Bengaluruನಲ್ಲಿ 16 ವರ್ಷದ ಬಾಲಕಿಯನ್ನು ಬಲಿ ಪಡೆದ ಶಾಲಾ ಬಸ್!
- ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ
- ಶಾಲಾ ಬಸ್ ಹರಿದು 16 ವರ್ಷದ ಬಾಲಕಿ ದುರ್ಮರಣ
- ಬನಶಂಕರಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಘಟನೆ
ವರದಿ : ಚೇತನ್ ಮಹಾದೇವ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಮೇ.26): ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಶಾಲಾ (School) ಬಸ್ (Bus) ಹರಿದು 16 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಬಾಲಕಿಯನ್ನು ಹಾರೋಹಳ್ಳಿಯ ನಿವಾಸಿಯಾಗಿರುವ ಕೀರ್ತನ ಎಂದು ಗುರುತಿಸಲಾಗಿದೆ. ಬನಶಂಕರಿಯ (Banashankari) ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದ್ದು, ಡೆಲ್ಲಿ ಪಬ್ಲಿಕ್ ಸ್ಕೂಲ್ (Delhi Public school) ಗೆ ಸೇರಿದ ಬಸ್ ನಿಂದ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಹರ್ಷಿತ, ಕೀರ್ತನ , ದರ್ಶನ್ ಮೂವರು ಗೆಳೆಯರು ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಿದ್ದರು. ಈ ವೇಳೆ ಹಿಂದೆಯಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕೀರ್ತನಾ ಮೃತಪಟ್ಟಿದ್ದಾರೆ. ಬನಶಂಕರಿ ಸಂಚಾರಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tumakuru; ಇಂಗ್ಲಿಷ್ ಓದಲು ಕಷ್ಟವೆಂದು ಆತ್ಮಹತ್ಯೆಗೆ ಯತ್ನಿಸಿದ ಬಾಲಕ!
ಆಗಿದ್ದೇನು?: ಬೆಂಗಳೂರಿನ ನಾಯಂಡನಹಳ್ಳಿಯ ನಾಗರಾಜು ಹಾಗೂ ಇಂದ್ರಮ್ಮ ದಂಪತಿಯ ಮಗಳಾಗಿರೋ ಕೀರ್ತನ ಇಂದು ಬನಶಂಕರಿಯ ಕಿತ್ತೂರು ರಾಣಿ ಚೆನ್ನಮ್ಮ ಫ್ಲೈ ಓವರ್ ಬಳಿ ನಡೆದ ಸ್ಕೂಲ್ ಬಸ್ ಹಾಗೂ ಬೈಕ್ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ್ದಾಳೆ. ಕೀರ್ತನ ಇಂದು ಬೆಳಿಗ್ಗೆ ಕನಕಪುರ ರಸ್ತೆಯ ತನ್ನ ಅಕ್ಕನ ಮನೆಯಿಂದ ನಾಗರಬಾವಿಯತ್ತ ಅಕ್ಕ ಹರ್ಷಿತ ಹಾಗೂ ಸ್ನೇಹಿತ ದರ್ಶನ್ ಜೊತೆ ಬೈಕ್ ನಲ್ಲಿ ಹೊರಟಿದ್ದಳು. ಹೀಗೆ ಬೈಕ್ ನಲ್ಲಿ ರಿಂಗ್ ರೋಡ್ ಕಿತ್ತೂರು ರಾಣಿ ಚೆನ್ನಮ್ಮ ಫ್ಲೈ ಓವರ್ ಬಳಿ ಬರ್ತಿದ್ದ ವೇಳೆ ಹಿಂಬದಿಯಿಂದ ಬಂದ ಡೆಲ್ಲಿ ಪಬ್ಲಿಕ್ ಸ್ಕೂಲ್ ಬಸ್ ರಭಸವಾಗಿ ಬಂದು ಡಿಕ್ಕಿ ಹೊಡೆದಿದೆ. ಅಷ್ಟೇ ಬೈಕ್ ಹಿಂಬದಿ ಕೂತಿದ್ದ ಕೀರ್ತನಾ ರಸ್ತೆಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಳು.
