Asianet Suvarna News Asianet Suvarna News

Maharashtra : ನೆರೆಹೊರೆಯವರ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯ : ಇಬ್ಬರ ಸಾವು!

*ಇಬ್ಬರ ಸಾವಿಗೆ ಕಾರಣವಯಿತು ಕ್ಷುಲ್ಲಕ ಜಗಳ 
*ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರಿಗೆ ಗಾಯ
*ಶಾಂತಿ ಕಾಪಾಡಲು ಹೆಚ್ಚುವರಿ ಪೊಲೀಸ್ ನಿಯೋಜನೆ!

2 killed after neighbor attacks them with knife in Maharashtras Bhiwandi
Author
Bengaluru, First Published Oct 30, 2021, 11:11 AM IST
  • Facebook
  • Twitter
  • Whatsapp

ಮಹಾರಾಷ್ಟ್ರ(ಅ. 30 ): ಮಹಾರಾಷ್ಟ್ರದ ಭಿವಂಡಿಯ (Bhiwandi) ಪವರ್‌ಲೂಮ್ ಟೌನ್‌ನಲ್ಲಿ (Powerloom Town) ಶುಕ್ರವಾರ ಬೆಳಗ್ಗೆ ನೆರೆಹೊರೆಯವರು ಚಾಕುವಿನಿಂದ ಹಲ್ಲೆ ನಡೆಸಿದ್ದರಿಂದ ಇಬ್ಬರು ಸಾವನ್ನಪ್ಪಿ, ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ.

ಇವಳು ಹೆಂಡ್ತೀನಾ ರಾಕ್ಷಸಿನಾ?: ಮೂಳೆ ಮುರಿಯೋ ಹಾಗೆ ಗಂಡನಿಗೆ ಹೊಡೆದ ಪತ್ನಿ..!

ಕ್ಷುಲ್ಲಕ ಕಾರಣದಿಂದ ಆರಂಭವಾದ ಈ ಜಗಳ ಈಗ ಇಬ್ಬರ ಸಾವಿಗೆ ಕಾರಣವಾಗಿದೆ.  ಈ ಭೀಕರ ಘಟನೆಯು ಭಿವಂಡಿಯ ಗೈಬಿ ನಗರ ಪ್ರದೇಶದಲ್ಲಿ ನಡೆದಿದ್ದು, ಆರೋಪಿ  45 ವರ್ಷದ ಮೊಹಮ್ಮದ್ ಅನ್ಸಾರುಲ್ ಹಕ್ ಲುಕ್ಮಾನ್ ಅನ್ಸಾರಿ ( Mohammad Ansarul Haque Lukman Ansari) ಎಂಬಾತನನ್ನು ಬಂಧಿಸಲಾಗಿದೆ ಎಂದು ಶಾಂತಿ ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆತನ ವಿರುದ್ಧ ಐಪಿಸಿಯ (IPC) ವಿವಿಧ ಸೆಕ್ಷನ್‌ಗಳು ಮತ್ತು ಬಾಲಾಪರಾಧಿ ಕಾನೂನು (ಮಕ್ಕಳ ಆರೈಕೆ ಮತ್ತು ರಕ್ಷಣೆ) ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಹಾಸನ;  ತಂಗಿಯನ್ನು ಕೊಚ್ಚಿಹಾಕಲು ಅಣ್ಣನಿಗೆ ಅದೊಂದು ಕಾರಣ ಸಾಕಿತ್ತು!

ಮೃತರನ್ನು 42 ವರ್ಷದ ಕಮ್ರುಜ್ಮಾ ಅನ್ಸಾರಿ (Kamruzma Ansari)  ಮತ್ತು 35 ವರ್ಷದ ಇಮ್ತಿಯಾಜ್ ಮೊಹಮ್ಮದ್ ಜುಬೇರ್ ಖಾನ್ (Imtiaz Mohammad Juber Khan) ಎಂದು ತಿಳಿದು ಬಂದಿದೆ. 11 ರಿಂದ 6 ವರ್ಷದೊಳಗಿನ ಮೂವರು ಮಕ್ಕಳು ಸೇರಿದಂತೆ ಗಾಯಾಳುಗಳನ್ನು ಒಂದೇ ಕುಟುಂಬದ ಸದಸ್ಯರಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯ!

