Suvarna FIR; ರಾಧಾ-ಕೃಷ್ಣರ ಲವ್ ಸ್ಟೋರಿ... ಮಗಳನ್ನೇ ಹತ್ಯೆ ಮಾಡಿದ ಶಿಕಾರಿಪುರದ ತಂದೆ

* ಪ್ರೀತಿಸಿದವನನ್ನು ಬಿಡಲು ಒಪ್ಪದ ಮಗಳು
* ಹೆತ್ತ ತಂದೆಯಿಂದಲೇ ಮಗಳ ಹತ್ಯೆ
* ಬೈಕ್ ನಲ್ಲಿ ಕರೆದುಕೊಂಡು ಬಂದು ಮಗಳ ಕೊಂದ
* ತಂದೆ-ಮಗಳ ನಡುವೆ ವಾಗ್ವಾದ 

First Published Nov 4, 2021, 3:53 PM IST | Last Updated Nov 4, 2021, 3:53 PM IST

ಶಿಕಾರಿಪುರ(ನ.03) ಅವರಿಬ್ಬರೂ ಬಾಲ್ಯದ ಗೆಳೆಯರು.. ರಾಧಾ-ಕೃಷ್ಣರ ಲವ್ ಸ್ಟೋರಿ(Love Story). ವಯಸ್ಸಿಗೆ ಬಂದ ನಂತರ ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆದರೆ ಈ ಲವ್ ಸ್ಟೋರಿಗೆ ಸಿಕ್ಕಿದ್ದು ಟ್ರಾಜಡಿ ಎಂಡಿಂಗ್.  ಪ್ರೇಯಸಿ ದೂರದ ಊರಿನಲ್ಲಿ ಹೆಣವಾಗಿದ್ದಳು.

ಹಾಗಾದರೆ ಆಕೆಯನ್ನು ಹತ್ಯೆ ಮಾಡಿದ್ದು(Murder) ಯಾರು? ಪ್ರಿಯಕರನನ್ನು ಬಿಡಲು ಒಪ್ಪದ ಮಗಳನ್ನು ಹೆತ್ತ ತಂದೆಯೇ ಹತ್ಯೆ ಮಾಡಿದ್ದ. ಬೀರೂರಿನ ರೈಲ್ವೆ ಟ್ರ್ಯಾಕ್ ಮೇಲೆ ಮಗಳ ಶವ ಎಸೆದು ಬಂದಿದ್ದ.   ಜಾತಿ ಕಾರಣವಾ? ಅಂತಸ್ತು ಕಾರಣವಾ?