ್ರಾಮದ ನಿವಾಸಿಯಾಗಿದ್ದಾನೆ ಅಂತ ತಿಳಿದು ಬಂದಿದೆ. ನವೀನ್‌ಗೆ ಕಂಠ ಪೂರ್ತಿ ಮದ್ಯ ಕುಡಿಸಿ ಅಮಲಿನಲ್ಲಿ ಕೊಲೆ ಮಾಡಲಾಗಿದೆ. 

ಬೆಂಗಳೂರು: ರೈಸ್‌ ಪುಲ್ಲಿಂಗ್‌ ಯಂತ್ರದ ಹೆಸರಲ್ಲಿ ವಂಚನೆ, ಮಂದಿ ಬಂಧನ

ಕೊಲೆ ಮಾಡಿದವರೂ ಕೂಡ ಅದೇ ಗ್ರಾಮದವ ಸಿದ್ದು, ಕಿರಣ್, ಬೈರಾರೆಡ್ಡಿ ಅಂತ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಚಿಂತಾಮಣಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಯತ್ಯ ಎಸೆಗಿದ ಬಳಿಕ ಹಂತಕರು ಪೊಲೀಸರಿಗೆ ಶರಣಾಗಿದ್ದಾರೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Latest Videos
Follow Us:
Download App:
  • android
  • ios