ಗಾಯಗೊಂಡ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಕಮ್ರುಜ್ಮಾ ಅನ್ಸಾರಿಯ ಸಂಬಂಧಿಯಾದ  36 ವರ್ಷ ವಯಸ್ಸಿನ ಮಹಿಳೆ ಸೇರಿ ಕೆಲ ದಿನಗಳ ಹಿಂದೆ ಆರೋಪಿಯನ್ನು ಟೀಕಿಸಿ ಕೆಲವು ಮಾತಗಳನ್ನಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಕುಪಿತಗೊಂಡ ಆರೋಪಿ  ಬೆಳಗ್ಗೆ ತನ್ನ ಮನೆಯ ದ್ವಾರದಲ್ಲಿ ನಿಂತಿದ್ದ  ಕಮ್ರುಜ್ಮಾ ಅನ್ಸಾರಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಆತನ ನೆರೆಮನೆಯ ಇಮ್ತಿಯಾಜ್ ಖಾನ್ ಮಧ್ಯಪ್ರವೇಶಿಸಿದಾಗ ಆತನ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಮ್ರುಜ್ಮಾ ಅನ್ಸಾರಿ  ಕುಟುಂಬದ ನಾಲ್ವರೂ ಮೊಹಮ್ಮದ್ ಅನ್ಸಾರಿಯನ್ನು ತಡೆಯಲು ಯತ್ನಿಸಿದಾಗ ಅವರ ಮೇಲೂ ಆರೋಪಿ ಹಲ್ಲೆ ನಡೆಸಿದ್ದಾನೆ. ಘಟನೆಯ ನಂತರ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಶಾಂತಿ ಕಾಪಾಡಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚು ಆತ್ಮಹತ್ಯೆ: ಕರ್ನಾಟಕ ನಂ.5 - ಮಹಾರಾಷ್ಟ್ರ ನಂ.1

2020ರ ಸಾಲಿನಲ್ಲಿ ದೇಶದಲ್ಲಿ (India) ಪ್ರತಿನಿತ್ಯ 418 ಮಂದಿಯಂತೆ ಸರಾಸರಿ 1,53,052 ಮಂದಿ ಆತ್ಮಹತ್ಯೆಗೆ (Suicide) ಶರಣಾಗುತ್ತಿದ್ದಾರೆ ಎಂಬ ವಿಚಾರ ರಾಷ್ಟ್ರೀಯ ಅಪರಾಧ ದಾಖಲೆ( NCRB)ಗಳ ವಾರ್ಷಿಕ ವರದಿಯಿಂದ ತಿಳಿದು ಬಂದಿದೆ. ಹೆಚ್ಚು ಆತ್ಮಹತ್ಯೆಗೆ ಶರಣಾಗುವ ರಾಜ್ಯಗಳ (States) ಪಟ್ಟಿಯಲ್ಲಿ 12,259 ಸಾವು ದಾಖಲಿಸಿರುವ ಕರ್ನಾಟಕ (karnataka) 5ನೇ ಸ್ಥಾನದಲ್ಲಿದೆ ಹಾಗೂ 19,909 ಆತ್ಮಹತ್ಯೆ ಕೇಸ್‌ನೊಂದಿಗೆ ನೆರೆಯ ಮಹಾರಾಷ್ಟ್ರ (Maharashtra) ಅಗ್ರ ಸ್ಥಾನದಲ್ಲಿದೆ.

ಅಂಕೋಲಾ ಯುವತಿ ಹತ್ಯೆ​ಗೆ WhatsApp ಸ್ಟೇಟಸ್‌ ಕಾರ​ಣ

ಉಳಿದಂತೆ ತಮಿಳುನಾಡು (Tamilnadu) 16,883, ಮಧ್ಯಪ್ರದೇಶ 14,578, ಪಶ್ಚಿಮ ಬಂಗಾಳದಲ್ಲಿ (West bengal) 13,103 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ಮೂಲಕ ದೇಶದಲ್ಲಿ ದಾಖಲಾಗಿರುವ ಒಟ್ಟಾರೆ ಸೂಸೈಡ್‌ಗಳ ಪೈಕಿ ಈ ಐದು ರಾಜ್ಯಗಳಲ್ಲೇ ಶೇ.50.1ರಷ್ಟುಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇನ್ನು ಶೇ.49.9ರಷ್ಟುಮಂದಿ 23 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಖಲಾಗಿವೆ ಎಂದು ಎನ್‌ಸಿಆರ್‌ಬಿ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

Follow Us:
Download App:
  • android
  • ios