ನಾನೇನಾದ್ರೂ ತಪ್ಪು ಮಾಡಿದ್ರೆ ದೇವರು ನನಗೆ ಶಿಕ್ಷೆ ನೀಡಲಿ; KS Eshwarappa
- ಸಚಿವ ಸಂಪುಟ ಸೇರಿಸೋದು, ಬಿಡೋದು ಹೈಕಮಾಂಡ್ ಗೆ ಬಿಟ್ಟಿದ್ದು
- ಕೇಂದ್ರ ನಾಯಕರ ನಿರ್ಧಾರಕ್ಕೆ ನಾವು ಬದ್ಧ ಎಂದ ಈಶ್ವರಪ್ಪ
- ವಿಜಯೇಂದ್ರಗೆ ಟಿಕೆಟ್ ತಪ್ಪಿದ್ದನ್ನ ಕೇಳಿದ್ದಕ್ಕೆ ಮಾಧ್ಯಮಗಳ ಮೇಲೆ ಈಶ್ವರಪ್ಪ ಗರಂ
- ದೇವರು, ಧರ್ಮ ವಿಷಯದಲ್ಲಿ ದೇವೇಗೌಡರ ವಂಶ ನನಗೂ ಒಂದು ಆದರ್ಶ
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ನನ್ಯೂಸ್
ಬಾಗಲಕೋಟೆ (ಮೇ.26): ನಾನು ಚಾಮುಂಡೇಶ್ವರಿ (chamundeshwari) ದೇವಸ್ಥಾನಕ್ಕೆ (Temple) ಹೋಗಿ ಬಂದೆ, ಚೌಡೇಶ್ವರಿ (chowdeshwari) ನನ್ನ ಮನೆ ದೇವರು, ನಾನೇನಾದ್ರೂ ತಪ್ಪು ಮಾಡಿದ್ರೆ ಚೌಡೇಶ್ವರಿ ನನಗೆ ಶಿಕ್ಷೆ ನೀಡಲಿ, ನಾನು ತಪ್ಪು ಮಾಡಿಲ್ಲ ಅಂದ್ರೆ ಶಿಕ್ಷೆಯಿಂದ ಹೊರಬರಲಿ, ಇದು ನನ್ನ ನಂಬಿಕೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದರು.
ಅವರು ಬಾಗಲಕೋಟೆಯಲ್ಲಿ (Bagalkote) ಮಾಧ್ಯಮಗಳೊಂದಿಗೆ ಮಾತನಾಡಿ, ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಕೇಸ್ (santhosh suicide case) ನಡೆಯುತ್ತಿರೋ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಈ ಪ್ರಕರಣದಲ್ಲಿ ಇನ್ನೊಂದು ವಾರ ಅಥವಾ 15 ದಿನದಲ್ಲಿ ಒಂದು ರೂಪ ಬರುತ್ತೇ ಅಂದುಕೊಂಡಿದ್ದೀನಿ. ಸಚಿವ ಸಂಪುಟ ಸೇರಿಸೋದು, ಬಿಡೋದು ಹೈಕಮಾಂಡ್ ಗೆ ಬಿಟ್ಟಿದ್ದು. ಮೇಲಾಗಿ ನಾನು ಕೇಂದ್ರ ನಾಯಕರ ನಿರ್ಧಾರಕ್ಕೆ ನಾವು ಬದ್ಧ ಎಂದರು.
ನಾವು ಪಕ್ಷದಲ್ಲಿ ಶಿಸ್ತಿನ ಸಿಪಾಯಿಗಳು, ನಾವು ಸೀಟ್ ಗಾಗಿ ಬಡಿದಾಡೋರಲ್ಲ. ಅವರಂತೆ ಸಿದ್ದು ಗುಂಪು, ಡಿಕೆಶಿ ಗುಂಪು, ನಮ್ಮಲ್ಲಿ ಇಲ್ಲ. ನಮ್ಮಲ್ಲಿ ಕೇಂದ್ರ ನಾಯಕರ ನಿರ್ಧಾರಕ್ಕೆ ನಾವೆಲ್ಲಾ ಬದ್ಧ, ನೂರಕ್ಕೆ ನೂರು ದೇವರ ಮೇಲಿನ ನಂಬಿಕೆ ಇದೆ, ಮತ್ತು ನಂಬುತ್ತೇನೆ. ನನ್ನ ಮನೆ ದೇವರು ಚೌಡೇಶ್ವರಿ ಮೇಲೆ ನನಗೆ ಬಹಳ ನಂಬಿಕೆ ಇದೆ. ಬೀರೇಶ್ವರ ಸಹ ನಮ್ಮ ಮನೆ ದೇವ್ರು, ನನಗೆ ನಂಬಿಕೆ ಇದೆ. ಯಾವುದೇ ಕಳಂಕ ಇಲ್ಲದೆ ಹೊರಗೆ ಬರುತ್ತೇನೆ. ಸಚಿವ ಸ್ಥಾನ ಕೇಂದ್ರ ನಾಯಕರಿಗೆ ಬಿಟ್ಟಿದ್ದು ಎಂದು ಹೇಳಿದರು.
