Asianet Suvarna News Asianet Suvarna News

ಪತ್ನಿಯೊಂದಿಗೆ ವಿಡಿಯೋ ಕಾಲ್​ನಲ್ಲಿ ಮಾತನಾಡುವಾಗಲೇ ಜೈಲು ವಾರ್ಡರ್ ನೇಣಿಗೆ ಶರಣು

* ಪತ್ನಿಗೆ ವಿಡಿಯೋ ಕಾಲ್ ಮಾಡುವಾಗಲೇ ನೇಣು ಹಾಕಿಕೊಂಡು ಆತ್ಮಹತ್ಯೆ
* ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಾರ್ಡರ್ ಆಗಿದ್ದ
* ಮಗುವಿನ ಮುಖ ನೋಡುತ್ತಿರುವಾಗಲೇ ಅವರು ನೇಣಿಗೆ ಶರಣು

24 old shivamogga jail warder Commits Suicide rbj
Author
Bengaluru, First Published Nov 6, 2021, 1:29 AM IST

ಶಿವಮೊಗ್ಗ, (ನ.06): ಶಿವಮೊಗ್ಗದ (Shovamgga) ಜೈಲಿನಲ್ಲಿ ವಾರ್ಡರ್ ಆಗಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವಕರೊಬ್ಬರು ತನ್ನ ಪತ್ನಿಗೆ ವಾಟ್ಸಾಪ್ ವಿಡಿಯೋ ಕಾಲ್(Whatsapp Video Call) ಮಾಡುವಾಗಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ.

ಬೆಳಗಾವಿಯ ಯರ್ನಾಡ ಗ್ರಾಮದ ಅಶ್ಫಾಕ್ ತಗಡಿ ಎಂಬ ವ್ಯಕ್ತಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಾರ್ಡರ್ ಆಗಿದ್ದರು. ಅವರು ತಮ್ಮ ಹೆಂಡತಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಾಗಲೇ ರೂಮಿನ ಫ್ಯಾನ್​ಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.

Suvarna FIR; ರಾಧಾ-ಕೃಷ್ಣರ ಲವ್ ಸ್ಟೋರಿ... ಮಗಳನ್ನೇ ಹತ್ಯೆ ಮಾಡಿದ ಶಿಕಾರಿಪುರದ ತಂದೆ

ತಕ್ಷಣ ಅಶ್ಫಾಕ್ ಅವರ ಹೆಂಡತಿಯ ಜೈಲಿನ ಇತರೆ ಅಧಿಕಾರಿಗಳಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ, ಅವರು ಅಲ್ಲಿಗೆ ತೆರಳಿ ಮನೆಯ ಬಾಗಿಲು ಒಡೆದು ಒಳಗೆ ಹೋಗುವಷ್ಟರಲ್ಲಿ ಅಶ್ಫಾಕ್ ಉಸಿರು ನಿಂತಿತ್ತು. 

ವಿಡಿಯೋ ಕಾಲ್​ನಲ್ಲಿ ಹೆಂಡತಿಯೊಂದಿಗೆ ಜಗಳವಾಡಿ, ಮಗುವಿನ ಮುಖ ನೋಡುತ್ತಿರುವಾಗಲೇ ಅವರು ನೇಣಿಗೆ ಶರಣಾಗಿದ್ದಾರೆ. ಅಶ್ಫಾಕ್ ನೇಣಿಗೆ ಶರಣಾಗುತ್ತಿರುವ ವಿಡಿಯೋ ನೋಡುತ್ತಿದ್ದಂತೆಯೇ ಹೆಂಡತಿ ಅದನ್ನು ತನ್ನ ತಂದೆಗೆ ತೋರಿಸಿದ್ದಾರೆ. ತಕ್ಷಣ ಅವರು ಶಿವಮೊಗ್ಗದಲ್ಲಿನ ಅಶ್ಫಾಕ್ ಅವರ ಸ್ನೇಹಿತನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಜೈಲು ಸಿಬ್ಬಂದಿ ಬಂದು ಮನೆ ಬಾಗಿಲು ಒಡೆದು ಒಳಗೆ ಹೋಗುವಷ್ಟರಲ್ಲಿ ಅಶ್ಫಾಕ್ ಸಾವನ್ನಪ್ಪಿದ್ದರು.

ಕಳೆದ ವರ್ಷ ಪೊಲೀಸ್ ಇಲಾಖೆಗೆ ಸೇರಿದ್ದ ಅಶ್ಫಾಕ್ ಇದೇ ಮೊದಲ ಬಾರಿಗೆ ಜೈಲಿನಲ್ಲಿ ಅವರ ಮೊದಲ ಪೋಸ್ಟಿಂಗ್ ಆಗಿತ್ತು. ಆತ್ಮಹತ್ಯೆಗೆ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ ತಿಳಿದುಬಂದಿಲ್ಲ.

 ಸಾವಿನ ಹಾದಿ ಹಿಡಿದ ಸಾರಿಗೆ ನೌಕರ
ಬಾಗಲಕೋಟೆ, (ನ.06): ನಿಗದಿತ ಸಮಯಕ್ಕೆ ಬಾರದ ವೇತನ ಹಾಗೂ ಸಾಲಬಾಧೆಯಿಂದ ಕಂಗಾಲಾಗಿ ವಿಷ ಸೇವಿಸಿದ್ದ ಕೆ.ಎಸ್.ಆರ್.ಟಿ.ಸಿ. ಬಸ್​​ ಚಾಲಕ ಇಂದು ಚಿಕಿತ್ಸೆ ಫಲಿಸದೆ ಸಾವಪ್ಪಿದ್ದಾನೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ನಿವಾಸಿ ಭರಮಪ್ಪ ಗೊಂದಿ(45) ಮೃತ ದುರ್ದೈವಿ.

ಬಾದಾಮಿ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕನಾಗಿ ಸೇವೆ ಸಲ್ಲಿಸುತ್ತಿದ್ದ ಭರಮಪ್ಪ, ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು.

ಕರೊನಾ ವೇಳೆಯಲ್ಲಿ ಸರಿಯಾಗಿ ವೇತನ ಆಗಿರಲಿಲ್ಲ. ಸದ್ಯ ಕೆ.ಎಸ್.ಆರ್.ಟಿ.ಸಿ. ವೇತನ ಪ್ರತಿ ತಿಂಗಳೂ ಎರಡು ಕಂತುಗಳಲ್ಲಿ ಅರ್ಧದಂತೆ ಬರುತ್ತಿದ್ದರೂ ವೇತನ ಕುಟುಂಬ ನಿರ್ವಹಣೆಗೂ ಸಾಲುತ್ತಿರಲಿಲ್ಲ. ಅದರ ಮೇಲೆ ಸಾಲ ತೀರಿಸುವ ಚಿಂತೆಯಿಂದ ಮನನೊಂದು ಅಕ್ಟೋಬರ್ 30ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಭರಮಪ್ಪನನ್ನು ಕೂಡಲೇ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಆಸ್ಪತ್ರೆಯಲ್ಲೇ ಸಾವಪ್ಪಿದ್ದಾರೆ. ಮೃತ ಸಾರಿಗೆ ಸಂಸ್ಥೆ ನೌಕರ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Follow Us:
Download App:
  • android
  • ios