Tumakuru; ಇಂಗ್ಲಿಷ್‌ ಓದಲು ಕಷ್ಟವೆಂದು ಆತ್ಮಹತ್ಯೆಗೆ ಯತ್ನಿಸಿದ ಬಾಲಕ!

  • ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ 7ನೇ ತರಗತಿ ಬಾಲಕ
  • ತುಮಕೂರಿನ ಊರ್ಡಿಗೆರೆಯಲ್ಲಿ ಘಟನೆ
  • ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ, ಪ್ರಾಣಾಪಾಯದಿಂದ ಪಾರಾದ ಬಾಲಕ 
     
Tumakuru 6th standard student  attempted suicide by fearing English gow

ವರದಿ : ಮಹಂತೇಶ್‌ ಕುಮಾರ್‌ ಏಷ್ಯನೆಟ್‌ ಸುವರ್ಣ ನ್ಯೂಸ್‌

ತುಮಕೂರು (ಮೇ.26): ಇಂಗ್ಲಿಷ್‌ (English) ಪಾಠ ಕಲಿಯಲು ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ 7ನೇ ತರಗತಿಯ ವಿದ್ಯಾರ್ಥಿಯೋರ್ವ (student ) ವಿಷಸೇವಿಸಿ ಆತ್ಮಹತ್ಯೆ (Suicide) ಯತ್ನ ನಡೆಸಿದ ಘಟನೆ ತುಮಕೂರು (Tumakuru) ತಾಲ್ಲೂಕಿನ ಊರ್ಡಿಗೆರೆ ಗ್ರಾಮದಲ್ಲಿ ನಡೆದಿದೆ. ತುಮಕೂರಿನ ಕೋತಿತೋಪು ನಿವಾಸಿಗಳಾದ ಸೋಮಶೇಖರ್‌, ಜಯಮ್ಮ ದಂಪತಿಯ ಮಗನೇ ಅಜಯ್‌ ಆತ್ಮಹತ್ಯೆಗೆ ಯತ್ನಿಸಿದ ಬಾಲಕ. ತುಮಕೂರು ನಗರದ ಕೋತಿತೋಪು ಸರ್ಕಾರಿ ಶಾಲೆಯಲ್ಲಿ  6ನೇ ತರಗತಿವರೆಗೂ ವ್ಯಾಸಂಗ ಮಾಡಿರುವ ಅಜಯ್‌, ಆದರೆ ಉದ್ಯೋಗದ ನಿಮಿತ ಅಜಯ್‌ ಪೋಷಕರು ಊರ್ಡಿಗೆರೆ ಶಿಫ್ಟ್‌ ಆಗಿದ್ದಾರೆ. ಅದರಂತೆ ಅಜಯ್‌ ಕೂಡ ಕೋತಿತೋಪು ಸರ್ಕಾರಿ ಶಾಲೆಯಿಂದ ಊರ್ಡಿಗೆರೆ ಶಾಲೆಗೆ ಸೇರ್ಪಡೆಗೊಂಡಿದ್ದಾನೆ. 

ಈ ತಿಂಗಳ 16ರಂದು  ಶಾಲೆ (School) ಪ್ರಾರಂಭವಾಗಿದೆ, ಒಂದೇರಡು ದಿನ ಶಾಲೆಗೆ ಹೋದ ಅಜಯ್‌ ಮತ್ತೆ ತರಗತಿಗೆ ಹೋಗದಂತೆ ಹಿಂದೇಟು ಹಾಕಿದ್ದಾನೆ. ಪೋಷಕರು ಎಷ್ಟೇ ಹೇಳಿದರು ಶಾಲೆಯ ಮೆಟ್ಟಿಲು ಹತ್ತುವುದಿಲ್ಲವೆಂದು ಪಟ್ಟು ಹಿಡಿದ್ದಾನೆ. ಕೊನೆಗೆ ಪೋಷಕರು ಶಾಲೆಗೆ ಹೋಗುವಂತೆ ಒತ್ತಡ ಹೇರಿದ ಪರಿಣಾಮ, ನಿನ್ನೆ ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಗಿಡಕ್ಕೆ ಹೊಡೆಯುವ ಕ್ರಿಮಿನಾಶಕವನ್ನು ಸೇವಿಸಿದ್ದಾನೆ.  ವಿಷ ಸೇವಿಸಿದ ಅಜಯ್‌ ಗೆ ವಾಂತ ಹಾಗೂ ತಲೆ ಸುತ್ತ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾನೆ. 

ನಾನೇನಾದ್ರೂ ತಪ್ಪು ಮಾಡಿದ್ರೆ ದೇವರು ನನಗೆ ಶಿಕ್ಷೆ ನೀಡಲಿ; KS Eshwarappa

ಕೂಡಲೇ ಪೋಷಕರು ಅಜಯ್‌ ಅನ್ನು ತುಮಕೂರು ಜಿಲ್ಲಾಸ್ಪತ್ರೆಗೆ  (Tumakuru district Hospital ) ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು (Doctor) ಸೂಕ್ತ ಚಿಕಿತ್ಸೆ ನೀಡಿ ವಿದ್ಯಾರ್ಥಿಯ ಜೀವ ಉಳಿಸಿದ್ದಾರೆ. ಅಜಯ್‌ ಸದ್ಯ ತುಮಕೂರು ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್‌ ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಬಾಲಕನ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದ ತುಮಕೂರು ಜಿಲ್ಲಾಸ್ಪತ್ರೆಗೆ ಬಿಇಒ ಹನುಮನಾಯಕ್‌ ಭೇಟಿ ಮಾಡಿ ಅಜಯ್‌ ಗೆ ಧೈರ್ಯ ತುಂಬಿದ್ದಾರೆ. ಜೊತೆಗೆ ವೈದ್ಯರೊಂದಿಗೆ ಮಾತುಕತೆ ನಡೆಸಿ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದ್ದಾರೆ. 

ಬಾಲಕ ಅಜಯ್‌ ಮಾಡಿಕೊಂಡ ಯಡವಟ್ಟಿನಿಂದ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಪೋಷಕರು ಕಂಗಾಲಾಗಿ ಹೋಗಿದ್ದಾರೆ.  ಇನ್ನೊಂದೆಡೆ ಶಾಲೆಯಲ್ಲೂ ಕೂಡ ಉತ್ತಮ ವಾತವರಣವಿದ್ದು, ಶಿಕ್ಷಕರು ವಿದ್ಯಾರ್ಥಿಗೆ ಹೊಯುವುದು ಹಾಗೂ ಬೈಯುವುದು ಕೂಡ ಮಾಡಿಲ್ಲ, ಆದ್ರೂ ಅಜಯ್‌ ಭಯಗೊಂಡು ಈ ರೀತಿ ಮಾಡಿಕೊಂಡಿದ್ದಾನೆ.

Udupi ; ಕೊಲ್ಲೂರು ವ್ಯಾಪ್ತಿಯಲ್ಲಿ ಡೆಂಗ್ಯೂ ನಿರ್ಮೂಲನಕ್ಕೆ ಅವಿರತ ಶ್ರಮ 

Latest Videos
Follow Us:
Download App:
  • android
  • ios