Chikkamagaluru; ಕರ್ಕಶ ಶಬ್ದದ ಬೈಕಿನ ಸೈಲೆನ್ಸರ್ ನಾಶ ಪಡಿಸಿದ ಕಡೂರು ಪೊಲೀಸ್
ವಿಜಯೇಂದ್ರಗೆ ಟಿಕೆಟ್ ತಪ್ಪಿದ್ದನ್ನ ಕೇಳಿದ್ದಕ್ಕೆ ಮಾಧ್ಯಮಗಳ ಮೇಲೆ ಈಶ್ವರಪ್ಪ ಗರಂ: ಯಡಿಯೂರಪ್ಪ (yediyurappa ) ಪುತ್ರ ಬಿ.ವೈ.ವಿಜಯೇಂದ್ರಗೆ (by vijayendra) ಎಮ್. ಎಲ್. ಸಿ (MLC) ಟಿಕೆಟ್ ತಪ್ಪಿದ ವಿಚಾರವಾಗಿ ಪತ್ರಕರ್ತರು ಪ್ರಶ್ನೆ ಕೇಳುತ್ತಲೇ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗರಂ ಆದರು. ಯಾಕೆ ಅದೊಂದನ್ನೇ ಕೇಳ್ತಿರಿ ಎಂದ ಈಶ್ವರಪ್ಪ, ಲಕ್ಷಾಂತರ ಜನರು ಟಿಕೆಟ್ ತಪ್ಪಿದವರು ಇದ್ದಾರೆ. ಯಡಿಯೂರಪ್ಪ, ವಿಜಯೇಂದ್ರ ಸ್ಪಷ್ಟವಾಗಿ ಹೇಳಿದ್ದಾರೆ. ಕೇಂದ್ರ ನಾಯಕರ ತೀರ್ಮಾನಕ್ಕೆ ಬದ್ದ ಅಂತ ಹೇಳಿದ್ದಾರೆ, ಅಷ್ಟಕ್ಕೆ ನೀವು ವಿಜಯೇಂದ್ರ ನೆನಪು ಮಾಡ್ತೀರಿ. ರಾಘವೇಂದ್ರ ದೇವರು ಅಂತ ನೆನಪು ಮಾಡಿಕೊಂಡ ಹಾಗಾಯ್ತು ನಿಮ್ದು ಎಂದರು. ಎಷ್ಟು ಜನರು ಅರ್ಜಿ ಹಾಕಿದ್ದಾರೆ. ಅವರ ಬಗ್ಗೆ ಯಾಕೆ ಕೇಳೋದಿಲ್ಲ. 30-40 ವರ್ಷ ಕೆಲಸ ಮಾಡಿದ ಕಾರ್ಯಕರ್ತರಿಗೆ ಟಿಕೆಟ್ ಸಿಕ್ಕಿಲ್ಲ. ಅವರೆಲ್ಲ ಸುಮ್ಮನಿದ್ದಾರೆ ಇಲ್ವೊ. ನಮ್ಮ ಲಿಂಗರಾಜ ಪಾಟೀಲ್ ಕೂಡ ಟಿಕೆಟ್ ಸಿಗದಿದ್ದಕ್ಕೆ ಸುಮ್ಮನಿದ್ದಾರೆ. ಅವರ ಬಗ್ಗೆ ಯಾಕೆ ಕೇಳ್ತಿಲ್ಲ. ನಿಮಗೂ ರಾಜಕೀಯ ಮಾಡುವ ಚಟ ಎಂದು ಮಾದ್ಯಮದವರ ಪ್ರಶ್ನೆಗೆ ಗರಂ ಆಗಿ ಉತ್ತರಿಸಿದರು.