ನಾನೇನಾದ್ರೂ ತಪ್ಪು ಮಾಡಿದ್ರೆ ದೇವರು ನನಗೆ ಶಿಕ್ಷೆ ನೀಡಲಿ; KS Eshwarappa
ಬಡತನವಿದ್ರೂ ಕೀರ್ತನಾ ಆಟ-ಪಾಠದಲ್ಲಿ ಟಾಪರ್..! : ಕೀರ್ತನಾ ಓದಿನಲ್ಲಿ ಟಾಪರ್ ಆಗಿದ್ದಳಂತೆ. ಅಪ್ಪ-ಅಮ್ಮನ ಕಷ್ಟವನ್ನ ಕಂಡು ಮರುಗುತ್ತಿದ್ದ ಕೀರ್ತನಾ ಅಮ್ಮಾ ಅಳಬೇಡಮ್ಮ ನಾನು ಓದಿ ದೊಡ್ಡವಳಾದ ಮೇಲೆ ಟೀಚರ್ ಆಗ್ತೀನಿ ಆಗ ನಿನ್ನನ್ನ ಚೆನ್ನಾಗಿ ನೋಡ್ಕೊಳ್ತೀನಿ ಅಂತಿದ್ದಳಂತೆ. ಇತ್ತೀಚಿಗೆ ಎಸ್ಎಸ್ ಎಲ್ ಸಿ ಎಕ್ಸಾಂ ನಲ್ಲಿ 70 ಪರ್ಸೆಂಟ್ ನಷ್ಟು ಅಂಕವನ್ನ ಪಡೆದು ಒಂದೊಳ್ಳೆ ಕಾಲೇಜು ಸೇರ್ಬೇಕು ಅಂತ ಅಂದುಕೊಂಡಿದ್ದಳು ಕೀರ್ತನಾ. ಅದರಂತೆ ಇಂದು ನಾಗರಬಾವಿಯ ಸರ್ಕಾರಿ ಕಾಲೇಜಿಗೆ ಅಡ್ಮಿಷನ್ ಆಗೋಕೆ ಅಕ್ಕನ ಜೊತೆ ಹೋಗ್ತಿದ್ದಳು. ಆದ್ರೆ, ವಿಧಿಯಾಟ ಕೀರ್ತನಳನ್ನ ಮಸಣ ಸೇರುವಂತೆ ಮಾಡಿದೆ.
Chikkamagaluru; ಕರ್ಕಶ ಶಬ್ದದ ಬೈಕಿನ ಸೈಲೆನ್ಸರ್ ನಾಶ ಪಡಿಸಿದ ಕಡೂರು ಪೊಲೀಸ್
ಕೀರ್ತನಾ ಸಾವಿಗೆ ಕಾರಣ ಬೇರ್ಯಾರು ಅಲ್ಲ ಅಜಾಗರೂಕತೆಯಿಂದ ಸ್ಕೂಲ್ ಬಸ್ ಓಡಿಸಿರೋ ಚಾಲಕನೇ ಈ ಸಾವಿಗೆ ಹೊಣೆ. ಸದ್ಯ ಪ್ರಕರಣ ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸ್ರು ಅಪಘಾತಕ್ಕೆ ಕಾರಣವಾದ ಸ್ಕೂಲ್ ಬಸ್ ಚಾಲಕನ ಬೇಟೆಗೆ ಬಲೆಬೀಸಿದ್ದಾರೆ. ಇನ್ನು ಕೀರ್ತನಾ ಜೊತೆ ಬೈಕ್ ನಲ್ಲಿ ಹೋಗ್ತಿದ್ದ ದರ್ಶನ್ ಹಾಗೂ ಹರ್ಷಿತಾಗೆ ಸಣ್ಣಪುಟ್ಟ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.