ಯಾರು ಈ ದೇಶವನ್ನ ಹಾಳು ಮಾಡಿದರೋ ಅವರದೇ ಪಠ್ಯ ಇರಬೇಕೆನ್ನೋದು ವಿಪಕ್ಷಗಳ ಆಸೆ :
ಪಠ್ಯಪುಸ್ತಕದಲ್ಲಿ (Textbook) ಹೆಡ್ಗೇವಾರ್ (hedgewar) ಭಾಷಣ ಸೇರಿದ್ದಕ್ಕೆ ವಿರೋಧದ ವಿಚಾರವಾಗಿ ಮಾತನಾಡಿ, ದೇಶದ ಸಂಸ್ಕೃತಿ ವಿಚಾರದಲ್ಲಿ ಹೆಡ್ಗೇವಾರ್ ಮಾಡಿರುವ ಭಾಷಣದ ಒಂದಂಶವನ್ನು ಸೇರಿಸಲಾಗಿದೆ. ಪಠ್ಯದಲ್ಲಿ ಮಹಮ್ಮದ್ ಅಲಿ ಜಿನ್ನಾ ಹೆಸರು ಸೇರಿಸಬೇಕಿತ್ತಾ? ಈಶ್ವರ ಲಿಂಗ ಒಡೆದ ಔರಂಗಜೇಬನ ಹೆಸರು ಸೇರಿಸಬೇಕಿತ್ತಾ? ಪಠ್ಯದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್, ಅಲೆಗ್ಸಾಂಡರ್ ದಿ ಗ್ರೇಟ್ ಇವುಗಳನ್ನು ನಮ್ಮ ಮಕ್ಕಳು ಓದುತ್ತಿದ್ದರು. ಯಾರು ನಮ್ಮ ದೇಶವನ್ನು ಹಾಳು ಮಾಡಿದ್ರೋ, ನಮ್ಮ ಸಂಸ್ಕೃತಿಯನ್ನು ಒಡೆದು ಪುಡಿ ಪುಡಿ ಮಾಡಿದ್ರೋ, ಅಂಥವರ ವೈಭವೀಕರಣ ನಮ್ಮ ಪಠ್ಯದಲ್ಲಿ ಇತ್ತು. ಭಗತ್ ಸಿಂಗ್ (bhagat singh) ಪಠ್ಯ ತೆಗೆದಿದ್ದು ಸುಳ್ಳು. ನಾರಾಯಣ್ ಗುರು ವಿಚಾರ ತೆಗೆದಿದ್ದು ಸುಳ್ಳು. ಹೆಡ್ಗೇವಾರ್ ಹೆಸರು ಹೇಳ್ತಿದ್ದಾರೆ ಸುಳ್ಳು.
Udupi ; ಕೊಲ್ಲೂರು ವ್ಯಾಪ್ತಿಯಲ್ಲಿ ಡೆಂಗ್ಯೂ ನಿರ್ಮೂಲನಕ್ಕೆ ಅವಿರತ ಶ್ರಮ
1925 ರಲ್ಲಿ ಹಿಂದೂ ಸಮಾಜ ಒಂದು ಮಾಡುವ ಪ್ರಯತ್ನವನ್ನು ಹಡ್ಗೇವಾರ್ ಮಾಡಿದ್ರು. ಹೆಡ್ಗೇವಾರ್ ವಿಚಾರ ಹರಡದೇ ಇದ್ದಿದ್ರೇ ಈ ದೇಶ ತುಂಡು ತುಂಡಾಗಿ ಹೋಗ್ತಿತ್ತು. ಹಿಂದುತ್ವ ಇಷ್ಟೂ ಜಾಗೃತವಾಗಿರೋವಾಗಲೇ ರಾಷ್ಟ್ರದ್ರೋಹಿಗಳು, ಭಯೋತ್ಪಾದಕರು ಆಟ ಆಡ್ತಿದ್ದಾರೆ. ವಿಚಾರವಾದಿಗಳು ಅಂತಾ ಹೇಳಿಕೊಂಡು ತಿರುಗಾಡೋರಿಗೆ ಅದೇ ಆನಂದ, ಟಿಪ್ಪು ಸುಲ್ತಾನ್ (Tipu Sultan) ಬಗ್ಗೆ ಹೇಳಿದ್ರೆ ಅದೇ ಆನಂದ ಯಾರು ಈ ದೇಶವನ್ನು ಹಾಳು ಮಾಡಿದ್ರೋ ಅವ್ರದೇ ಪಠ್ಯ ಇರಬೇಕೆನ್ನುವ ಆಸೆ ಅವ್ರದು ಎಂದರು.
ಇನ್ನು ವಿಚಾರವಾದಿಗಳ ವಿಚಾರವನ್ನು ನಾವು ಇಷ್ಟು ದಿನ ವಿರೋಧ ಮಾಡಲಿಲ್ಲ. ಪಠ್ಯ ಪುಸ್ತಕ ರಚನಾ ಸಮಿತಿ ರಾಷ್ಟ್ರಭಕ್ತಿಯನ್ನು ಮಕ್ಕಳಿಗೆ ಹೇಳಿಕೊಡಲು ತೀರ್ಮಾನ ಮಾಡಿದೆ. ಹಾಗಾಗಿ ರಾಷ್ಟ್ರೀಯ ಮಹಾನ್ ಪುರುಷರ ವಿಚಾರವನ್ನು ಮುಂದುವರೆಸಲಾಗ್ತಿದೆ ತಪ್ಪೇನು? ಸಂವಿಧಾನ ಬದ್ಧವಾಗಿ ಬಡೆಯುತ್ತಿರೋದನ್ನು ಎಲ್ಲರೂ ಒಪ್ಪಿಕೋಬೇಕು. ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕು ಅಂತಾ ನಮ್ಮ ಸರ್ಕಾರ ತೀರ್ಮಾನ ಮಾಡಿದೆ. ಇದನ್ನ ಸಿದ್ದರಾಮಯ್ಯ, ಡಿಕೆಶಿ ವಿರೋಧ ಮಾಡಲ್ಲ ಅಂತ ನಾವೇನು ಅಂದುಕೊಂಡಿರಲಿಲ್ಲ. ಸ್ವಲ್ಪ ಸ್ವಲ್ಪ ವಿರೋಧ ಮಾಡ್ತಿದ್ದಾರೆ, ಇದನ್ನ ನೋಡಿದ್ರೆ ಅವ್ರಲ್ಲಿ ಒಗ್ಗಟ್ಟಿಲ್ಲ. ಇಲ್ಲಾಂದಿದ್ರೆ ಅದಕ್ಕೊಂದು ಮೆರವಣಿಗೆ ಮಾಡಿರೋರು ಯಾಕಂದ್ರೆ ಅವರಿಗೆ ಉದ್ಯೋಗ ಇಲ್ವಲ್ಲ. ಮೇಕೆದಾಟು ನಾಲ್ಕು ದಿನ ಹೋರಾಡಿದರು. ಇವರಿಗೆ ದೇಶ ಬೇಡ ಯಾರೂ ಬೇಡ ಹಿಜಾಬ್ ಹಿಡ್ಕೊಂಡು ಹೋದರು. ದೇಶದಲ್ಲಿ ಹಿಂದೂ ಸಮಾಜ, ರಾಷ್ಟ್ರಭಕ್ತಿ ಜಾಗೃತಿ ಆಗಿದೆ. ಇದನ್ನು ಜನ ಮೆಚ್ಚುತ್ತಿದ್ದಾರೆ. ಯುಪಿಯಲ್ಲಿ ೩೯೪ ಸೀಟ್ ನಲ್ಲಿ ಡಿಪಾಸಿಟ್ ಕಳೆದುಕೊಂಡರು ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದರು.
ದೇವರು, ಧರ್ಮ ವಿಷಯದಲ್ಲಿ ದೇವೇಗೌಡರ ವಂಶ: ತಾಂಬೂಲ ಪ್ರಶ್ನೆ ವಿಚಾರವಾಗಿ ರಾಜ್ಯದ ಜನರ ಮೇಲೆ ಮೂಢನಂಬಿಕೆ ಹೇರುತ್ತಿದ್ದಾರೆಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ಮಾಜಿ ಸಚಿವ ಈಶ್ವರಪ್ಪ, ದೇವೇಗೌಡರ ವಂಶ ನನಗೂ ಒಂದು ಆದರ್ಶ. ದೇವರು, ಧರ್ಮದ ಬಗ್ಗೆ ಆ ವಂಶ ಇಟ್ಟುಕೊಂಡ ನಂಬಿಕೆಯನ್ನ ಎಲ್ಲಾ ಕುಟುಂಬ ಇಟ್ಟುಕೊಳ್ಳಬೇಕು. ರಾಜಕಾರಣಕ್ಕಾಗಿ ಕುಮಾರಸ್ವಾಮಿ ಏನೋ ಒಂದು ಹೇಳಿದ್ರೆ ನಾನು ಟೀಕೆ ಮಾಡಲ್ಲ. ಮಸೀದಿ ರಿಪೇರಿ ಮಾಡೋವಾಗ ದೇವರುಗಳ ಸಿಕ್ಕಿದೆ. ಅದೇ ಚರ್ಚೆ ನಡೆಯುತ್ತಿದೆ ಎಂದ ಅವರು, ಕುಮಾರಸ್ವಾಮಿ ತಂದೆ ದೇವೇಗೌಡರು ಒಳ್ಳೆಯ ಕೆಲಸ ಮಾಡಿದ್ದಾರೆ.
ದೇವೇಗೌಡರ ಬಗ್ಗೆ ಹೆಚ್ಚು ಟೀಕೆ ಮಾಡೋಕೆ ಹೋಗಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಪ್ರವಾಸ ಮಾಡಿ ಅಭಿವೃದ್ಧಿ ಮಾಡಿದ್ದು ದೇವೇಗೌಡ & ಯಡಿಯೂರಪ್ಪ. ಇನ್ನು ಕುಮಾರಸ್ವಾಮಿ ಅವರ ಮನೆಯಲ್ಲಿನ ದೇವಸ್ಥಾನ ಪುಡಿ ಮಾಡಿದ್ರೆ ಸುಮ್ಮನಿರುತ್ತಿದ್ದಾರಾ..? ಕಾಶಿ, ಮಥುರಾ ಬಗ್ಗೆ ಮೊದಲು ಸರಿಯಾಗಿ ತಿಳಿದುಕೊಳ್ಳಲಿ. ರಾಮ ಮಂದಿರ ಬಗ್ಗೆ ಟೀಕೆ ಮಾಡಿದರು. ಇವತ್ತಲ್ಲ ನಾಳೆ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತೆ. ಅದೇ ಕುಮಾರಸ್ವಾಮಿ, ಡಿಕೆಶಿ, ಸಿದ್ದರಾಮಯ್ಯ ದೇವೇಗೌಡರು ಅದೇ ರಾಮ ಮಂದಿರಕ್ಕೆ ಹೋಗಿ ದರ್ಶನ ಮಾಡೋ ಕಾಲ ದೂರವಿಲ್ಲ.
ಮೊನ್ನೆ ಡಿಕೆಶಿ ದಂಪತಿ ಸಮೇತ ಕೇದಾರನೋ ಎಲ್ಲೋ ದೇಗುಲಕ್ಕೆ ಹೋಗಿದ್ರು ಸಂತೋಷವಾಗಿದೆ. ಮುಸ್ಲಿಂ ಓಟ್ ಬೇಕು ಟೀಕೆ ಮಾಡಲಿ, ಆದ್ರೆ ತಾನೊಬ್ಬ ಹಿಂದೂ ಅನ್ನೋ ಮನೋಭಾವನೆ ಇದೆಯಲ್ಲಾ. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆಶಿ ಅವರಲ್ಲಿ ಒಳಗಡೆ ದೈವಭಕ್ತಿ ಇದೆ. ಮುಸ್ಲಿಂರ ಓಟ್ ಗಾಗಿ ನಾಟಕ ಮಾಡ್ತಿದ್ದಾರೆ ಮಾಡಲಿ ಎಂದು ಬಾಗಲಕೋಟೆಯಲ್ಲಿ ಮಾಜಿ ಸಚಿವ ಈಶ್ವರಪ್ಪ ಹೇಳಿದರು.